ಸ್ವಾಮೀಜಿಗಳು ಆರೋಗ್ಯವಂತರಾಗಿದ್ದರೆ ಸಮಾಜ ತಿದ್ದಲು ಸಾಧ್ಯ

| Published : Nov 11 2024, 01:03 AM IST

ಸ್ವಾಮೀಜಿಗಳು ಆರೋಗ್ಯವಂತರಾಗಿದ್ದರೆ ಸಮಾಜ ತಿದ್ದಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ: ಸ್ವಾಮಿಗಳಾದವರು ಆರೋಗ್ಯವಂತರಾಗಿದ್ದಾಗ ಮಾತ್ರ ಸಮಾಜಕ್ಕೆ ತಿಳುವಳಿಕೆಯನ್ನು ನೀಡಲು ಸಾಧ್ಯವಿದೆ. ಜೊತೆಗೆ ಸಮಾಜದ ಕೊಳೆಯನ್ನು ತೊಳೆಯಲು ಸಾಧ್ಯವಿದೆ. ಅಂತಹ ಆರೋಗ್ಯವನ್ನು ಶಿವಲಿಂಗಾನಂದ ಶ್ರೀಗಳು ಹೊಂದಿದ್ದಾರೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.

ಚಿತ್ರದುರ್ಗ: ಸ್ವಾಮಿಗಳಾದವರು ಆರೋಗ್ಯವಂತರಾಗಿದ್ದಾಗ ಮಾತ್ರ ಸಮಾಜಕ್ಕೆ ತಿಳುವಳಿಕೆಯನ್ನು ನೀಡಲು ಸಾಧ್ಯವಿದೆ. ಜೊತೆಗೆ ಸಮಾಜದ ಕೊಳೆಯನ್ನು ತೊಳೆಯಲು ಸಾಧ್ಯವಿದೆ. ಅಂತಹ ಆರೋಗ್ಯವನ್ನು ಶಿವಲಿಂಗಾನಂದ ಶ್ರೀಗಳು ಹೊಂದಿದ್ದಾರೆ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ತಿಳಿಸಿದರು.

ನಗರದ ಕಬೀರಾನಂದ ನಗರದಲ್ಲಿರುವ ಶ್ರೀ ಕಬೀರಾನಂದ ಆಶ್ರಮದ ಆವರಣದಲ್ಲಿ ಶನಿವಾರ ಸಂಜೆ ಪೀಠಾಧಿಪತಿಗಳಾದ ಶ್ರೀ ಶಿವಲಿಂಗಾನಂದ ಶ್ರೀಗಳವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದಿನ ದಿನಮಾನದಲ್ಲಿ ಮಠಗಳಿಗೆ ಒಳ್ಳೆಯ ಸ್ವಾಮಿಗಳು ಸಿಗುವುದು ಕಷ್ಟವಾಗಿದೆ. ಮಠದ ಮತ್ತು ಭಕ್ತರ ಹಣೆಬರಹ ಚನ್ನಾಗಿದ್ದರೆ ಮಾತ್ರ ಉತ್ತಮವಾದ ಸ್ವಾಮಿಗಳು ಸಿಗಲು ಸಾಧ್ಯವಿದೆ. ಆದಿಚುಂಚನಗಿರಿ ಶ್ರೀಗಳು ಇವರನ್ನು ಇಲ್ಲಿಗೆ ಕಳುಹಿಸುವುದರ ಮೂಲಕ ಈ ಮಠದ ಉಸ್ತುವಾರಿಯನ್ನು ನೋಡಿಕೋ ಎಂದಾಗ ಇಲ್ಲಿಗೆ ಬಂದ ಶ್ರೀಗಳು, ಹಲವಾರು ವಿದ್ಯಾ ಸಂಸ್ಥೆಗಳನ್ನು ಪ್ರಾರಂಭ ಮಾಡಿ ಮಕ್ಕಳಿಗೆ ವಿದ್ಯಾದಾನ, ಅನ್ನದಾನ, ಗೋವುಗಳ ರಕ್ಷಣೆ, ವೃದ್ಧರಿಗೆ ಆಶ್ರಯ ನೀಡುವ ಆಶ್ರಯ ತಾಣವನ್ನಾಗಿ ಮಾಡಿದ್ದಾರೆ ಎಂದರು.

ಈ ಮಠಕ್ಕೆ ಆಗ ಯಾವುದೇ ರೀತಿಯ ಆಸ್ತಿಯಾಗಲಿ ಖಾಯಂ ಆದ ಭಕ್ತರಾಗಲಿ ಇರಲಿಲ್ಲ. ಅಂತಹ ಸಮಯದಲ್ಲಿ ಬಂದ ಶ್ರೀಗಳು ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಮಠವನ್ನು ಸಮೃದ್ಧಗೊಳಿಸಿ, ಮುಂದೆ ಬರುವವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮಾಡಿದ್ದಾರೆ. ತಮಗೆ ಏನೇ ಕಷ್ಟ ಬಂದರೂ ಯಾರ ಮುಂದೆಯೂ ಹೇಳದೆ ತಮ್ಮ ಕಷ್ಟಕ್ಕೆ ತಾವೇ ಪರಿಹಾರವನ್ನು ಕಂಡುಕೊಂಡಿದ್ದಾರೆ. ಇದರಿಂದ ಈ ಮಠ ಉತ್ತಮ ಸ್ಥಿತಿಯನ್ನು ತಲುಪಿದೆ. ಮಠಕ್ಕೆ ಯಾವುದೇ ಜಾತಿ, ಧರ್ಮ, ಸಂಪ್ರದಾಯ, ಕಟ್ಟೆಳೆ ಇಲ್ಲ. ಎಲ್ಲರನ್ನು ಸಹ ಅಪ್ಪಿಕೊಳ್ಳುವ ಮಠ ಇದಾಗಿದೆ ಎಂದರು.

ಸಮಾರಂಭದ ಸಾನಿಧ್ಯವಹಿಸಿದ್ದ ಮಾದಾರ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ಮಾತನಾಡಿ, ಶಿವಲಿಂಗಾನಂದ ಶ್ರೀಗಳು ಬರೀ ಒಂದು ಮಠದ ಪೀಠಾಧ್ಯಕ್ಷರಲ್ಲ. ತಾಯಿ ಹೃದಯದ ಮಠಾಧೀಶರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಂದೊಂದು ಜಾತಿಗೆ ಒಂದು ಮಠ ಇದೆ. ಇದರಲ್ಲಿ ಕಬೀರಾನಂದಾಶ್ರಮ ಯಾವುದೇ ಜಾತಿ, ಧರ್ಮ, ಜನಾಂಗದ ಸೊಂಕು ಇಲ್ಲದೆ ಎಲ್ಲರನ್ನು ಸಹ ತಮ್ಮವರು ಎಂದು ಹೇಳಿಕೊಳ್ಳುತ್ತಾ ಬಂದವರನ್ನೆಲ್ಲಾ ತನ್ನ ಭಕ್ತರನ್ನಾಗಿಸಿ ಕೊಳ್ಳುತ್ತಿದೆ. ಈ ಮಠವನ್ನು ಶ್ರೀಗಳು ಜಾತ್ಯಾತೀತ ಮಠವನ್ನಾಗಿ ಮುನ್ನಡೆಸುತ್ತಿದ್ದಾರೆ. ಶ್ರೀಗಳು ಸಹ ಜಾತ್ಯಾತೀತವಾಗಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕಬೀರಾನಂದ ಆಶ್ರಮದ ಪೀಠಾಧಿಪತಿಗಳಾದ ಶ್ರೀ ಶಿವಲಿಂಗಾನಂದ ಶ್ರೀಗಳು, ವಚನಾನಂದ ಶ್ರೀಗಳು, ಕೈಲಾಸಪತಿ ಶ್ರೀಗಳು, ಜ್ಯೋತಿರ್ಲಿಂಗ ಶ್ರೀಗಳು, ನಗರಸಭೆ ಸದಸ್ಯ ಭಾಸ್ಕರ್, ಗುತ್ತಿಗೆದಾರ ಶಿವಕುಮಾರ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಸಿದ್ದವ್ವನಹಳ್ಳಿ ಪರಮೇಶ್, ಜಿಪಂ ನಿವೃತ್ತ ವ್ಯವಸ್ಥಾಪಕ ನಾಗರಾಜ್ ಸಗಂ, ಹಿರಿಯ ಪತ್ರಕರ್ತ ಉಜ್ಜನಪ್ಪ, ಗಣಪತಿ ಶಾಸ್ತ್ರಿ ಮತ್ತಿತರರಿದ್ದರು.