ಒಗ್ಗಟ್ಟಿನಿಂದ ಸಾಗಿದರೆ ಉತ್ತಮ ಜೀವನ ಸಾಗಿಸಬಹುದು: ಜಿ.ಆರ್. ಷಣ್ಮುಗಪ್ಪ

| Published : Aug 31 2025, 01:07 AM IST

ಒಗ್ಗಟ್ಟಿನಿಂದ ಸಾಗಿದರೆ ಉತ್ತಮ ಜೀವನ ಸಾಗಿಸಬಹುದು: ಜಿ.ಆರ್. ಷಣ್ಮುಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಇದೊಂದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದ್ದು, ಇದನ್ನು ಬೆಳಸಿಕೊಂಡು ಹೋಗುವಂತ ಕೆಲಸ ನಿರಂತರವಾಗಿ ಮಾಡಬೇಕು ಎಂದು ತಿಳಿಸಿದರು. ಹಗಲು ರಾತ್ರಿ ಕೆಲಸ ಮಾಡುವ ಲಾರಿ ಚಾಲಕರ ಜೀವನ ಸ್ಥಿತಿಯನ್ನು ಸರ್ಕಾರ ಗಮನಿಸಬೇಕು.

ಕನ್ನಡಪ್ರಭ ವಾರ್ತೆ ಬನ್ನೂರು

ಎಲ್ಲರು ಒಗ್ಗಟ್ಟಿನಿಂದ ಸಾಗಿದರೇ ಮಾತ್ರ ಪ್ರತಿಯೊಬ್ಬ ಲಾರಿ ಮಾಲೀಕನು ಉತ್ತಮ ರೀತಿಯಲ್ಲಿ ಜೀವನ ಸಾಗಿಸಬಹುದು ಎಂದು ರಾಜ್ಯ ಲಾರಿ ಮಾಲೀಕ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ನಡೆದ ಲಾರಿ ಮಾಲೀಕರ ಸಂಘದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಲಾರಿ ಮಾಲೀಕರೆಂದರೆ ಕೆಲವರು ನಿರ್ಲಕ್ಷ್ಯದಿಂದ ಕಾಣುತ್ತಾರೆ. ಅದಕ್ಕೆ ಕಾರಣವೇ ನಮ್ಮಲ್ಲಿ ಒಗ್ಗಟ್ಟು ಇಲ್ಲದೆ ಇರುವುದು. ಅದಕ್ಕಾಗಿ ನಾವೆಲ್ಲರು ಸಂಘಟಿತರಾಗಿ ಸಾಗುವ ಮೂಲಕ ನಮ್ಮ ಗುರಿಯನ್ನು ತಲುಪಬೇಕು ಎಂದು ತಿಳಿಸಿದರು. ಇಂದು ಲಾರಿ ಮಾಲೀಕರ ಜೀವನ ಪರಿಸ್ಥಿತಿ ಶೋಚನೀಯವಾಗಿದ್ದು, ಲೆಕ್ಕಾಚಾರವಿಲ್ಲದೇ ಬಾಡಿಗೆ ಪಡೆದು ನಷ್ಟವನ್ನು ಅನುಭವಿಸುತ್ತಾರೆ ಎಂದು ತಿಳಿಸಿದರು. ಈ ಎಲ್ಲ ನಿರ್ಮೂಲನೆಗಾಗಿ ಸಂಘವನ್ನು ಅಭಿವೃದ್ದಿ ಪಡಿಸಬೇಕು ಎಂದು ತಿಳಿಸಿದರು.

