ನಾನು, ನನಗಾಗಿಯೇ ಬಿಟ್ಟು ಸೇವೆಯಲ್ಲಿ ತೊಡಗಿ

| Published : May 28 2024, 01:05 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಆಧುನಿಕ ಜೀವನ ಶೈಲಿಯಿಂದಾಗಿ ಪಾರಂಪರಿಕ ಸುಂದರ ಬದುಕನ್ನು ಆಸ್ವಾದಿಸಲಾಗುತ್ತಿಲ್ಲ. ಬೆಳಗಿನಿಂದ ಸಂಜೆವರೆಗೆ ನಾನು ಮತ್ತು ನನಗಾಗಿಯೇ ಎಂದು ಬಡಿದಾಡದೆ ಸಮಾಜ ಸೇವೆಯಲ್ಲಿ ತೊಡಗಬೇಕು. ಬೆಳ್ಳಿ, ಬಂಗಾರ ಆಸ್ತಿಗಿಂತ ಉತ್ತಮ ನಡೆ-ನುಡಿಯೇ ನೈಜ ಸಂಪತ್ತು ಎಂದು ಉಪನ್ಯಾಸಕ ಮಾಧವ ಗುಡಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ವಿಜಯಪುರಆಧುನಿಕ ಜೀವನ ಶೈಲಿಯಿಂದಾಗಿ ಪಾರಂಪರಿಕ ಸುಂದರ ಬದುಕನ್ನು ಆಸ್ವಾದಿಸಲಾಗುತ್ತಿಲ್ಲ. ಬೆಳಗಿನಿಂದ ಸಂಜೆವರೆಗೆ ನಾನು ಮತ್ತು ನನಗಾಗಿಯೇ ಎಂದು ಬಡಿದಾಡದೆ ಸಮಾಜ ಸೇವೆಯಲ್ಲಿ ತೊಡಗಬೇಕು. ಬೆಳ್ಳಿ, ಬಂಗಾರ ಆಸ್ತಿಗಿಂತ ಉತ್ತಮ ನಡೆ-ನುಡಿಯೇ ನೈಜ ಸಂಪತ್ತು ಎಂದು ಉಪನ್ಯಾಸಕ ಮಾಧವ ಗುಡಿ ಅಭಿಪ್ರಾಯಪಟ್ಟರು.

ನಗರದ ಸ್ಟೇಷನ್ ರಸ್ತೆಗೆ ಪ್ರಸನ್ನಾಂಜನೇಯ ದೇವಾಲಯದಲ್ಲಿ ಸುಧೀಂದ್ರ ಭಜನಾ ಮಂಡಳಿಯಿಂದ ಭಗವತ್ ಚಿಂತನ ಉಪನ್ಯಾಸ ಹಾಗೂ ಆರ್ಚಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾಗ್ಯ ಬರಬೇಕಾದರೆ ಭಗವಂತನ ಕೃಪೆಬೇಕು. ಸತ್ಕಾರ್ಯಗಳಲ್ಲಿ ತೊಡಗಿ ಸತ್ಪಾತ್ರರ ಸೇವೆ ಮಾಡಬೇಕು ಎಂದರು.ವಿಶ್ವನಾಥ ಕುಲಕರ್ಣಿ ಮಾತನಾಡಿ, ಧ್ಯಾನ, ಯೋಗ, ಪ್ರಾರ್ಥನೆ, ಶೋಷಿತರಿಗೆ ಊರುಗೋಲಾಗಿ ನಿಲ್ಲುವುದೇ ಜೀವನದ ಸಾರ್ಥಕ ಕ್ಷಣ. ಬದುಕಿನ ಪರಿಪೂರ್ಣತೆ ಮುಕ್ತಿಯ ಮಾರ್ಗ ಜಗತ್ತಿಗೆ ಹೇಳಿಕೊಟ್ಟ ಭಾರತೀಯರು, ಪಾಶ್ಚಾತ್ಯರ ಜೀವನ ಶೈಲಿಗೆ ಮಾರು ಹೋಗುತ್ತಿರುವುದು ವಿಪರ್ಯಾಸ. ಭವ್ಯ ಪರಂಪರೆಯನ್ನು ಮರೆತ ಜನಾಂಗಕ್ಕೆ ಎಚ್ಚರಿಸುವಲ್ಲಿ ಇಂತಹ ಸತ್ಸಂಗಗಳು ಸಹಾಯಕಾರಿಯಾಗಲಿವೆ ಎಂದು ತಿಳಿಸಿದರು.ಬ್ರಾಹ್ಮಣ ಸಮಾಜದ ಅಧ್ಯಕ್ಷ ಮುಕುಂದ ಕುಲಕರ್ಣಿ ಮಾತನಾಡಿ, ಶಾಲಾ ಜೀವನದಲ್ಲಿ ನಾವೆಲ್ಲ ನೈತಿಕ ಶಿಕ್ಷಣ ಪಡೆಯುತ್ತ ಬೆಳೆದವರು. ಆದರೆ ಪ್ರಸಿದ್ಧಿಗೋಸ್ಕರ ಕೀರ್ತಿಗೆ ಸೋತು ಮೌಲ್ಯಗಳನ್ನು ಗಾಳಿಗೆ ತೂರಿದ್ದೇವೆ. ಮತ್ತೊಮ್ಮೆ ಸನಾತನ ಧರ್ಮದ ಆದರ್ಶಗಳನ್ನು ಬಿತ್ತರಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಹೇಳಿದರು.

ಸಂಯೋಜಕ ಅಂಬಾದಾಸ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಪೂರ್ಣಪ್ರಜ್ಞ ಆಚಾರ್ಯರನ್ನು ಸನ್ಮಾನಿಸಲಾಯಿತು. ಪ್ರಥಮೇಶ ಮನಗೂಳಿ, ಉಲ್ಲಾಸ ಪಾಟೀಲ, ಕೃಷ್ಣಾಜಿ ಕುಲಕರ್ಣಿ, ಆನಂದ ಕುಲಕರ್ಣಿ, ಸಂಪತ್ತ ಕುಲಕರ್ಣಿ, ದೇವಿಕಾ ತೊರಗಲ, ಕೀರ್ತಿ ಮನಗೂಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.