ಬಾಂಗ್ಲಾದಲ್ಲಿನ ಹಿಂದೂಗಳ ದೌರ್ಜನ್ಯ ಖಂಡಿಸಿ ಮಾನವ ಸರಪಳಿ ಪ್ರತಿಭಟನೆ

| Published : Aug 14 2024, 12:51 AM IST

ಬಾಂಗ್ಲಾದಲ್ಲಿನ ಹಿಂದೂಗಳ ದೌರ್ಜನ್ಯ ಖಂಡಿಸಿ ಮಾನವ ಸರಪಳಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಹಿತರಕ್ಷಣಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಮಾನವ ಸರಪಳಿಯ ಮೂಲಕ ಪ್ರತಿಭಟನೆ ಬೆಳ್ತಂಗಡಿಯಲ್ಲಿ ನಡೆಯಿತು.

ಬೆಳ್ತಂಗಡಿ: ಬಾಂಗ್ಲಾ ದೇಶದಲ್ಲಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿ, ಜನ ಜಾಗೃತಿಗಾಗಿ ಹಿಂದೂ ಹಿತರಕ್ಷಣಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಮಾನವ ಸರಪಳಿಯ ಮೂಲಕ ಪ್ರತಿಭಟನೆ ಬೆಳ್ತಂಗಡಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಮಾತನಾಡಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹತ್ಯೆ, ಅತ್ಯಾಚಾರ, ಹಿಂಸೆ ಹಿಂದುಗಳಿಗೆ ನೋವು ತಂದಿದ್ದು ಹಿಂದೂ ಸಮಾಜ ಈ ಘಟನೆಯನ್ನು ಖಂಡಿಸುತ್ತದೆ. ವಿಶ್ವ ಸಂಸ್ಥೆ ಹಾಗೂ ಈ ದೇಶದ ಪ್ರಧಾನಿಯವರು ಹಿಂದೂಗಳ ರಕ್ಷಣೆಗೆ ಧಾವಿಸಬೇಕು ಎಂದರು.

ಅತಿ ಹೆಚ್ಚು ಮುಸ್ಲಿಮರಿರುವ ಗಾಜಾಪಟ್ಟಿಯ ಮೇಲೆ ಇಸ್ರೇಲ್ ದಾಳಿ ಮಾಡಿದಾಗ ಈ ದೇಶದ ವಿಪಕ್ಷ ನಾಯಕ ರಾಹಲ್ ಗಾಂಧಿಯವರಿಗೆ ಕಣ್ಣೀರು ಬರುತ್ತೆ, ಹೇಳಿಕೆ ಕೂಡ ನೀಡುತ್ತೀರಿ. ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲೆ ಹಿಂಸೆ, ಹತ್ಯೆಯಾದಾಗ ನಿಮಗೆ ನೋವಾಗುವುದಿಲ್ಲ ಎಂದು ಟೀಕಿಸಿದರು.

ಹಿಂದೂ ಮುಖಂಡ ನವೀನ್ ನೆರಿಯ ಮಾತನಾಡಿದರು. ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಜಯಾನಂದ ಗೌಡ, ಪ್ರಜ್ವಲ್, ವಿಶ್ವನಾಥ ಹೊಳ್ಳ, ರಕ್ಷಿತ್ ಶೆಟ್ಟಿ ಪದ್ಮುಂಜ, ರವಿ ಕುಮಾರ್ ಬರಮೇಲು, ಉಮೇಶ್ ಕುಲಾಲ್ ಗುರುವಾಯನಕೆರೆ, ಗಣೇಶ್ ಮುಂಡಾಜೆ, ಶರತ್ ಶೆಟ್ಟಿ, ಗಣೇಶ್ ಗೌಡ ನಾವೂರು, ಹಿಂದೂ ಮುಖಂಡರಾದ ನವೀನ್ ನೆರಿಯಾ, ಮೋಹನ್ ಬೆಳ್ತಂಗಡಿ, ಸಂತೋಷ್ ಕುಮಾರ್ ಕಾಪಿನಡ್ಕ, ಸೀತರಾಮ್ ಬೆಳಾಲ್, ಅನಿಲ್ ಕುಮಾರ್ ಯು., ದಿನೇಶ್ ಚಾರ್ಮಾಡಿ, ಕೊರಗಪ್ಪ ನಾಯ್ಕ್ ಧರ್ಮಸ್ಥಳ, ರಮೇಶ್ ಧರ್ಮಸ್ಥಳ, ಸಂತೋಷ್ ಅತ್ತಾಜೆ, ಈಶ್ವರ ಬೈರ, ಪದ್ಮನಾಭ ಅರ್ಕಜೆ, ನಂದ ಕುಮಾರ್ ಹಾಗೂ ಹಿಂದೂ ಮುಖಂಡರು ಮೊದಲಾದವರು ಇದ್ದರು‌.