ಮಾಜಿ ಶಾಸಕಿ ಜೆ. ಸುನಿತಾ ವೀರಪ್ಪಗೌಡ ಮಾತನಾಡಿ, ಇದೊಂದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದ್ದು, ಇದನ್ನು ಬೆಳಸಿಕೊಂಡು ಹೋಗುವಂತ ಕೆಲಸ ನಿರಂತರವಾಗಿ ಮಾಡಬೇಕು ಎಂದು ತಿಳಿಸಿದರು. ಹಗಲು ರಾತ್ರಿ ಕೆಲಸ ಮಾಡುವ ಲಾರಿ ಚಾಲಕರ ಜೀವನ ಸ್ಥಿತಿಯನ್ನು ಸರ್ಕಾರ ಗಮನಿಸಬೇಕು ಎಂದು ಹೇಳಿದರು.

ಪಟ್ಟಣದ ಲಾರಿ ಮಾಲೀಕ ಸಂಘದ ಅಧ್ಯಕ್ಷ ಶಶಿಭೂಷಣ್ ಮಾತನಾಡಿ, ಸ್ಥಳೀಯ ಲಾರಿ ಮಾಲೀಕರ ಉಳಿವಿಗಾಗಿ ಸಂಘದ ಸಂಘವನ್ನು ಸ್ಥಾಪನೆ ಮಾಡಲಾಗಿದ್ದು, ಮುಂದಿನ ದಿನದಲ್ಲಿ ಇಲ್ಲಿರುವಂತ ಎಲ್ಲ ಲಾರಿ ಮಾಲೀಕರಿಗೂ ನಿರಂತರವಾಗಿ ಬಾಡಿಗೆ ದೊರಯಲಿದೆ ಎಂದು ತಿಳಿಸಿದರು.

ಶ್ರೀನಿವಾಸರಾವ್ ಮಾತನಾಡಿದರು. ಪಟ್ಟಣದ ಲಾರಿ ಮಾಲೀಕ ಸಂಘದ ಉಪಾಧ್ಯಕ್ಷ ಮದನ್‌ ಕುಮಾರ್, ಶ್ರೀನಿವಾಸರಾವ್, ಮೈಸೂರು ಜಿಲ್ಲಾ ಲಾರಿ ಮಾಲೀಕ ಒಕ್ಕೂಟದ ಉಪಾಧ್ಯಕ್ಷ ಅಬ್ದುಲ್‌ ಖಾದರ್‌ ಶಾಹಿದ್, ಎಂ. ವಿಶ್ವನಾಥ್, ಕಾರ್ಯದರ್ಶಿ ಎಂ.ಎನ್. ಅನಿಲ್, ಲಾರಿ ಏಜೆಂಟ್ ಸ್ವಾಮಿ, ಚಾಮರಾಜನಗರ ಜಿಲ್ಲಾ ಲಾರಿ ಮಾಲೀಕ ಸಂಘದ ಅಧ್ಯಕ್ಷ ಜಿಯಾವುಲ್ಲಾ, ಮಂಡ್ಯ ಜಿಲ್ಲಾ ಲಾರಿ ಮಾಲೀಕ ಸಂಘದ ಅಧ್ಯಕ್ಷ ಟಿ.ಎಸ್. ಸತ್ಯಾನಂದ, ವೇಣುಗೋಪಾಲ್, ಸಿ.ವೈ. ನಾಗರಾಜು, ಎ.ಎನ್. ಸ್ವಾಮಿ, ಬಿ.ಸಿ. ಹುಚ್ಚೇಗೌಡ, ಸಿದ್ದರಾಜು, ಸಿ.ಎಸ್. ಸತೀಶ್, ಬಸವರಾಜು, ನಿರ್ದೇಶಕರಾದ ಕೆ. ಪ್ರಕಾಶ್, ಮಲ್ಲೇಶ್, ಟಿ.ಎನ್. ಮಹೇಶ್, ಅಭಿಲಾಷ್, ರಾಜಶೇಖರ್, ಆರ್. ಯೋಗೇಶ್, ಸಿದ್ದೇಗೌಡ, ಮಿಥುನ್, ಎಂ.ಎಸ್. ಮಹೇಶ್, ಜಿ.ಪಿ. ಮಧು ಇದ್ದರು.