ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ನೂರಾರು ಕಾರ್ಯಕರ್ತರು

| Published : Mar 22 2024, 01:02 AM IST

ಸಾರಾಂಶ

ತಾಲೂಕಿನ ಹೊಸಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಮ್ಮುಖದಲ್ಲಿ ನೂರಾರು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಕನ್ನಡಪ್ರಭ ವಾರ್ತೆ ಗುಬ್ಬಿ ತಾಲೂಕಿನ ಹೊಸಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಸಮ್ಮುಖದಲ್ಲಿ ನೂರಾರು ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಇದೇ ವೇಳೆ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅರೇಹಳ್ಳಿ ನಟರಾಜು ಮಾತನಾಡಿ, ಕಳೆದ ಭಾರಿ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಹೊಸಕರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಮತ ಬರುವಂತೆ ಶ್ರಮಿಸಿದ್ದೇವೆ. ಚುನಾವಣೆ ಬಳಿಕ ಯಾರು ಕೂಡ ನಮ್ಮನ್ನ ಭೇಟಿಯಾಗಲಿಲ್ಲ. ಆದ್ದರಿಂದ ಶಾಸಕರೇ ಕಾಂಗ್ರೆಸ್ಗೆ ಬರಮಾಡಿಕೊಂಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಭಾಗದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುತ್ತೇವೆ ಎಂದರು.

ಶಿವನೇಹಳ್ಳಿ, ವರ್ತಿಕಟ್ಟೆ, ಮಾದೇನಹಳ್ಳಿ, ಹೊಸಕೆರೆ ಭಾಗದ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ದಯಾನಂದ್ ,ತಿಮ್ಮರಾಯಪ್ಪ ,ರಾಘವೇಂದ್ರ ಹಾಗೂ ಮುಖಂಡರಾದ ಗುರು ರೇಣುಕರಾಧ್ಯ , ಬಾಬು ,ನಾರಾಯಣಪ್ಪ, ಕುಮಾರ್, ಕೃಷ್ಣಪ್ಪ, ಮಂಜುನಾಥ್, ಶ್ರೀಧರ್, ಚನ್ನಬಸವಯ್ಯ, ಸುಧಾಕರ್, ಗೌಡ, ನವೀನ್, ಸ್ವಾಮಿ ಇದ್ದರು.