ಜಾತಿಗಣತಿ ವರದಿ ಅನುಮೋದಿಸದಿದ್ದರೆ ವಿಧಾನಸೌಧ ಮುತ್ತಿಗೆ

| Published : Oct 20 2024, 01:52 AM IST

ಜಾತಿಗಣತಿ ವರದಿ ಅನುಮೋದಿಸದಿದ್ದರೆ ವಿಧಾನಸೌಧ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯ ಜಾತಿಗಣತಿ ವರದಿಯನ್ನು ಯಾವುದೇ ಒತ್ತಡಕ್ಕೂ ಮಣಿಯದೇ, ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದಿಸಿ, ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ವೀರಣ್ಣ ಹಾಲೇಕಲ್ಲು ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.

- ಒತ್ತಡಗಳಿಗೆ ಮಣಿಯದೇ ರಾಜ್ಯ ಸರ್ಕಾರ ಮುಂದಾಗಲಿ: ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ವೀರಣ್ಣ- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಮೀಕ್ಷೆಯ ಜಾತಿಗಣತಿ ವರದಿಯನ್ನು ಯಾವುದೇ ಒತ್ತಡಕ್ಕೂ ಮಣಿಯದೇ, ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದಿಸಿ, ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ವೀರಣ್ಣ ಹಾಲೇಕಲ್ಲು ಒತ್ತಾಯಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2015ರಲ್ಲಿ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕಾಂತರಾಜು ನೇತೃತ್ವದ ಸಮಿತಿ ರಚಿಸಿ, ಸುಮಾರು ₹165 ಕೋಟಿ ಅಧಿಕ ವೆಚ್ಚದಲ್ಲಿ ರಾಜ್ಯವ್ಯಾಪಿ ಎಲ್ಲ ಜಾತಿ, ಸಮುದಾಯಗಳ ಪ್ರತಿ ಮನೆಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ ಎಂದರು.

ಕಾಂತರಾಜು ಆಯೋಗವು ಸಮೀಕ್ಷೆ ಕೈಗೊಂಡು, ಸರ್ಕಾರಕ್ಕೆ ವರದಿ ಸಲ್ಲಿಸಿ ವರ್ಷಗಳೇ ಕಳೆದಿವೆ. 9 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಜಾತಿಗಣತಿ ವರದಿಗೆ ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರಿಂದಾಗಿ ಜಾತಿಗಣತಿ ವರದಿಗೆ ಮರುಜೀವ ಬಂದಂತಾಗಿದೆ. ಸಿಎಂ ಸಿದ್ದರಾಮಯ್ಯ ಯಾರ ಒತ್ತಡಕ್ಕೂ ಮಣಿಯದೇ, ಗಟ್ಟಿ ನಿರ್ಧಾರದಿಂದ ವರದಿಯನ್ನು ಅನುಮೋದಿಸಿ, ಸಾರ್ವಜನಿಕವಾಗಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

ಒಂದುವೇಳೆ ರಾಜ್ಯ ಸರ್ಕಾರ ಒತ್ತಡಗಳಿಗೆ ಮಣಿದು, ಜಾತಿಗಣತಿ ಸಮೀಕ್ಷಾ ವರದಿ ಬಹಿರಂಗಗೊಳಿಸಲು ಹಿಂದೇಟು ಹಾಕಿದರೆ ಹಾಲುಮತ ಮಹಾಸಭಾದಿಂದ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಅಲ್ಲದೇ, ದೊಡ್ಡ ಮಟ್ಟದಲ್ಲಿ ವಿಧಾನಸೌಧ ಚಲೋದಂತಹ ಹೋರಾಟಕ್ಕೂ ಮುಂದಾಗಬೇಕಾಗುತ್ತದೆ ಎಂದು ಸಿ.ವೀರಣ್ಣ ಎಚ್ಚರಿಸಿದರು.

ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರು ದೀಟೂರು ಮಾತನಾಡಿ, ಜಾತಿ ಜನಗಣತಿ ಜಾರಿಯಿಂದ ಅನೇಕ ಸಮುದಾಯಗಳ ಆರ್ಥಿಕ ಪ್ರಗತಿ ಸಾಧ್ಯ. ಈ ಹಿನ್ನೆಲೆ ರಾಜ್ಯದ ಪ್ರತಿಯೊಬ್ಬರು, ಪ್ರತಿಯೊಂದು ಜಾತಿಗಳು ವರದಿ ಪರವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಹನುಮಂತಪ್ಪ ಸಲ್ಲಳ್ಳಿ, ಎಸ್.ಎಂ. ಸಿದ್ದಲಿಂಗಪ್ಪ, ನಾಗರಾಜ, ಮಂಜುನಾಥ ಸಂಕಲಿಪುರ ಇತರರು ಇದ್ದರು.

- - - -19ಕೆಡಿವಿಜಿ1:

ದಾವಣಗೆರೆಯಲ್ಲಿ ಶನಿವಾರ ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಸುದ್ದಿಗೋಷ್ಠಿಯಲ್ಇ ಮಾತನಾಡಿದರು. ಚಂದ್ರು ದೀಟೂರು, ಹನುಮಂತಪ್ಪ ಸಲ್ಲಳ್ಳಿ, ಎಸ್.ಎಂ. ಸಿದ್ದಲಿಂಗಪ್ಪ ಇತರರಿದ್ದರು.