ದಾಬಸ್‍ಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ಫಲಾನುಭವಿಗಳಿಗೆ ಕುಂದು-ಕೊರತೆಗಳಿದ್ದರೆ ಸ್ಥಳೀಯ ಪಂಚಾಯತಿ ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತಿಳಿಸಿದರೆ ಅಧಿಕಾರಿಗಳ ಮುಖಾಂತರ ನೆರವಾಗುತ್ತೇವೆ ಎಂದು ತಾಪಂ ಇಒ ಬಿಂದು ಹೇಳಿದರು.
ದಾಬಸ್‍ಪೇಟೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳ ಫಲಾನುಭವಿಗಳಿಗೆ ಕುಂದು-ಕೊರತೆಗಳಿದ್ದರೆ ಸ್ಥಳೀಯ ಪಂಚಾಯತಿ ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತಿಳಿಸಿದರೆ ಅಧಿಕಾರಿಗಳ ಮುಖಾಂತರ ನೆರವಾಗುತ್ತೇವೆ ಎಂದು ತಾಪಂ ಇಒ ಬಿಂದು ಹೇಳಿದರು.
ಕುಲುವನಹಳ್ಳಿ ಗ್ರಾಪಂ ವತಿಯಿಂದ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾ, ತಾಲೂಕು ಮಟ್ಟದಲ್ಲಿ ಕುಂದುಕೊರತೆ ಸಭೆ ನಡೆಸುತ್ತಿದ್ದೆವು. ಆದರೆ ಇದೀಗ ತಾಲೂಕಿನ 21 ಗ್ರಾಪಂ ವ್ಯಾಪ್ತಿಯಲ್ಲಿ ಮಾರ್ಚ್ ಅಂತ್ಯದೊಳಗೆ ಕುಂದುಕೊರತೆ ಸಭೆ ನಡೆಸಲಾಗುತ್ತದೆ. ಗ್ಯಾರಂಟಿಗಳಿಂದ ಎಲ್ಲಾ ವರ್ಗದವರಿಗೂ ಅನುಕೂಲವಾಗಿದೆ. ಪ್ರತಿಯೊಬ್ಬ ನಾಗರಿಕರಿಗೂ ಈ ಯೋಜನೆಯ ಬಗ್ಗೆ ಮಾಹಿತಿ ತಲುಪಿಸಬೇಕಿದೆ. ಪ್ರಚಾರ ನೀಡುವುದರ ಜತೆಗೆ ಸಮಸ್ಯೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಯುವನಿಧಿಯಲ್ಲಿ ನಮ್ಮ ತಾಲೂಕು ಮೊದಲ ಸ್ಥಾನದಲ್ಲಿದೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡಲು ಕೇಂದ್ರಕ್ಕೆ ಮನವಿ ಮಾಡಿದಾಗ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಭಾಷಣ ಮಾಡುತ್ತಾರೆ. ಭಾಷಣ ಮಾಡುವುದರಿಂದ ಜನರ ಹೊಟ್ಟೆ ತುಂಬಲ್ಲ. ಜನರಿಗೆ ಅವಶ್ಯ ಯೋಜನೆ ನೀಡಬೇಕು. ಆಹಾರ ಭದ್ರತಾ ಕಾಯಿದೆ ನಮ್ಮ ಸರ್ಕಾರ ಜಾರಿಗೆ ತಂದಿದೆ. ಬಡವರು ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.
