ಮೊಪೆಡ್ ಗೆ ಮಿಲಿಟರಿ ಯೋಧರ ತರಬೇತಿ ವಾಹನ ಡಿಕ್ಕಿ ಮಹಿಳೆ ಸಾವು

| Published : Mar 23 2024, 01:03 AM IST

ಮೊಪೆಡ್ ಗೆ ಮಿಲಿಟರಿ ಯೋಧರ ತರಬೇತಿ ವಾಹನ ಡಿಕ್ಕಿ ಮಹಿಳೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಮಲ್ಲೂಪುರ ಗ್ರಾಮದಿಂದ ಮೊಪೆಡ್ ನಲ್ಲಿ ಪಾಪಣ್ಣನಾಯಕ ಮತ್ತು ಮಂಗಳಮ್ಮ, ಪುತ್ರ ತೇಜಸ್ನ ಹಾಗೂ ಪುತ್ರಿ ಲಕ್ಷ್ಮಿ ಜೊತೆಗೂಡಿ ಬರುತ್ತಿದ್ದ ವೇಳೆ ತಾಲೂಕಿನ ಚಿನ್ನದಗುಡಿ ಹುಂಡಿ ಬಳಿ ಮಿಲಿಟರಿ ಯೋಧರ ತರಬೇತಿ ಲಾರಿ ವಾಹನ ಹಿಂಬದಿಯಿಂದ ಗುದ್ದಿದ ಪರಿಣಾಮ ಪಾಪಣ್ಣ ನಾಯಕ ಮತ್ತು 10 ವರ್ಷದ ಮಗ ಹಾಗೂ 8 ವರ್ಷದ ಮಗಳು ಲಕ್ಷ್ಮಿ ರಸ್ತೆಯ ಎಡಭಾಗಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದರು.

ಕನ್ನಡಪ್ರಭ ವಾರ್ತೆ ನಂಜನಗೂಡು

ಮಿಲಿಟರಿ ಯೋಧರ ತರಬೇತಿ ವಾಹನ ಮೊಪೆಡ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಮಹಿಳೆಯ ಹೊಟ್ಟೆಯ ಮೇಲೆ ಲಾರಿ ವಾಹನದ ಚಕ್ರ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಚಿನ್ನದಗುಡಿ ಹುಂಡಿ ಬಳಿ ಜರುಗಿದೆ.

ಕವಲಂದೆ ಹೋಬಳಿಯ ಮಲ್ಲಹಳ್ಳಿಯ ಪಾಪಣ್ಣನಾಯಕ ಅವರ ಪತ್ನಿ ಮಂಗಳಮ್ಮ (35) ಮೃತಪಟ್ಟವರು.

ಪಾಪಣ್ಣ ನಾಯಕ (44), ತೇಜಸ್ (10), ಲಕ್ಷ್ಮಿ(8) ಸಣ್ಣಪುಟ್ಟ ಗಾಯಗಳಾಗಿ ಪ್ರಣಾಪಾಯದಿಂದ ಪಾರಾಗಿದ್ದಾರೆ.

ನಂಜನಗೂಡಿನ ದೊಡ್ಡ ಜಾತ್ರೆಯಲ್ಲಿ ಭಾಗವಹಿಸುವ ಸಲುವಾಗಿ ಮಲ್ಲೂಪುರ ಗ್ರಾಮದಿಂದ ಮೊಪೆಡ್ ನಲ್ಲಿ ಪಾಪಣ್ಣನಾಯಕ ಮತ್ತು ಮಂಗಳಮ್ಮ, ಪುತ್ರ ತೇಜಸ್ನ ಹಾಗೂ ಪುತ್ರಿ ಲಕ್ಷ್ಮಿ ಜೊತೆಗೂಡಿ ಬರುತ್ತಿದ್ದ ವೇಳೆ ತಾಲೂಕಿನ ಚಿನ್ನದಗುಡಿ ಹುಂಡಿ ಬಳಿ ಮಿಲಿಟರಿ ಯೋಧರ ತರಬೇತಿ ಲಾರಿ ವಾಹನ ಹಿಂಬದಿಯಿಂದ ಗುದ್ದಿದ ಪರಿಣಾಮ ಪಾಪಣ್ಣ ನಾಯಕ ಮತ್ತು 10 ವರ್ಷದ ಮಗ ಹಾಗೂ 8 ವರ್ಷದ ಮಗಳು ಲಕ್ಷ್ಮಿ ರಸ್ತೆಯ ಎಡಭಾಗಕ್ಕೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾದರು. ಮಂಗಳಮ್ಮ ರಸ್ತೆಯ ಬಲಭಾಗಕ್ಕೆ ಬಿದ್ದ ಹಿನ್ನೆಲೆ, ಲಾರಿಯ ಹಿಂಬದಿ ಚಕ್ರ ಅವರ ಹೊಟ್ಟೆ ಮೇಲೆ ಹರಿದು ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಕವಲಂದೆ ಪೊಲೀಸ್ ಠಾಣೆಯ ಎಎಸೈ ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದರು. ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.