ಗುರುವಿನಲ್ಲಿ ಶ್ರದ್ಧೆ ಇದ್ದರೆ ಬದುಕಲ್ಲಿ ನೆಮ್ಮದಿ

| Published : Sep 22 2024, 01:47 AM IST

ಸಾರಾಂಶ

ಗುರುವೆಂದರೆ ಸಾಕ್ಷಾತ್ ಭಗವಂತನೇ ಎಂಬ ದೃಢ ನಂಬಿಕೆ ಇದ್ದಲ್ಲಿ, ಮನುಷ್ಯ ಪರಮಾತ್ಮನನ್ನು ಬೇರೆಡೆ ಎಲ್ಲಿಯೂ ಹುಡುಕಿಕೊಂಡು ಹೋಗುವ ಪ್ರಮೇಯವೇ ಇರುವುದಿಲ್ಲ ಎಂದು ಕಲಾದಗಿ ಶ್ರೀಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಕಲಾದಗಿ

ಗುರುವೆಂದರೆ ಸಾಕ್ಷಾತ್ ಭಗವಂತನೇ ಎಂಬ ದೃಢ ನಂಬಿಕೆ ಇದ್ದಲ್ಲಿ, ಮನುಷ್ಯ ಪರಮಾತ್ಮನನ್ನು ಬೇರೆಡೆ ಎಲ್ಲಿಯೂ ಹುಡುಕಿಕೊಂಡು ಹೋಗುವ ಪ್ರಮೇಯವೇ ಇರುವುದಿಲ್ಲ ಎಂದು ಕಲಾದಗಿ ಶ್ರೀಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಪೂಜ್ಯ ಶ್ರೀ ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಶ್ರೀ ಗರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠದ ಶಾಖಾ ಮಠ ಉದಗಟ್ಟಿ ಗ್ರಾಮದಲ್ಲಿನ ಶ್ರೀ ಗುರುಲಿಂಗೇಶ್ವರ ಮಠದಲ್ಲಿ ಲಿಂ| ಪಡದಪ್ಪಯ್ಯ ಶಿವಾಚಾರ್ಯ ಸ್ವಾಮಿಗಳ ಹಾಗೂ ಲಿಂ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯರಾಧನೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ಒತ್ತಡಮಯ ಆಧುನಿಕ ಯುಗದಲ್ಲಿ ಮಾನವನಿಗೆ ಜೀವನದಲ್ಲಿ ಸುಖಃ ಶಾಂತಿ ನೆಮ್ಮದಿ ಇಲ್ಲವಾಗಿದೆ. ಇದಕ್ಕೆ ಮುಖ್ಯ ಕಾರಣ ಗುರು ಭಕ್ತಿ ಮತ್ತು ಆಧ್ಯಾತ್ಮ ಚಿಂತನೆ ಇಲ್ಲದಿರುವುದು. ಸಾಮಾಜಿಕವಾಗಿ ಎಷ್ಟೇ ಒತ್ತಡಗಳು ಬಂದರೂ ಅವುಗಳನ್ನು ಗುರು ಭಕ್ತಿ ಮತ್ತು ಆಧ್ಯಾತ್ಮ ಚಿಂತನ ಮನಸ್ಸುಳ್ಳ ವ್ಯಕ್ತಿಗಳು ಗುರು ಮಾರ್ಗದರ್ಶನದಲ್ಲಿ ನಿರಾಯಾಸವಾಗಿ ಬಗೆಹರಿಸಿಕೊಂಡು ಸುಖ ಜೀವನ ತಮ್ಮಾಗಿಸಿಕೊಳ್ಳುತ್ತಿದ್ದಾರೆ. ಸುಖಃ, ಶಾಂತಿ ನೆಮ್ಮದಿಗೆ ಆಧ್ಯಾತ್ಮ ಒಂದೇ ಪರಿಹಾರ, ಮಾನವರು ಅದೇನೇ ವೃತಾಚರಣೆ ಮಾಡಿದರೂ ಅದು ತನ್ನ ಸ್ವಾರ್ಥಕ್ಕಾಗಿ ಮಾಡಿಕೊಂಡಿರುವುದಾಗಿರುತ್ತದೆ. ಶ್ರೀಗಳು, ಗುರು ಪರಮಾತ್ಮರು, ಪೂಜ್ಯರು, ಸ್ವಾಮೀಜಿಗಳು ಮಾಡಿದ ತಪಸ್ಸು, ವೃತ, ಅನುಷ್ಠಾನ, ಮೌನಾನುಷ್ಠಾನ ವೃತ ಅನೇಕ ಕಷ್ಟಮಯ ವೃತಗಳನ್ನು ಲೋಕಲ್ಯಾಣಕ್ಕಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ಮಠದ ಅರ್ಚಕ ನಂದೀಶ ಹಿರೇಮಠ, ಚಂದ್ರಶೇಖರ ಶೆಲೆಯಪ್ಪನವರ, ಗುರುಬಸಪ್ಪ ಯಾದವಾಡ, ನಾಗಪ್ಪ ಕಂಬಾರ, ಲಕ್ಷ್ಮಣ ಬೆಟಗೇರಿ, ರಾಜೇಶ ಪೂಜಾರಿ, ಬಸುರಾಜ ಪುಂಡಿಕಟಗಿ, ಗೊವಿಂದ ಜಕ್ಕನ್ನವರ್, ಸಂಗಪ್ಪ ಜಕ್ಕನ್ನವರ್, ಯಲ್ಲಪ್ಪ ಕರಡಿಗುಡ್ಡ, ಮಂಜುನಾಥ ವಾರದ, ಶಾಸನಗೌಡ ಪಾಟೀಲ, ಇನ್ನಿತರರು ಇದ್ದರು.