ದಾಬಸ್‍ಪೇಟೆ: ಶಿಕ್ಷಕರು ನನಗೆ ಮತ ನೀಡಿ 5 ಭಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ಹೋರಾಟ ಮಾಡಿದ್ದೇನೆಂದು ವಿಧಾನಪರಿತ್ ಸದಸ್ಯ ಪುಟ್ಟಣ್ಣ ಹೇಳಿದರು

ದಾಬಸ್‍ಪೇಟೆ: ಶಿಕ್ಷಕರು ನನಗೆ ಮತ ನೀಡಿ 5 ಭಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ಹೋರಾಟ ಮಾಡಿದ್ದೇನೆಂದು ವಿಧಾನಪರಿತ್ ಸದಸ್ಯ ಪುಟ್ಟಣ್ಣ ಹೇಳಿದರು.

ಕಂಚುಗಲ್ ಬಂಡೆಮಠದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆ ಸೇರಿದಂತೆ ಸೋಲೂರು ಹೋಬಳಿಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಮತಯಾಚಿಸಿ ಮಾತನಾಡಿದ ಅವರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಜಿಲ್ಲೆಯ ಶಿಕ್ಷಕರು ನನಗೆ ಮತ ನೀಡಿ 5 ಭಾರಿ ವಿಧಾನ ಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದು, ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ನಿರಂತರ ಹೋರಾಡಿಕೊಂಡು ಬಂದಿದ್ದೇನೆ. ಹೋರಾಟಗಳ ಮೂಲಕ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇನೆ ಎಂದರು.

ನೂರಕ್ಕೆ ನೂರು ಗೆಲುವು ನನ್ನದೇ:

ಶಿಕ್ಷಣವೇ ಸಂಪತ್ತು ಎಂಬುದನ್ನು ಮನವರಿಕೆ ಮಾಡಿ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ನೂರಕ್ಕೆ ನೂರು ಗೆಲುವು ನನ್ನದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಜಾತಿ, ಧರ್ಮ, ಪಕ್ಷಬೇಧ ಪರೆತು ಎಲ್ಲಾ ಶಿಕ್ಷಕರು ನನಗೆ ಮತ ನೀಡಿ, ಶಿಕ್ಷಣ ರಂಗದ ಪ್ರಗತಿಗೆ ದುಡಿಯಲು ಪ್ರೋತ್ಸಾಹ ನೀಡಿ ಎಂದು ಮನವಿ ಮಾಡಿದರು. ನಿಮ್ಮ ಋಣ ತೀರಿಸಲು ನಿರಂತರವಾಗಿ ಸೇವೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ವಿವಿಧ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ಪೋಟೋ 2 :

ಸೋಲೂರು ಹೋಬಳಿಯ ಕಂಚುಗಲ್ ಬಂಡೆಮಠದ ಶ್ರೀ ಸಿದ್ದಗಂಗಾ ಗ್ರಾಮಾಂತರ ಪ್ರೌಢಶಾಲೆಗೆ ಭೇಟಿ ನೀಡಿದ ವಿಧಾನಪರಿತ್ ಸದಸ್ಯ ಪುಟ್ಟಣ್ಣ ಅವರನ್ನು ಶಾಲಾ ಶಿಕ್ಷಕರು ಅಭಿನಂದಿಸಿದರು