ಸಂಘಟಿತರಾದರೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯ

| Published : Sep 01 2024, 01:51 AM IST

ಸಾರಾಂಶ

ಎಲ್ಲರೂ ಸಂಘಟಿತರಾದರೆ ಮಾತ್ರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಸವಿತಾ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ತುರುವೇಕೆರೆ: ಎಲ್ಲರೂ ಸಂಘಟಿತರಾದರೆ ಮಾತ್ರ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಸವಿತಾ ಸಮಾಜದ ರಾಜ್ಯ ಕಾರ್ಯಾಧ್ಯಕ್ಷ ಕಿರಣ್ ಕುಮಾರ್ ಹೇಳಿದರು.

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ತಾಲೂಕು ಸವಿತಾ ಸಮಾಜ ಯುವಪಡೆ ಹಾಗೂ ತಾಲೂಕು, ಹೋಬಳಿ ಘಟಕ ಸಹಯೋಗದಲ್ಲಿ ನಡೆದ ಎಸ್ಸೆಸ್ಸೆಲ್ಸಿ, ಪಿ.ಯು.ಸಿ. ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸಮುದಾಯ ಕಡಿಮೆ ಸಂಖ್ಯೆಯಲ್ಲಿದೆ. ನಮ್ಮ ಅಸ್ಥಿತ್ವ ಉಳಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಮ್ಮ ಸಮುದಾಯ ಸಂಘಟಿತರಾದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಬಹುದು. ಆ ನಿಟ್ಟಿನಲ್ಲಿ ತಾವೆಲ್ಲಾ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ, ಪಿ.ಯು.ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸವಿತಾ ಸಮಾಜದ ಯುವಪಡೆ ಅಧ್ಯಕ್ಷ ಹರಿದಾಸನಹಳ್ಳಿ ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯರುಗಳಾದ ಎನ್.ಆರ್.ಸುರೇಶ್, ಚಿದಾನಂದ್, ಸವಿತಾ ಯುವಪಡೆ ಜಿಲ್ಲಾಧ್ಯಕ್ಷ ಕಟ್ ವೆಲ್ ರಂಗನಾಥ್, ಸುಬ್ರಹ್ಮಣ್ಯ, ಸುರೇಶ್, ಒ.ಕೆ.ರಾಜ್, ರಾಘವೇಂದ್ರ ಇಟಗಿ, ಕಡೂರು ರವಿಕುಮಾರ್, ನಾಗರಾಜು ಮೈಸೂರ್, ಹೆಚ್.ಡಿ.ರಾಮು, ಕಮಲಾ ಸ್ವರ್ಣಕುಮಾರ್, ಪ್ರಶಾಂತ್ ಕುಮಾರ್, ಎನ್.ರಂಗನಾಥ್ ಇದ್ದರು.