ಸಾರಾಂಶ
ವಿವಿಧ ಬೇಡಿಕೆಗಾಗಿ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಕೃಷಿಕರ ಪ್ರತಿಭಟನೆ ಬೆಂಬಲಿಸಿ, ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದ ವತ್ತದಲ್ಲಿ ಮಂಗಳವಾರರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಕಾರಿಪುರ ಮತ್ತು ಸೊರಬ ತಾಲೂಕುಗಳ ಪದಾಧಿಕಾರಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಶಿರಾಳಕೊಪ್ಪ: ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಮಂಗಳವಾರ ವಿವಿಧ ಬೇಡಿಕೆಗಾಗಿ ಆಗ್ರಹಿಸಿ ದೆಹಲಿಯಲ್ಲಿ ನಡೆಯುತ್ತಿರುವ ಕೃಷಿಕರ ಪ್ರತಿಭಟನೆ ಬೆಂಬಲಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಕಾರಿಪುರ ಮತ್ತು ಸೊರಬ ತಾಲೂಕುಗಳ ಪದಾಧಿಕಾರಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟನಗೌಡ ಮಾತನಾಡಿ, ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದೇ, ರೈತವಿರೋಧಿ ನೀತಿ ಅನುಸರಿಸುತ್ತಿದೆ. ಕಳೆದೊಂದು ವಾರದಿಂದ ರೈತರ ಮೇಲೆ ನಿರಂತರ ಅಶ್ರುವಾಯು ಸಿಡಿಸಿ, ದೆಹಲಿ ಪ್ರವೇಶ ನಿರ್ಬಂಧಿಸಿದ್ದಾರೆ. ರಸ್ತೆಗಳಿಗೆ ಮಳೆ ಜೋಡಿಸಿ, ರೈತ ಚಳವಳಿಗಾರರು ಒಳಬಾರದಂತೆ ತಡೆಹಿಡಿದಿದ್ದಾರೆ. ಘಟನೆಯಲ್ಲಿ ಒಬ್ಬ ರೈತ ಹುತಾತ್ಮ ಆಗಿದ್ದರೂ ಸರ್ಕಾರ, ಜನಪ್ರತಿನಿಗಳು ರೈತರ ಬೆಂಬಲಕ್ಕೆ ನಿಲ್ಲದಿರುವುದು ದುರಾದಷ್ಠಕರ ಎಂದರು.
ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ವೀರಪ್ಪ ಮಾತನಾಡಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಎಸ್.ಎಸ್.ಪಿ. ಕಾನೂನಾತ್ಮಕವಾಗಿಸಿ ರೈತಾಪಿ ಜನರ ಆರ್ಥಿಕ ಯೋಗಕ್ಷೇಮ ಕಾಪಾಡಿಕೊಳ್ಳಲು ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಚೌಕಟ್ಟಿಗೆ ತರಬೇಕು, ಅಗತ್ಯ ವಸ್ತುಗಳ ಕಾಯ್ದೆ, ಪಿಎಂಪಿ ಕಾಯ್ದೆ ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದು ಎಂದರು. ಜಿಲಾ ಉಪಾದ್ಯಕ್ಷ ಕೊಟ್ರೇಶ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಹಾಲಪ್ಪಗೌಡ ಕವುಡಿ, ತಾಲೂಕು ಕಾರ್ಯದರ್ಶಿ ರಾಜು ಹೊಸಮನಿ, ಶಿವಯೋಗಪ್ಪ, ಹನುಮಂತ ರಾವ್ ಹರಗುವಳ್ಳಿ, ನಯಾನ್ ಬಾಷಾ ಇನ್ನಿತರರು ಇದ್ದರು. - - -