ಗಾಂಜಾ ಮತ್ತು ಹೈಡ್ರೋವೀಡ್ ಗಾಂಜಾ ಸಪ್ಲೈ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. 2 ಲಕ್ಷ ಬೆಲೆ 1.655 ಗ್ರಾಂ ಗಾಂಜಾ, 2.30ಲಕ್ಷ ಸಾವಿರ ಬೆಲೆ ಬಾಳುವ 23 ಗ್ರಾಂ ಹೈಡ್ರೋವಿಡ್‌ ಹಾಗೂ 40 ಲಕ್ಷ ಬೆಲೆ ಬಾಳುವ ಫಾರ್ಚನರ್‌ ಕಾರು ಸೇರಿ ಒಟ್ಟು 44 . 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಗಾಂಜಾ ಮತ್ತು ಹೈಡ್ರೋವೀಡ್ ಗಾಂಜಾ ಸಪ್ಲೈ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು 6 ಜನರನ್ನು ಬಂಧಿಸಿದ್ದಾರೆ. 2 ಲಕ್ಷ ಬೆಲೆ 1.655 ಗ್ರಾಂ ಗಾಂಜಾ, 2.30ಲಕ್ಷ ಸಾವಿರ ಬೆಲೆ ಬಾಳುವ 23 ಗ್ರಾಂ ಹೈಡ್ರೋವಿಡ್‌ ಹಾಗೂ 40 ಲಕ್ಷ ಬೆಲೆ ಬಾಳುವ ಫಾರ್ಚನರ್‌ ಕಾರು ಸೇರಿ ಒಟ್ಟು 44 . 30 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಿಲಕ್‌ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಶೇಷಾದ್ರಿಪುರಂ ಕಾಲೇಜು ಸಮೀಪದ ರಸ್ತೆಯಲ್ಲಿ ಆರೋಪಿಗಳು ಮಾದಕ ವಸ್ತುವಾದ ಗಾಂಜಾ ಸೊಪ್ಪನ್ನು ಹಾಗೂ ಇನ್ನಿತರೆ ಮತ್ತು ಭರಿಸುವ ವಸ್ತುವನ್ನು ಬಿಳಿ ಬಣ್ಣದ ಫಾರ್ಚೂನರ್ ಕಾರಿನಲ್ಲಿ ಬಂದು ಮಾರಾಟ ಮಾಡುತ್ತಿದ್ದ ವೇಳೆ ಎಸ್ಪಿ ಅಶೋಕ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮಾದಕ ವಸ್ತುಗಳ ಮಾಲು ಸಮೇತವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಸತೀಶ್, ಪ್ರಮೋದ್, ದಿಶಾಂತ್, ದರ್ಶನ್, ಅಮೋಘ ನಾಗಭೂಷಣ, ಮಂಜುನಾಥ್ ಎಂದು ಗುರುತಿಸಲಾಗಿದೆ.

ಮನೆ ಕಳ್ಳತನ ಮಾಡಿದ್ದ ಆರೋಪಿಯ ಬಂಧನ ತುಮಕೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಥತನ ಮಾಡಿದ್ದ ಆರೋಪಿಯನ್ನು ತುಮಕೂರಿನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.2023 ರ ಡಿಸೆಂಬರ್ 30 ರಂದು ತುಮಕೂರು ನಗರದ 8-ನೇ ಕ್ರಾಸ್‌ನ ಗೋಕುಲ ಬಡಾವಣೆಯ ವಾಸಿ ಮಂಜುನಾಥ ಎನ್ ಅವರ ಮನೆಗೆ ನುಗ್ಗಿದ ಕಳ್ಳರು ಆಯುಧದಿಂದ ಬಾಗಿಲನ್ನು ಮೀಟಿ 55 ಲಕ್ಷ ರು. ಮೌಲ್ಯದ 150 ಗ್ರಾಂ ಮತ್ತು 220 ಮಿಲಿ ತೂಕದ ಚಿನ್ನದ ಗಟ್ಟಿ, 50 ಗ್ರಾಂ 130 ಮಿಲಿ ತೂಕದ ತುಂಡಾಗಿರುವ ಚಿನ್ನದ ಕೈ ಕಡಗ, 200 ಗ್ರಾಂ 770 ಮಿಲಿ ತೂಕದ ಬಿಸ್ಕತ್ ಆಕಾರದ ಚಿನ್ನದ ಗಟ್ಟಿ ಸೇರಿ 401 ಗ್ರಾಂ 12 ಮಿಲಿ ತೂಕದ ಒಡವೆಗಳನ್ನು ದೋಚಿದ್ದರು.

ಘಟನೆ ಸಂಬಂಧ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್.ಕೆ.ವಿ.ಅವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಗೋಪಾಲ್ ಕೆ.ಎಸ್.ಪಿ.ಎಸ್ ಮತ್ತು ಪುರುಷೋತ್ತಮ.ಎಂ.ಎಲ್ ಕೆ.ಎಸ್.ಪಿ.ಎಸ್ ರವರ ನೇತೃತ್ವದಲ್ಲಿ, ತುಮಕೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್.ಚಂದ್ರಶೇಖರ್ ರವರ ಮುಂದಾಳತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಆರೋಪಿ ಫಹೀಮ್ ನನ್ನು ಬಂಧಿಸಿದ್ದಾರೆ.ಸುಲಿಗೆ ಮಾಡಿದ ಆರೋಪಿಗಳ ಬಂಧನ

ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಲಾಪುರ ತೋಟದ ಮನೆಯಲ್ಲಿದ್ದ ಶಿಕ್ಷಕಿ ಚಂದ್ರಮ್ಮ ಅವರ ಮನೆ ಬಳಿ ಬುರ್ಕಾ ಧರಿಸಿದ್ದ ಮಹಿಳೆ ಊಟ ಕೇಳುವ ನೆಪದಲ್ಲಿ ಕಣ್ಣಿಗೆ ಕಾರದ ಪುಡಿ ಎರಚಿ 4 ಲಕ್ಷ ರು. ಮೌಲ್ಯದ ಬಂಗಾರದ ಚೈನನ್ನು ಅಪಹರಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ.ಜೂನ್ 28 ರಂದು ಮಧ್ಯಾಹ್ನ ಬುರ್ಕಾ ಧರಿಸಿದ್ದ ಮಹಿಳೆಯೊಬ್ಬರು ಶಿಕ್ಷಕಿ ಚಂದ್ರಮ್ಮ ಅವರ ಮಾಂಗಲ್ಯ ಸರವನ್ನು ಅಪಹರಿಸಿ ಹೊರಗೆ ಬೈಕ್ ಚಾಲನೆಯಲ್ಲಿ ಇಟ್ಟುಕೊಂಡು ನಿಂತಿದ್ದ ಬೈಕ್ ಸವಾರನೊಂದಿಗೆ ಪರಾರಿಯಾಗಿದ್ದರು.ಘಟನೆ ಸಂಬಂಧ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳಾದ ನಾಗರತ್ನ ಹಾಗೂ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ.ಹೆದ್ದಾರಿಯಲ್ಲಿ ಸುಲಿಗೆಕೋರರು ಸರಳುಗಳ ಹಿಂದೆ

ತುಮಕೂರಿನ ಊರುಕೆರೆ ಸರ್ವಿಸ್ ರಸ್ತೆಯಲ್ಲಿ ನಾಗೇಶ್ ಯಮನಪ್ಪ ಗೌಂಡಿ ಎಂಬುವರು ಲಾರಿಯನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಹೋದ ಸಮಯದಲ್ಲಿ ಚಾಲಕನ ಬಳಿ ಬಂದ ಇಬ್ಬರು ಆರೋಪಿಗಳು ಚಾಲಕನಿಂದ 57 0400 ರು. ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡು ಹೋದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಅಲ್ಲದೆ ಅದೇ ದಿನ ಮಧ್ಯ ರಾತ್ರಿ 3:15 ಗಂಟೆ ಸಮಯದಲ್ಲಿ ಕೋರ ಪೊಲೀಸ್ ಠಾಣಾ ವ್ಯಾಪ್ತಿಯ ವಿ.ಆರ್.ಎಲ್ ಹೋಟೆಲ್ ಸಮೀಪ ರಸ್ತೆಯ ಬದಿಯಲ್ಲಿ ಸಿಂಧು ರವರು ಆಕೆಯ ಗಂಡನೊಂದಿಗೆ ಬೆಂಗಳೂರಿಗೆ ಹೋಗುತ್ತಿರುವಾಗ್ಗೆ ಕಾರನ್ನು ರಸ್ತೆಯ ಬದಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿರುವಾಗ ಅಲ್ಲಿಗೆ ಹೋದ ಇಬ್ಬರು ಆರೋಪಿಗಳು ಸಿಂಧು ರವರ ಕೊರಳಿನಲ್ಲಿದ್ದ 1.80 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದರು. ಈ ಎರಡೂ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಾದ ದೊಡ್ಡಬಳ್ಳಾಪುರದ ಸೈಯದ್ ಉಸ್ಮಾನ್ ಹಾಗೂ ಆಕಾಶ್ ಎಂಬುವರನ್ನು ಬಂಧಿಸಿದ್ದಾರೆ.

ಸ್ಟಾರ್ಟರ್ ಕಳ್ಳತನ ಮಾಡಿದ್ದ ಆರೋಪಿಗೆ ಕೋಳ

ಜಮೀನಿನಲ್ಲಿ ಸ್ಟಾರ್ಟರ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ 9,50 ಲಕ್ಷ ರು. ಮೌಲ್ಯದ 66 ವಿವಿಧ ಕಂಪನಿಯ ಸ್ಟಾರ್ಟರ್, ಒಂದು ರೊಟೇಟಿಂಗ್ ಸಿಸಿ ಕ್ಯಾಮೆರಾ ಹಾಗೂ ಒಮಿನಿ ಕಾರು ಮತ್ತು ಬೈಕ್ ಅನ್ನು ವಶಕ್ಕೆ ಪಡೆದು ಆರೋಪಿ ಮಹೇಶನನ್ನು ಬಂಧಿಸಿದ್ದಾರೆ.

ಜುಲೈ 8 ರಂದು ಮಧುಗಿರಿ ತಾಲೂಕು ಪೆಮ್ಮಯ್ಯನಪಾಳ್ಯ ಗ್ರಾಮದ ಲೋಕೇಶ್ ಎಂಬುವರು ದೂರು ನೀಡಿ ತಮ್ಮ ತೋಟದಲ್ಲಿ ಬೋರ್ ವೆಲ್ ಪ್ಯಾನಲ್ ಬೋರ್ಡ್ ಹಾಗೂ ಸಿಸಿ ಕ್ಯಾಮರಾ ಕಳುವಾಗಿರುವ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣ ಬೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ.