ಅನುದಾನದ ವಿಚಾರಕ್ಕ ಡಿಕೆಶಿ ಭೇಟಿಯಾಗಿದ್ದೆ: ಡಾ. ಸೂರಜ್ ರೇವಣ್ಣ

| Published : May 03 2024, 01:03 AM IST / Updated: May 03 2024, 10:18 AM IST

ಅನುದಾನದ ವಿಚಾರಕ್ಕ ಡಿಕೆಶಿ ಭೇಟಿಯಾಗಿದ್ದೆ: ಡಾ. ಸೂರಜ್ ರೇವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

‘ನಮ್ಮ ಕ್ಷೇತ್ರ, ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಸೌಹಾರ್ದಯುತವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಅನುದಾನಗಳು ಮತ್ತು ಎಲ್‌ಒಸಿ ವಿಷಯದಲ್ಲಿ ಜನವರಿ ತಿಂಗಳಲ್ಲಿ ಭೇಟಿ ಮಾಡಿದ್ದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಸ್ಪಷ್ಟಪಡಿಸಿದರು. 

 ಹೊಳೆನರಸೀಪುರ :  ‘ನಮ್ಮ ಕ್ಷೇತ್ರ, ನಮ್ಮ ಜಿಲ್ಲೆಯ ಅಭಿವೃದ್ಧಿ ದೃಷ್ಠಿಯಿಂದ ಸೌಹಾರ್ದಯುತವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಅನುದಾನಗಳು ಮತ್ತು ಎಲ್‌ಒಸಿ ವಿಷಯದಲ್ಲಿ ಜನವರಿ ತಿಂಗಳಲ್ಲಿ ಭೇಟಿ ಮಾಡಿದ್ದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ಗುರುವಾರ ಮಾಧ್ಯಮದ ಜತೆ ಮಾತನಾಡಿ, ‘ಕಳೆದ ಒಂದೂವರೆ ತಿಂಗಳಿಂದ ಚುನಾವಣೆಯಲ್ಲಿ ಬ್ಯುಸಿ ಇದ್ದೀನಿ ಮತ್ತು ಒಂದೂವರೆ ತಿಂಗಳಿಂದ ಬೆಂಗಳೂರಿಗೆ ಒಂದು ದಿನವೂ ಹೋಗಿಲ್ಲ. ಹಾಗಾಗಿ ಡಿ.ಕೆ.ಶಿವಕುಮಾರ್ ಆಗಲಿ, ಬೇರೆ ಯಾವುದೇ ರಾಜಕಾರಣಿ ಆಗಲಿ ಭೇಟಿ ಮಾಡುವ ಸಂದರ್ಭ ಎಲ್ಲಿ ಬರುತ್ತೆ. ಅಂದು ನೀವು ರೇವಣ್ಣ ಕುಟುಂಬ ಕಾಂಗ್ರೆಸ್‌ಗೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಸುದ್ದಿ ಮಾಡಿದ್ದಿರಿ, ಈ ಉಹಾಪೋಹಗಳನ್ನೆಲ್ಲಾ ಬಿಟ್ಟುಬಿಡಿ. ದಯವಿಟ್ಟು ರಾಜ್ಯದ ಜನತೆಗೆ ಒಂದು ಸ್ಪಷ್ಟನೆ ಇರಲಿ ಮತ್ತು ಯಾವುದೇ ತರಹದ ವಿಷಯಗಳ ಬಗ್ಗೆ ದುರಾಲೋಚನೆ ಇರಬಾರದು’ ಎಂದ ಹೇಳಿದರು.

‘ಕಾರ್ಯಕರ್ತರು ಯಾರೂ ಗೊಂದಲದಲ್ಲಿ ಇಲ್ಲ. ನಿನ್ನೆಯೂ ನಾವೆಲ್ಲಾ ಸಭೆ ಮಾಡಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದು, ನೂರಕ್ಕೆ ನೂರು ಪ್ರಜ್ವಲ್ ರೇವಣ್ಣ ಅವರು ಗೆಲ್ತಾರೆ ಎಂದು ವಿಶ್ವಾಸದಿಂದ ನುಡಿದರು.

ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತಂತೆ ಮಾತನಾಡಿ, ‘ಯಾರು ಏನು ಬೇಕಾದರೂ ಚಾರ್ಜ್ ಮಾಡಿಕೊಳ್ಳಲಿ, ಎಸ್‌ಐಟಿ ರಚನೆಯಾಗಿದೆ. ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಿದ್ದಾರೆ. ಅಲ್ಲಿ ಏನು ಸಾಬೀತಾಗಬೇಕೋ ಸಾಬೀತಾಗಲಿ. ಅದು ಯಾವ ಉದ್ದೇಶಕ್ಕೋಸ್ಕರ ರಚನೆಯಾಗಿದೆ, ಅದರಲ್ಲಿ ಏನು ಸಾಬೀತಾಗುತ್ತೆ ಎನ್ನುವುದನ್ನು ಕಾದು ನೋಡೋಣ. ಪ್ರಜ್ವಲ್ ಬರುವ ಬಗ್ಗೆ ನನಗೆ ಮಾಹಿತಿ ಇಲ್ಲ’ ಎಂದು ಹೇಳಿದರು.

ಶಾಸಕ ಎಚ್.ಡಿ.ರೇವಣ್ಣ ವಿರುದ್ಧವೂ ಪ್ರಕರಣ ದಾಖಲು ಕುರಿತ ಪ್ರಶ್ನೆಗೆ ಉತ್ತರಿಸಿ, ‘ರೇವಣ್ಣ ಅವರ ಮೇಲೆ ಸಾವಿರ ಕೇಸ್ ಮಾಡಲಿ, ರೇವಣ್ಣ ಏನೆಂದು ನಮ್ಮ ಜಿಲ್ಲೆಯ, ನಮ್ಮ ತಾಲೂಕಿನ ಜನರಿಗೆ ಗೊತ್ತು. ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ. ಅವರ ರೀತಿ ರಾಜಕಾರಣ ಮಾಡಿದವರು ಇಲ್ಲ. ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಾದರೂ ಮಾಡುತ್ತಾರೆ. ಅವರನ್ನು ಸಿಲುಕಿಸಬೇಕು, ವೀಕ್ ಮಾಡಬೇಕು ಎಂದು ಷಡ್ಯಂತ್ರ ಮಾಡ್ತಾ ಇದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೊಳೆನರಸೀಪುರ ಪಟ್ಟಣದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ಮಾಧ್ಯಮದ ಜತೆ ಮಾತನಾಡಿದರು.