ಸಾರಾಂಶ
ನಾನು ಆಗ ಶಾಸಕನು ಆಗಿರಿಲ್ಲ. ದಢೇಸುಗೂರು ವ್ಯಾಪ್ತಿಯಲ್ಲಿನ ಭೂಮಿಗೆ ನೀರು ಸಹ ಇರಲಿಲ್ಲ. ಆಗ ನಾನು ತುಂಗಭದ್ರಾ ನದಿಯಿಂದ ಸ್ವಂತ ಹಣದಿಂದ ನೀರಾವರಿ ಮಾಡಿದ್ದೇನೆ. ಆಗ ನೀರು ಕೊಡುವುದಕ್ಕೆ ಪರ್ಯಾಯವಾಗಿ ಭೂಮಿ ನೀಡಿದ್ದಾರೆ. ಇದು ನಾನಷ್ಟೇ ಅಲ್ಲ, ಆ ಭಾಗದಲ್ಲಿ ಅನೇಕರು ಮಾಡಿದ್ದಾರೆ. ಆದರೆ, ಈಗ ಅದನ್ನು ತಪ್ಪಾಗಿ ಅರ್ಥೈಸಿ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ.
ಕೊಪ್ಪಳ:
ನಾನು ದೇವದಾಸಿ ಮಹಿಳೆಯರ ಯಾವುದೇ ಆಸ್ತಿ ಕಬಳಿಸಿಲ್ಲ. ದೌರ್ಜನ್ಯವನ್ನು ಸಹ ಮಾಡಿಲ್ಲ, ಮಹಾನಾಯಕರೊಬ್ಬರು ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ವಿರುದ್ಧ ಈಗಾಗಲೇ ವಿವಿದೆಢೆ ಅಪಪ್ರಚಾರ ಮಾಡಿದ್ದಾರೆ. ಬ್ಲಾಕ್ ಮೇಲ್ ಮಾಡಿದ ವಕೀಲರಾದ ಜಗದೀಶ ಎನ್ನುವಾತನೇ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.ನಾನು ಆಗ ಶಾಸಕನು ಆಗಿರಿಲ್ಲ. ದಢೇಸುಗೂರು ವ್ಯಾಪ್ತಿಯಲ್ಲಿನ ಭೂಮಿಗೆ ನೀರು ಸಹ ಇರಲಿಲ್ಲ. ಆಗ ನಾನು ತುಂಗಭದ್ರಾ ನದಿಯಿಂದ ಸ್ವಂತ ಹಣದಿಂದ ನೀರಾವರಿ ಮಾಡಿದ್ದೇನೆ. ಆಗ ನೀರು ಕೊಡುವುದಕ್ಕೆ ಪರ್ಯಾಯವಾಗಿ ಭೂಮಿ ನೀಡಿದ್ದಾರೆ. ಇದು ನಾನಷ್ಟೇ ಅಲ್ಲ, ಆ ಭಾಗದಲ್ಲಿ ಅನೇಕರು ಮಾಡಿದ್ದಾರೆ. ಆದರೆ, ಈಗ ಅದನ್ನು ತಪ್ಪಾಗಿ ಅರ್ಥೈಸಿ, ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದರು.ದೇವದಾಸಿ ಅವರ ಭೂಮಿಯನ್ನು ನಿಯಮಾನುಸಾರವೇ ನಾನು ಖರೀದಿ ಮಾಡಿಕೊಂಡಿದ್ದೇನೆ ಮತ್ತು ಅದಕ್ಕೆ ಪರ್ಯಾಯವಾಗಿ ಭೂಮಿ ಸಹ ನೀಡಲಾಗಿದೆ. ಭೂಮಿ ಪಡೆದಿರುವುದನ್ನು ಅವರು ಮುಚ್ಚಿಟ್ಟು, ಈಗ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.ನಾನು ಕಾನೂನು ಬಿಟ್ಟು ಯಾವುದನ್ನು ಮಾಡಿಲ್ಲ, ಇದು ಈಗ 30 ವರ್ಷಗಳ ಹಿಂದೆಯೇ ಆಗಿದನ್ನು ಈಗ ಕೆದಕಲಾಗುತ್ತಿದೆ. ಇದರ ಹಿಂದೆ ಮಹಾನಾಯಕರು ಇದ್ದಾರೆ ಎಂದು ಸಚಿವ ಶಿವರಾಜ ತಂಗಡಗಿ ಅವರ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು. ಪ್ರಶ್ನೆ ಮಾಡಿದರೂ ಮಹಾನಾಯಕ ಯಾರು ಎಂದು ನಿಮಗೆಲ್ಲ ಗೊತ್ತು ಎಂದಷ್ಟೇ ಹೇಳಿದರೇ ಹೊರತು ಹೆಸರು ಹೇಳಲಿಲ್ಲ.
ನಾನು ಇದರಲ್ಲಿ ತಪ್ಪು ಮಾಡಿಲ್ಲ. ವಕೀಲ ಜಗದೀಶ ಅವರು ನನಗೆ ಬ್ಲಾಕ್‌ಮೇಲ್ ಮಾಡಲು ಬಂದಿದ್ದರು. ನಾನು ಬಗ್ಗದಿದ್ದಾಗ ದೇವದಾಸಿಯರನ್ನು ಎತ್ತಿ ಕಟ್ಟಿ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಗಣೇಶ ಹೊರತಟ್ನಾಳ, ಪರುಶರಾಮ ಆನೆಗೊಂದಿ, ಮಂಜುನಾಥ, ಹನುಮಂತಪ್ಪ ಡಗ್ಗಿ ಇದ್ದರು.