ಸಾರಾಂಶ
ರೈತರಿಗೆ ತೂಕದಲ್ಲಿ ಮೋಸ ಅಥವಾ ತೊಂದರೆ ಕೊಟ್ಟರೆ ಗುತ್ತಿಗೆದಾರ, ಹಮಾಲಿಗಳ ಮತ್ತು ನಿನ್ನ ಸೇರಿಸಿ, ಹಮಾಲಿಗಳ ಮೇಲೂ ಎಫ್‌ಐಆರ್ ದಾಖಲಿಸಲು ಸೂಚಿಸಬೇಕಾಗುತ್ತದೆ ಎಂದು ಶಾಸಕ ಎಚ್.ಡಿ.ರೇವಣ್ಣ ರಾಗಿ ಖರೀದಿ ಕೇಂದ್ರದ ಅಧಿಕಾರಿ ಶಾಮಿದ್ ಅಲಿಗೆ ಎಚ್ಚರಿಕೆ ನೀಡಿದರು. ಇಲ್ಲಿಯ ತನಕ ನೀವು ಏನು ಮಾಡಿದ್ದೀರೊ ಗೊತ್ತಿಲ್ಲ, ದೂರು ಬಂದಿದೆ, ತೊಂದರೆ ನೀಡುವ ಹಮಾಲಿಗಳನ್ನು ತೆಗೆದಾಕಿ ಮತ್ತು ಅಗತ್ಯ ಕ್ರಮಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ಜಾಗ್ರತೆ ವಹಿಸಿ, ಪುನಃ ದೂರು ಬಂದರೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ರೈತರಿಗೆ ತೂಕದಲ್ಲಿ ಮೋಸ ಅಥವಾ ತೊಂದರೆ ಕೊಟ್ಟರೆ ಗುತ್ತಿಗೆದಾರ, ಹಮಾಲಿಗಳ ಮತ್ತು ನಿನ್ನ ಸೇರಿಸಿ, ಹಮಾಲಿಗಳ ಮೇಲೂ ಎಫ್‌ಐಆರ್ ದಾಖಲಿಸಲು ಸೂಚಿಸಬೇಕಾಗುತ್ತದೆ ಎಂದು ಶಾಸಕ ಎಚ್.ಡಿ.ರೇವಣ್ಣ ರಾಗಿ ಖರೀದಿ ಕೇಂದ್ರದ ಅಧಿಕಾರಿ ಶಾಮಿದ್ ಅಲಿಗೆ ಎಚ್ಚರಿಕೆ ನೀಡಿದರು.ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಇರುವ ರಾಗಿ ಖರೀದಿ ಕೇಂದ್ರದಲ್ಲಿ ಮಧ್ಯವರ್ತಿಗಳು, ಹಮಾಲಿಗಳ ಮೋಸದಿಂದಾಗಿ ರಾಗಿ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ಬೆಳೆದ ಬೆಳೆಗೆ ನ್ಯಾಯಯುತವಾಗಿ ರಾಗಿ ಖರೀದಿ ಮಾಡಿ ಎಂಬ ವ್ಯಾಪಕ ಒತ್ತಾಯದ ಹಿನ್ನೆಲೆಯಲ್ಲಿ ದಿಢೀರ್ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಎಚ್ಚರಿಸಿದರು. ೫೦ ಕೆಜಿ ರಾಗಿ ತೂಕ ಮಾಡುವಾಗ ಹೆಚ್ಚುವರಿ ರಾಗಿಯನ್ನು ರೈತರ ಚೀಲಕ್ಕೆ ಹಾಕದೇ ನೆಲದ ಮೇಲೆ ಸುರಿದು, ನೀವೇ ಇಟ್ಟುಕೊಳ್ಳುತ್ತೀರಂತೆ ಎಂಬ ದೂರಿದೆ ಎಂದು ಅಧಿಕಾರಿಗೆ ತಿಳಿಸಿ, ರೈತರು ಖುದ್ದು ಹೇಳಿಕೆ ನೀಡಿರುವ ವಿಡಿಯೋ ತುಣುಕು ನೀವು ನೋಡಿದ್ದೀರಿ. ಇಲಾಖೆ ಸೂಚಿಸಿದ ಲಾರಿಗೆ ರಾಗಿ ಲೋಡ್ ಮಾಡಲು ಹಣ ನೀಡಿ ಎಂದು ರೈತರಿಂದ ಒತ್ತಾಯ ಮಾಡಿ ಹಣ ಪಡೆಯುತ್ತಿದ್ದೀರ ಎಂಬ ದೂರಿದೆ.
ಇದು ಎಷ್ಟು ಸರಿ ನೀವೇ ಯೋಚಿಸಿ ಎಂದರು. ಇಲ್ಲಿಯ ತನಕ ನೀವು ಏನು ಮಾಡಿದ್ದೀರೊ ಗೊತ್ತಿಲ್ಲ, ದೂರು ಬಂದಿದೆ, ತೊಂದರೆ ನೀಡುವ ಹಮಾಲಿಗಳನ್ನು ತೆಗೆದಾಕಿ ಮತ್ತು ಅಗತ್ಯ ಕ್ರಮಕೈಗೊಂಡು ರೈತರಿಗೆ ಅನ್ಯಾಯವಾಗದಂತೆ ಜಾಗ್ರತೆ ವಹಿಸಿ, ಪುನಃ ದೂರು ಬಂದರೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಅಧಿಕಾರಿಗೆ ಮಾರ್ಮಿಕವಾಗಿ ಖಡಕ್ ಎಚ್ಚರಿಕೆ ನೀಡಿದರು.