ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ಚುನಾವಣೆ ಸಂದರ್ಭದಲ್ಲಿ ಬಂದು ಮುಖ ತೋರಿಸಿ ಮತ ಕೇಳುವವರನ್ನು ನಂಬಬೇಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನಿ, ನಾವು ನಿರಂತರ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿ ನಿಮ್ಮ ವಿಶ್ವಾಸ ಉಳಿಸಿಕೊಂಡು ಹೋಗುತ್ತೇವೆ ಎಂದು ಸಂಸದ ರಾಘವೇಂದ್ರ ಹೇಳಿದರು.ಶಿರಾಳಕೊಪ್ಪ ಪಟ್ಟಣದ ಎಸ್‌ಜೆಪಿ ಐಟಿಐವತಿಯಿಂದ ಶಿವ ಸಾಂಸ್ಕೃತಿಕ ವನದಲ್ಲಿ ಗುರುವಾರ ಸಂಜೆ ನಡೆದ ಶಿರಾಳಕೊಪ್ಪ ಭಾಗದ ಮಹಿಳೆಯರ ಬೃಹತ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮತ್ತೊಮ್ಮೆ ರಾಘವೇಂದ್ರ ಸಂಸದನಾಗುವುದು ಸೂರ್ಯ ಚಂದ್ರರು ಇರುವಷ್ಟೆ ಸತ್ಯ. ಚುನಾವಣೆಯಲ್ಲಿ ರಾಜಕೀಯ ಜೀವ ಕೊಟ್ಟವರು ತಾಯಂದಿರು ನಿಮ್ಮನ್ನು ನಾವು ಎಂದೂ ಮರೆಯುವದಿಲ್ಲ.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನಾಲ್ಕು ಬಾರಿ ಸಂಸದರಾಗಿದ್ದರು. ಮುಖ್ಯಮಂತ್ರಿ ಆದವರು, ಒಮ್ಮೆ ಬಿಜೆಪಿಯಿಂದ ಆರಿಸಿ ಬಂದಿದ್ದರು. ಆದರೆ ಮಧು ಬಂಗಾರಪ್ಪ ಅಧಿಕಾರದ ಮದದಿಂದ ಬಿಜೆಪಿ ಹಾಗೂ ಮತದಾರರನ್ನು ದೂರುತ್ತಿದ್ದಾರೆ. ಅದು ಅವರ ಸಂಸ್ಕೃತಿ ತೋರಿಸುತ್ತದೆ ಎಂದು ಹೇಳಿದರು.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದ ವೇಳೆ ಶಿಕಾರಿಪುರಕ್ಕೆ ಜಿಲ್ಲಾ ಆಸ್ಪತ್ರೆ ಮಂಜೂರು ಮಾಡಿಸಲಾಗಿತ್ತು. ಆ ಆಸ್ಪತ್ರೆಯಿಂದ ಶಿಕಾರಿಪುರ, ಶಿರಾಳಕೊಪ್ಪ, ಸೊರಬ ಪಕ್ಕದ ಹಿರೇಕೆರೂರ ತಾಲೂಕಿನ ಜನಕ್ಕೆ ಅನಕೂಲವಾಗಿತ್ತು. ಆದರೆ ಕಾಂಗ್ರೆಸ್‌ರವರು ಕುಂಟು ನೆಪಹೇಳಿ ಹಲವಾರು ತಾಲೂಕಿನ ಜನರಿಗೆ ಅನಕೂಲ ವಾಗುವ ಆಸ್ಪತ್ರೆ ರದ್ದು ಮಾಡಿಸಿದರು. ಜನರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಕುಟಿಕಿದರು.
ಶಿವಮೊಗ್ಗದಿಂದ ಶಿಕಾರಿಪುರ ಮುಖಾಂತರ ಕನಿಷ್ಠ ೨೦ ರಾಜ್ಯಗಳಿಗೆ ಸಂಕಲ್ಪ ಕಲ್ಪಿಸುವಂತಹ ₹೧೫೦೦ ಕೋಟಿ ವೆಚ್ಚದ ರೇಲ್ವೆ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಈ ಭಾಗದ ಜನರು ೨೦ ರಾಜ್ಯಗಳಿಗೆ ಪ್ರವಾಸ ಮಾಡುವ ಹಾಗೂ ವ್ಯವಹಾರಿಕವಾಗಿ ಉಪಯೋಗವಾಗಲಿದೆ.ಮನೆಯಲ್ಲಿ ಕಟ್ಟಿಗೆ ಊದಿ ಆರೋಗ್ಯ ಹಾಳು ಮಾಡಿಕೊಳ್ಳುವದನ್ನು ಕಂಡ ಮೋದಿಜಿ ಉಜ್ವಲ ಯೋಜನೆ ಅಡಿ ಉಚಿತ ಗ್ಯಾಸ್ ನೀಡಿದರು. ಮನೆಯಲ್ಲಿ ಒಂದು ಕುಟುಂಬಕ್ಕೆ ಏನು ಬೇಕು ಅದೆಲ್ಲವನ್ನು ಮೋದಿ ಸರ್ಕಾರ ಕೊಟ್ಟು ದೇಶದ ಮಹಿಳೆಯರ ಮತ್ತು ಜನರ ಏಳಿಗೆಗೆ ಸಹಕಾರ ನೀಡಿದ್ದಾರೆ. ರಾಘವೇಂದ್ರ ನಿಮ್ಮ ಮಗನೆಂದು ತಿಳಿದು ಮತ್ತೊಮ್ಮೆ ಆಶೀವರ್ದಿಸಬೇಕು ಎಂದು ವಿನಂತಿಸಿದರು.
ವಿಧಾನಪರಿಷತ್ ಸದಸ್ಯ ರುದ್ರೇಗೌಡ ಮಾತನಾಡಿ, ದೇಶದಲ್ಲಿ ನರೇಂದ್ರ ಮೋದಿಯವರು ಅಭಿವೃದ್ಧಿ ಕಾರ್ಯಗಳಿಗೆ ಮುಂದಾದರೆ, ಸಂಸದ ರಾಘವೇಂದ್ರ ಉತ್ತಮ ಕೆಲಸ, ಹೆಸರು ಮಾಡಿ ೫ ವರ್ಷದಲ್ಲಿ ₹೨೦ ಸಾವಿರ ಕೋಟಿ ಕೆಲಸ ಮಾಡಿ ೨ನೇ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಲು ಹೆಮ್ಮೆ ಆಗುತ್ತದೆ ಎಂದರು.ನಮಗೆ ಹಾಗೂ ಮುಂದಿನ ಪೀಳೆಗೆಗೆ ಅನಕೂಲವಾಗುವಂತಹ ಕೆಲಸ ಮಾಡಬೇಕು ಎಂಬ ಉದೇಶದಿಂದ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತಂದು ವಿಕಸಿತ ಭಾರತದ ಮತ್ತೆ ಮೋದಿ ಮತ್ತೆ ರಾಘಣ್ಣ ಎಂಬ ಘೋಷವಾಕ್ಯದೊಂದಿಗೆ ನಾವು ಮಾತ್ರ ಮತ ಹಾಕದೇ ಇತರರಿಂದ ಮತ ಹಾಕಿಸುವ ಕಾರ್ಯದೊಂದಿಗೆ ರಾಘಣ್ಣ ಅವರನ್ನು ಗೊಲ್ಲಿಸೋಣ ಎಂದರು.
ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ನಮಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರಿಗೆ ನಾವು ಮತ ಹಾಕಬೇಕು. ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಹೇಳುವದಿಲ್ಲ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬರೂ ಯೋಚಿಸಿ ಮತಹಾಕಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರವನ್ನು ಜಾರಿಗೆ ತರಬೇಕು ಎಂದರು.ಜೆಡಿಎಸ್ ರಾಜ್ಯ ಕಾರ್ಯದರ್ಶಿ ಈರಯ್ಯ ನಾಯಕ್ ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿದೇವಿ, ನಿವೇದಿತಾ ರಾಜು, ತಾಲೂಕ ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಬಳಿಗಾರ್, ಕೆ.ರೇವಣಪ್ಪ, ಅಶೋಕ, ಸಣ್ಣ ಹನುಮಂತಪ್ಪ, ಸೇರಿ ಮಹಿಳಾ ಮೋರ್ಚಾ ಬಿಜೆಪಿ ಪದಾದಿಕಾರಿಗಳಿದ್ದರು.