ಸಾರಾಂಶ
ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಕನ್ನಡಪ್ರಭ ವಾರ್ತೆ ಸಾವಳಗಿ
ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಇದರಿಂದ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.ಜಮಖಂಡಿ ತಾಲೂಕು ಮಾಳಿ ಸಮಾಜ ನೌಕರರ ಸಂಘ, ಜಮಖಂಡಿ ಹಾಗೂ ಸಾವಳಗಿ ಮಾಳಿ ಸಮಾಜದ ಸಮಸ್ತ ಗುರು-ಹಿರಿಯರ ಆಶ್ರಯದಲ್ಲಿ ಭಾನುವಾರ 2023-24ನೇ ಸಾಲಿನಲ್ಲಿ ಎಸ್ ಎಸ್‌ಎಲ್‌ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85ಕ್ಕೂ ಅಧಿಕ ಅಂಕ ಪಡೆದಿರುವ ಜಮಖಂಡಿ ತಾಲೂಕಿನ ಮಾಳಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿ,
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟಯಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು. ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದರು.ಕೈಚಾಚಿ ಬೇಡದ ಈ ಮಾಳಿ ಸಮಾಜಕ್ಕೆ ಸಮುದಾಯ ಭವನ ಪೂರ್ಣ ಮಾಡಲು 10 ಲಕ್ಷ ಅನುದಾನ ಸರ್ಕಾರದಿಂದ ಕೊಡಿಸಿದ್ದೇನೆ. ನಮ್ಮ ಸರ್ಕಾರದಲ್ಲಿ ಮಾಳಿ ಸಮಾಜದ ಶ್ರೀಧರ ಕಣ್ಣೂರ ಅವರನ್ನು ನಾಮನಿರ್ದೇಶಿತ ಸದಸ್ಯನನ್ನಾಗಿ ಮಾಡಿದ್ದೇವೆ. ನಮ್ಮ ಬೆಂಬಲ ಸದಾ ಇರಲಿದೆ ಎಂದರು.
ಸಂತೋಷ ಬಡಕಂಬಿ ವಿಶೇಷ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬಸವರಾಜ ಸಿಂಧೂರ, ಕಾಶೀನಾಥ ಕಂಕಾಳೆ, ಕಾಡು ಮಾಳಿ, ಜಿ.ಎಮ್. ಬುದ್ನಿ, ಸಿದ್ದಪ್ಪ ಮೆಂಡಿಗೇರಿ, ಸುಭಾಷ ಪಾಟೋಳಿ, ಪೂರ್ಣಿಮಾ ಮಾಳಿ, ಬಸವರಾಜ ಬಾಳಿಕಾಯಿ, ಸಾಬು ಮಾಳಿ, ಚನ್ನಪ್ಪ ಮಾಳಿ, ಜೀವಪ್ಪ ಮಾಳಿ, ಗ್ರಾಪಂ ಅಧ್ಯಕ್ಷೆ ಕವಿತಾ ಪಾಟೋಳಿ, ಬಸವರಾಜ ಮಾಳಿ ಸೇರಿದಂತೆ ಅನೇಕರು ಇದ್ದರು.