ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಹುಣಸೂರಿನ ಎಚ್.ಎನ್. ಗಿರೀಶ್ ಗೆ ರಾಷ್ಟ್ರಪ್ರಶಸ್ತಿ

| Published : Aug 29 2024, 01:06 AM IST / Updated: Aug 29 2024, 09:05 AM IST

Primary teacher recruitment panel may be canceled
ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಹುಣಸೂರಿನ ಎಚ್.ಎನ್. ಗಿರೀಶ್ ಗೆ ರಾಷ್ಟ್ರಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಹುಣಸೂರಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಎನ್. ಗಿರೀಶ್ ಆಯ್ಕೆಯಾಗಿದ್ದಾರೆ.

 ಮೈಸೂರು :  ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಹುಣಸೂರಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಎನ್. ಗಿರೀಶ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 5 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಪ್ರಶಸ್ತಿಯು ಮೆರಿಟ್ ಪ್ರಮಾಣಪತ್ರ, 50,000 ರು.ಗಳ ನಗದು ಬಹುಮಾನ ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.

ಹುಣಸೂರು ಪಟ್ಟಣದ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಕರಾಗಿರುವ ಎಚ್.ಎನ್. ಗಿರೀಶ್ಅವರಿಗೆ ಕಳೆದ ವರ್ಷವಷ್ಟೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ಕೆಲ ದಿನಗಳ ಹಿಂದೆಯಷ್ಟೆ, ಜಿ- 20 ಶೃಂಗಸಭೆಯ ನ್ಯಾಷನಲ್ಎಜುಕೇಷನ್ಎಕ್ಸ್ಲೆನ್ಸ್ಅವಾರ್ಡ್ಪ್ರಶಸ್ತಿಯನ್ನು ನೋಯ್ಡಾದಲ್ಲಿ ಪ್ರದಾನ ಮಾಡಲಾಗಿತ್ತು.ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಿರೀಶ್, ಏಡ್ಸ್ಹಾಗೂ ಹೆಣ್ಣು ಮಕ್ಕಳ ಋತುಸ್ರಾವದಂತ ಸಾಮಾಜಿಕ ಪಿಡುಗಿನ ಬಗೆಗೂ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದವರು.

ಕಳೆದ ಇಪ್ಪತ್ತೈದು ವರ್ಷಗಳ ಹಿಂದೆಯೇ ಜಿಲ್ಲೆಯ ಟಿ. ನರಸೀಪುರ ಸಮೀಪ ಏಡ್ಸ್ಅಮ್ಮನ ದೇವಾಲಯ ಸ್ಥಾಪಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದವರು.ಗಿರೀಶ್ಅವರ ಈ ಅನನ್ಯ ಸೇವೆ ಎಷ್ಟು ಪ್ರಭಾವ ಬೀರಿತ್ತು ಎಂದರೆ, ಅಮೇರಿಕಾದ ಹಾರ್ವಡ್ಡ್ಯೂನಿವರ್ಸಿಟಿಯ ಸಂಶೋಧನಾ ವಿದ್ಯಾರ್ಥಿನಿ ಮೈಸೂರಿಗೆ ಆಗಮಿಸಿ ಏಡ್ಸ್ಅಮ್ಮನ ದೇವಾಲಯದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿ ಧರ್ಮ ಮತ್ತು ವಿಜ್ಞಾನ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.

ಅತ್ಯಂತ ಉದಯೋನ್ಮುಖ ಹಾಗೂ ಉತ್ಸಾಹಿ ಶಿಕ್ಷಕರಾದ ಎಚ್. ಎನ್. ಗಿರೀಶ್, ಹುಣಸೂರಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹೋದರ ಎಚ್.ಎನ್. ವೆಂಕಟೇಶ್ ಮೈಸೂರಿನ ಹಿರಿಯ ವಕೀಲರು ಹಾಗೂ ಕನ್ನಡದ ಪ್ರಥಮ ಕಾನೂನು ಮಾಸ ಪತ್ರಿಕೆ ಲಾ ಗೈಡ್ ನ ಸಂಪಾದಕರು.

ಎಚ್.ಎನ್.ಗಿರೀಶ್‌ ಗೆ ಶಾಸಕ ಜಿ.ಡಿ. ಹರೀಶ್‌ ಗೌಡ ಅಭಿನಂದನೆ

ನಮಗಾಗಿ ಯೋಚಿಸಲು ನಮಗೆ ಸಹಾಯ ಮಾಡುವವರೇ ನಿಜವಾದ ಶಿಕ್ಷಕರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಂದ. ನಾವು ಅವರ ನಿರೀಕ್ಷೆಗಳನ್ನು ತಲುಪಿದಾಗ ಅವರು ನಮಗೆ ವಿಶೇಷ ಭಾವನೆ ಮೂಡಿಸುತ್ತಾರೆ. ಈ ನಿಟ್ಟಿನಲ್ಲಿ ಹುಣಸೂರಿನ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಉಪನ್ಯಾಸಕ ಎಚ್.ಎನ್. ಗಿರೀಶ್ ಅವರು ಏಡ್ಸ್ಜಾಗೃತಿ ಮೂಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದಿರುವುದು ನನಗೆ ಮತ್ತು ತಾಲೂಕಿಗೆ ಸಂತೋಷ ತಂದಿದೆ. ಅಭಿನಂದನೆಗಳು.

- ಜಿ.ಡಿ. ಹರೀಶ್‌ ಗೌಡ, ಶಾಸಕರು, ಹುಣಸೂರುನಮ್ಮ ಕಾಲೇಜಿನ ಉಪನ್ಯಾಸಕ ಗಿರೀಶ್ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರುವುದು ಸಂತೋಷವಾಗಿದೆ.

- ರಾಮೇಗೌಡ, ಪ್ರಾಂಶುಪಾಲರು, ಸರ್ಕಾರಿ ಪಿಯು ಬಾಲಕಿಯರ ಕಾಲೇಜು, ಹುಣಸೂರು