ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳೋಣ

| Published : Apr 05 2024, 01:08 AM IST

ಸಾರಾಂಶ

ತಾಲೂಕಾಧ್ಯಕ್ಷರನ್ನಾಗಿ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಎಂ.ಹೆಚ್.ಪೂಜಾರಿ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆದೇಶಿಸಿದ್ದಾರೆ. ನಗರದಲ್ಲಿರುವ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಆದೇಶ ಪ್ರತಿ ನೀಡಿದ ಅವರು ರೈತಪರವಾದ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಇಂಡಿ ತಾಲೂಕಾಧ್ಯಕ್ಷರನ್ನಾಗಿ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಎಂ.ಹೆಚ್.ಪೂಜಾರಿ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆದೇಶಿಸಿದ್ದಾರೆ. ನಗರದಲ್ಲಿರುವ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಆದೇಶ ಪ್ರತಿ ನೀಡಿದ ಅವರು ರೈತಪರವಾದ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.

ಇಡೀ ಜಗತ್ತಿನಲ್ಲಿ ಶೇ 75ರಷ್ಟು ಜನರು ಉದ್ಯೋಗಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ಹಾಗೆ ದೇಶದ ಪ್ರಗತಿಯಲ್ಲಿ ಕೃಷಿಯ ಪಾತ್ರ ಬಹು ದೊಡ್ಡದಾಗಿದೆ, ಆದರೆ ವಾಸ್ತವದಲ್ಲಿ ರೈತರಿಗೆ ದಿನನಿತ್ಯ ನೂರಾರು ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿ ಅದನ್ನು ನಿಭಾಯಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಯಾವುದೇ ಅನ್ಯಾಯವಾದರೆ ತಕ್ಷಣದಲ್ಲಿ ಕಂಕಣಬದ್ಧರಾಗಿ ನ್ಯಾಯಕ್ಕಾಗಿ ನಾವೂ ನೀವೆಲ್ಲರೂ ನಿಲ್ಲಬೇಕು. ಸಂಘಟನೆಯಲ್ಲಿ ಬಡವ ಬಲ್ಲಿದ, ಮೇಲು ಕೀಳು, ಹಿರಿಯ ಕಿರಿಯ ಎಂಬಿತ್ಯಾದಿ ತಾರತಮ್ಯ ಎಸಗದೇ, ಇದರಲ್ಲಿ ರಾಜಕೀಯ ಮಾಡದೇ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಎಲ್ಲರನ್ನು ಸಮಾನಾಗಿ ಕಾಣಬೇಕು ಎಂದರು.

ಅದೇ ರೀತಿ ಇಂಡಿ ತಾಲೂಕಿನಲ್ಲಿ ಬರುವ ಎಲ್ಲ ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ಮಾಡಲು ಇಂದಿನಿಂದ ನಿಮಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದರಲ್ಲಿ ಯುವ, ಹಿರಿಯ, ಮಹಿಳಾ ಹಾಗೂ ಕಾರ್ಮಿಕ ರೈತ ಸಂಘಟನೆಯನ್ನು ಶಿಸ್ತುಬದ್ಧವಾಗಿ ಎಲ್ಲರನ್ನು ಪರಿಗಣನೆಗೆ ತೆಗೆದುಕೊಂಡು ಸಂಘಟನೆ ಮಾಡುವಂತೆ ತಿಳಿಸಲಾಯಿತು.

ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ವಿಜಯಪುರ ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾಲೂಕಾ ಪ್ರಧಾನ

ಕಾರ್ಯದರ್ಶಿ ಮಲ್ಲಿಕಾರ್ಜುನ ಗೋಡೆಕಾರ, ಮುಖಂಡ ಮಲ್ಲಿಕಾರ್ಜುನ ಮಹಾಂತಮಠ, ಅಥರ್ಗಾ ಗ್ರಾಮದ ಲಕ್ಷ್ಮಣ ಪೂಜಾರಿ ಇದ್ದರು.