ಎಲ್ಲರಲ್ಲೂ ನಾನು ನನ್ನದು ಎಂಬ ಅಹಂಕಾರ ಬೇಡ

| Published : Mar 30 2024, 12:52 AM IST

ಸಾರಾಂಶ

ಹಣ, ಹೆಣ್ಣು, ಇಂದ್ರಿಯ ಸುಃಖಗಳು, ಪ್ರಾಪಂಚಿಕ ವೈಭವಗಳು, ಕೀರ್ತಿ, ಪದವಿ, ಸನ್ಮಾನ, ಅಭಿಮಾನ ಇವು ಮನುಜನ ದುಃಖಕ್ಕೆ ಕಾರಣವಾಗಿವೆ ಎಂದು ಮಸೂತಿಯ ಶ್ರೀ ಶಿವಲಿಂಗಯ್ಯ ಶರಣರು ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಣ, ಹೆಣ್ಣು, ಇಂದ್ರಿಯ ಸುಃಖಗಳು, ಪ್ರಾಪಂಚಿಕ ವೈಭವಗಳು, ಕೀರ್ತಿ, ಪದವಿ, ಸನ್ಮಾನ, ಅಭಿಮಾನ ಇವು ಮನುಜನ ದುಃಖಕ್ಕೆ ಕಾರಣವಾಗಿವೆ ಎಂದು ಮಸೂತಿಯ ಶ್ರೀ ಶಿವಲಿಂಗಯ್ಯ ಶರಣರು ನುಡಿದರು.

ಶುಕ್ರವಾರ ಸ್ಥಳೀಯ ಶ್ರೀ ನಿಜಗುಣ ಶಿವಯೋಗಿಗಳ ಆನಂದಾಶ್ರಮದಲ್ಲಿ ಆಡಳಿತ ಮಂಡಳಿಯವರ ವತಿಯಿಂದ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಶ್ರೀಗಳು, ಮನುಜನ ಸುಖಕ್ಕೂ ಸುಖಮಯ ಜೀವನಕ್ಕೆ ಸರಳ ಮಾರ್ಗಗಳಿವೆ. ಅವುಗಳಲ್ಲಿ ಅವಶ್ಯಕತೆಗೆ ಬೇಕಾಗುವಷ್ಟು ಹಣ, ಮನೆ, ವಸ್ತು, ಉಪಕರಣಗಳು, ವಾಹನಗಳು, ಆರೋಗ್ಯ, ಒಳ್ಳೆಯತನ ಮತ್ತು ಪ್ರೀತಿ ತುಂಬಿರುವ ಪತಿ, ಪತ್ನಿಯರು ಅರ್ಥಗರ್ಭಿತ ಪುಸ್ತಕಗಳು ವಾಚನೆ, ವಿವೇಕ ಈ ೫ ವಿಚಾರಗಳು ಸಮೃದ್ದಿಯಾಗಿದ್ದರೆ ಮನುಜ ಸುಃಖಜೀವಿಯಾಗಬಲ್ಲ. ಇದಕ್ಕಿಂತಲೂ ಹೆಚ್ಚಾಗಿ ಸುಖಮಯ ಜೀವನಕ್ಕೆ ಏನು ಬೇಕಾಗಿಲ್ಲಾವೆಂದರು. ನಾನು, ನನ್ನದು ಎಂಬ ಅಹಂಕಾರ ದೂರಾಗಬೇಕು. ಮನದಲ್ಲಿಯ ಇಚ್ಚೆಗಳು ನಿರ್ಮೂಲನೆಯಾಗಬೇಕು. ತನ್ನನ್ನು ತಾನು ಅರಿತುಕೊಳ್ಳಬೇಕು. ಸಕಲವನ್ನು ಇರುವುದು ಇರುವಂತೆ ಅರಿಯಬೇಕು. ಆಂತರಿಕ ಶಕ್ತಿಗಳ ಅಭಿವೃದ್ಧಿ ಮಾಡಿಕೊಳ್ಳುತ್ತಾ ಆತ್ಮಸ್ಥಿತಿಯ ಕಡೆಗೆ ಸಾಗಬೇಕು. ಈ ೫ ವಿಚಾರಗಳಲ್ಲಿ ಪ್ರಗತಿ ಸಾಧಿಸಿದರೆ ಮನುಷ್ಯನಿಗೆ ಶಾಶ್ವತ ಸುಃಖ, ದುಃಖರಾಹಿತ್ಯ ಸುಖ ಪವಿತ್ರ ಸುಖ ಪ್ರಾಪ್ತಿಯಾಗುತ್ತದೆ ಎಂದರು.ಸನ್ಮಾನ ಸ್ವೀಕರಿಸಿದ ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಮಾತನಾಡಿದರು. ನಿಜಗುಣ ಶಿವಯೋಗಿಗಳ ಆನಂದಾಶ್ರಮದ ಅಧ್ಯಕ್ಷ ಜೆ.ಎಂ.ಬೇನಾಳಮಠ ಅವರು ಆಶ್ರಮದಲ್ಲಿ ದಿನನಿತ್ಯ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಕುರಿತು ವಿವರಿಸಿದರು.

ಈ ಸಮಯದಲ್ಲಿ ಉಪನ್ಯಾಸಕರಾದ ಆರ್.ಬಿ.ದಾನಿ, ವೀರಭದ್ರಪ್ಪ ಹಂದಿಗನೂರ, ಸಿ.ಲಿಂಗಪ್ಪ, ಬಸವರಾಜ ದೊಡಮನಿ, ಮಲ್ಲಿಕಾರ್ಜುನ ಹಿಪ್ಪರಗಿ, ನಾಗರತ್ನಾ ಲೋಕರೆ, ಇಂದುಮತಿ ಬಬಲೇಶ್ವರ, ಉಮಾ ಘೀವಾರಿ, ಸಾವಿತ್ರೆಮ್ಮ ಹಿರೇಮಠ, ಡಾ.ಹೇಮಾ ಹಿರೇಮಠ, ಮೊದಲಾದವರು ಉಪಸ್ಥಿತರಿದ್ದರು.