ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಕಳಕಳಿ, ಕಾಳಜಿ, ಗೌರವ ಇದ್ದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಬಿಟ್ಟು ಕೊಡಲಿ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ಸವಾಲು ಹಾಕಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಬಹಳ ದೊಡ್ಡದಾಗಿ ಅಂಬೇಡ್ಕರ್ ಹಾಗೂ ಸಂವಿಧಾನ ಪರಿಪಾಲಕರು ನಾವು ಎಂದು ಬೊಬ್ಬೆ ಹೊಡೆಯುವ ಜೊತೆಗೆ ಸಂವಿಧಾನ ಉಳಿದರೆ ನಾವು ನೀವು ಉಳಿಯುತ್ತವೆ ಎಂದು ಹೇಳುತ್ತಾ ಕಳೆದ ೬೦ ವರ್ಷಗಳಿಂದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ದಲಿತರಿಗೆ ಅನ್ಯಾಯ ಮಾಡುತ್ತಾಲೇ ಬಂದಿದ್ದಾರೆ ಎಂದು ಕಿಡಿಕಾರಿದರು.
ಸಂವಿಧಾನ ಪ್ರಕಾರವೇ ಎರಡನೇ ಬಾರಿಗೆ ಸಿಎಂ ಆಗಿರುವ ಸಿದ್ದರಾಮಯ್ಯ ತಳ ಮಟ್ಟದವರು ಶೋಷಿತ ಜನಾಂಗಕ್ಕೆ ಅಧಿಕಾರ ನೀಡುವ ಬದಲು. ತಾವೇ ಅದನ್ನು ಅನುಭವಿಸುವ ಮೂಲಕ ದಲಿತರು ಹಾಗೂ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ನಿಜವಾಗಿಯೂ ನಿಮಗೆ ಗೌರವ ಇದ್ದರೆ ದಲಿತರ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದಿರುವ ನೀವು, ಆ ಸಮುದಾಯಗಳ ಋಣ ತೀರಿಸಲು ಮುಂದಾಗಬೇಕು. ಇನ್ನಾದರು ಸಿಎಂ ಪದವಿಯನ್ನು ದಲಿತರಿಗೆ ನೀಡುವ ಚಿಂತನೆಯನ್ನು ಮಾಡಬೇಕು ಎಂದರು.ಪದೇ ಪದೇ ಬಿಜೆಪಿ ಮನುವಾದಿಗಳ ಪಕ್ಷ, ಅಧಿಕಾರದಿಂದ ದೂರವಿಡಿ ಎಂದು ಹೇಳುವ ನೈತಿಕತೆ ನಿಮಗಿಲ್ಲ. ತಾವು ಅಧಿಕಾರದಲ್ಲಿದ್ದ ದಿನದಿಂದ ಇಲ್ಲಿಯ ತನಕ ದಲಿತ ಸಮುದಾಯವನ್ನು ತುಳಿದುಕೊಂಡೆ ರಾಜಕಾರಣ ಮಾಡುತ್ತಾ ಬಂದಿದ್ದೀರಿ. ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದಾಗ ನೀವು ಶೇ. ೮೦ ರಷ್ಟು ದಲಿತರು ಗ್ರಾಮ ಸಹಾಯಕರು ಇದ್ದಾರೆ. ಇವೆರಲ್ಲನ್ನು ಕಾಯಂ ಮಾಡಲು ಆಗುತ್ತದೆಯೇ, ನಮ್ಮ ಸಮುದಾಯವರು ಇಲ್ಲ ಎಂದು ನೇರವಾಗಿ ಹೇಳಿದ್ದಿರಿ. ಕಾಂಗ್ರೆಸ್ ನಲ್ಲಿ ಸಿಎಂ ಆಗಭೇಕೆಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಅವರನ್ನು ಸೋಲಿಸಿದಿರಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಜಾಣ್ಮೆಯಿಂದ ಕಳುಹಿಸಿಕೊಟ್ಟುವರು ನೀವು. ಈ ಬಾರಿಯು ಸಹ ಸಿಎಂ ಆಗುವ ಎಲ್ಲಾ ಅರ್ಹತೆ ಖರ್ಗೆ ಅವರಿಗೆ ಇದ್ದರು ಸಹ ಅವರನ್ನು ಆ ಸ್ಥಾನಕ್ಕೆ ಬರದಂತೆ ಮಾಡುವ ಮೂಲಕ ತಮ್ಮ ರಾಜಕೀಯದ್ದುಕ್ಕು ದಲಿತರನ್ನೇ ತುಳಿದುವರು ನೀವು. ಎಂದು ಪ್ರಕಾಶ್ ವಾಗ್ದಾಳಿ ಮಾಡಿದರು.
ಅನಂತ್‌ಕುಮಾರ್ ಹೆಗ್ಡೆಯನ್ನು ಬಿಜೆಪಿಯಿಂದ ದೂರವಿಡಿ ಎಂದು ಪದೇ ಪದೇ ಸಂವಿಧಾನ ದ ಬಗ್ಗೆ ಮಾತನಾಡುವ ಮೂಲಕ ದಲಿತರ ಸಮುದಾಯವನ್ನು ಘಾಸಿಗೊಳಿಸುತ್ತಿದ್ದಾರೆ. ಇದು ಪಕ್ಷಕ್ಕೆ ಹೆಚ್ಚಿನ ಹಾನಿ ಮಾಡುತ್ತಿದೆ. ಹೀಗಾಗಿ ಅನಂತ್‌ಕುಮಾರ್ ಹೆಗ್ಡೆ ಅವರಿಗೆ ಎಂಪಿ ಟಿಕೆಟ್ ನೀಡಬಾರದು. ಪಕ್ಷದಿಂದ ಅವರನ್ನು ದೂರ ಇಡುವ ಕ್ರಮಕೈಗೊಳ್ಳಬೇಕು ಎಂದು ಮೂಡ್ನೂಕೂಡು ಪ್ರಕಾಶ್ ಒತ್ತಾಯಿಸಿದರು. ಈ ವೇಳೆ ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಕಚೇರಿ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಅಶ್ವಿನ್, ಮುಖಂಡರಾದ ವೇಣುಗೋಪಾಲ್, ಮುತ್ತಿಗೆ ಮೂರ್ತಿ, ಮುಕುಂದಮೂರ್ತಿ ಇದ್ದರು.