ಗ್ಯಾರಂಟಿಗಳ ಅಂಕಿ-ಅಂಶ: ಶಕ್ತಿ ಯೋಜನೆಯಲ್ಲಿ ತಾಲೂಕಿನ 20 ಲಕ್ಷಕ್ಕೂ ಅಧಿಕ ಜನರು ಬಸ್ನಲ್ಲಿ ಪ್ರಯಾಣಿಸಿದ್ದಾರೆ. 4.47 ಕೋಟಿ ಆದಾಯ ಸಂಸ್ಥೆಗೆ ಬಂದಿದೆ. ಹನುಮಂತಪುರ, ಇಂದಿರಾನಗರ, ಗುಂಡೇನಹಳ್ಳಿ ಬಸ್ ನಿಲುಗಡೆಗೆ ಮನವಿ ಮಾಡಿದ್ದಾರೆ. ಅದಷ್ಟೂ ಬೇಗ ಸ್ಪಂದಿಸುತ್ತೇವೆ. ಯುವನಿಧಿ ಯೋಜನೆಯಡಿ 1165 ಜನರು ನೋಂದಣಿಯಾಗಿದ್ದು, 903 ಫಲಾನುಭವಿಗಳಿದ್ದಾರೆ. ಈ ಗ್ರಾಪಂ ವ್ಯಾಪ್ತಿಯಲ್ಲಿ 17 ಫಲಾನುಭವಿಗಳಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ 5 ನ್ಯಾಯಬೆಲೆ ಅಂಗಡಿಯಲ್ಲಿ, 230 ಅಂತ್ಯೋದಯ ಕಾರ್ಡ್‍ಗಳಿವೆ. 2017 ಬಿಪಿಎಲ್ ಬಳಕೆದಾರರಿದ್ದಾರೆ. ಗೃಹಜ್ಯೋತಿಯಲ್ಲಿ 1892 ಫಲಾನುಭವಿಗಳಿದ್ದು, 2609 ಮೀಟರ್ ಗಳಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ನರಸಿಂಹರಾಜು, ಗ್ರಾಪಂ ಅಧ್ಯಕ್ಷೆ ಸುನಂದಮ್ಮ, ಉಪಾಧ್ಯಕ್ಷ ರಂಗನಾಥ್, ಪಿಡಿಒ ಮೋಹನ್ ಕುಮಾರ್, ಸದಸ್ಯರಾದ ಸೌಭಾಗ್ಯಮ್ಮ, ರಂಗಸ್ವಾಮಿ, ಚಂದ್ರಶೇಖರಯ್ಯ, ಆಹಾರ ಶಿರಸ್ತೇದಾರ ಕೃಷ್ಣಮೂರ್ತಿ, ಸಿಡಿಪಿಒ ಇಲಾಖೆಯ ನಾಗೇಶ್, ಬೆಸ್ಕಾಂ ಇಲಾಖೆಯ ಜೆಇ ತಿಮ್ಮಯ್ಯ, ಸಾರಿಗೆ ಇಲಾಖೆ ನಿಯಂತ್ರಕ ಮೇಲ್ವಿಚಾರಕ ರಾಘುರಾಮ್, ಬಿಎಂಟಿಸಿ ಇಲಾಖೆಯ ನಿಯಂತ್ರಕ ಶ್ರೀಕಾಂತ್, ಯುವನಿಧಿ ನಗರಾಭಿಯಾನ ವ್ಯವಸ್ಥಾಪಕ ವೆಂಕಣ್ಣ ಕರಡಿ, ಕಾರ್ಯದರ್ಶಿ ಧನಂಜಯ್, ಸಿಬ್ಬಂದಿಗಳಾದ ಪವನ್, ರಂಗನಾಥ್, ದಿಲೀಪ್, ಪ್ರಮೀಳಮ್ಮ, ಶಿವಕುಮಾರಸ್ವಾಮಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ನೀರು ನಿರ್ವಾಹಕರು ಫಲಾನುಭವಿಗಳಿದ್ದರು.
ಫೆÇೀಟೋ 1 :ಕುಲುವನಹಳ್ಳಿ ಗ್ರಾಪಂನಲ್ಲಿ ತಾಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಕುಂದು ಕೊರತೆ ಸಭೆಯನ್ನು ತಾಪಂ ಇಒ ಬಿಂದು, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾಜು, ತಾಲೂಕು ಅಧ್ಯಕ್ಷೆ ನಾಗರತ್ನಮ್ಮ, ಗ್ರಾಪಂ ಅಧ್ಯಕ್ಷೆ ಸುನಂದಮ್ಮ ಉದ್ಘಾಟಿಸಿದರು.