ಮಾಗುಲು ಐನ್ ಮನೆಯಲ್ಲಿ ಹುತ್ತರಿ ಆಚರಣೆ

| Published : Dec 16 2024, 12:46 AM IST

ಸಾರಾಂಶ

ಸುಂಟಿಕೊಪ್ಪ ಸಮೀಪದ ಪನ್ಯದ ಮಾಗುಲು ಐನ್‌ ಮನೆಯಲ್ಲಿ ಹುತ್ತರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗಿನಾದ್ಯಂತ ಹುತ್ತರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಕೊಡಗಿನೆಲ್ಲೆಡೆ ಸುಗ್ಗಿ ಹಬ್ಬವನ್ನ ಬಹಳ ವಿಜೃಂಬಣೆಯಿಂದ ಆಚರಿಸಲಾಯಿತು. ಸುಂಟಿಕೊಪ್ಪ ಸಮೀಪದ ಪನ್ಯದ ಮಾಗುಲು ಐನ್ ಮನೆಯಲ್ಲೂ ಹುತ್ತರಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಯಿತು‌.

ಮಾಗುಲು ಐನ್ ಮನೆಯಲ್ಲಿ ಮೊದಲಿಗೆ ಮನೆಯವರು ನೆಂಟರಿಸ್ಟರು ಹಾಗೂ ಊರಿ‌ನ ಮಂದಿಯೆಲ್ಲಾ ಸೇರಿ ಮೊದಲಿಗೆ 7. 50ಕ್ಕೆ ನೆರೆಕಟ್ಟಿ ನಂತರ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಮಯ ನಿಗದಿಪಡಿಸಿದ 8.50 ರ ಸಮಯದಲ್ಲೇ ಕದೀರು ಕೊಯ್ಯಲಾಯಿತು. ಮಾಗುಲು ವಸಂತರವರ ಗದ್ದೆಯಲ್ಲಿ‌ ಮಾಗುಲು ರವೀಂದ್ರರವರು ಕದೀರನ್ನ ತೆಗೆದರು. ಬಳಿಕ ಸಮೀಪದ ಅಯ್ಯಪ್ಪ ದೇವರ ಸನ್ನಿಧಾನಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಿ ಅಯ್ಯಪ್ಪ ದೇವಸ್ಥಾನದಲ್ಲಿ‌ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭ ಎಲ್ಲರ ಬಾಯಲ್ಲಿ ಪೋಲಿ ಪೋಲೀ ಯೇ ಬಾ ದೇವ ಎಂಬ ಘೋಷ ವಾಕ್ಯ ಮೊಳಗಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಧಾನ್ಯಲಕ್ಷೀಯನ್ನು ಐನ್ ಮನೆಗೆ ತಂದು ಇರಿಸಲಾಯಿತು. ನಂತರ ವಿವಿಧ ಉಪಕರಣಗಳಿಗೆ ಕದೀರನ್ನು ಕಟ್ಟುವ ಸಂಪ್ರದಾಯ ನೆರವೇರಿಸಲಾಯಿತು. ಗದ್ದೆಯಿಂದ ತಂದ ಧಾನ್ಯಲಕ್ಷ್ಮಿಯ ಹೊಸ ಅಕ್ಕಿಯ ಊಟೋಪಚಾರ ಮಾಡಲಾಯಿತು. ಹುತ್ತರಿ ಹಬ್ಬದ ಸ್ಪೆಷಲ್ ಖಾದ್ಯಗಳಾದ ತಂಬಿಟ್ಟು ಪಾಯಸ ಹಾಗೂ ಹುತ್ತರಿ ಗೆಣಸಿನ ಸಾರು ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನ ಉಣಬಡಿಸಲಾಯಿತು.

ಹುತ್ತರಿ ಹಬ್ಬದ ಮತ್ತೊಂದು ವಿಶೇಷ ಅಂದರೆ ಅದು ಪಟಾಕಿ ಸಿಡಿಸೊದು. ಮಕ್ಕಳು‌ ಹಿರಿಯರು ಮಕ್ಕಳು ಎಲ್ಲಾರು ಕೂಡ ವಿವಿಧ ಬಗೆಯ ಪಟಾಕಿ ಸಿಡಿಸಿ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದ್ರು. ಹುತ್ತರಿ ಹಬ್ಬಕ್ಕೆ ಮನೆ ಮಂದಿ‌ ಊರಿನ ಮಂದಿ ನೆಂಟರಿಸ್ಟರು ಬಂಧು ಮಿತ್ರರು ಹಬ್ಬಕ್ಕೆ ಸಾಕ್ಷಿಯಾದರು.