ತಾಕತ್ತಿದ್ದರೆ ಹೇಮಾವತಿ ನೀರು ತೆಗೆದುಕೊಂಡು ಹೋಗಿ : ಶಾಸಕ ಎಂ ಟಿ ಕೃಷ್ಣಪ್ಪ ಡಿಸಿಎಂ ಡಿಕೆಶಿ ವಿರುದ್ಧ ಕಿಡಿ

| Published : Dec 08 2024, 01:20 AM IST / Updated: Dec 08 2024, 08:10 AM IST

ತಾಕತ್ತಿದ್ದರೆ ಹೇಮಾವತಿ ನೀರು ತೆಗೆದುಕೊಂಡು ಹೋಗಿ : ಶಾಸಕ ಎಂ ಟಿ ಕೃಷ್ಣಪ್ಪ ಡಿಸಿಎಂ ಡಿಕೆಶಿ ವಿರುದ್ಧ ಕಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಇರುವುದು ಗಂಡುಗಲಿಗಳು ಎನ್ನುವುದನ್ನು ತಾವು ಮರೆಯಬಾರದು ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ಡಿಸಿಎಂ ಡಿಕೆಶಿ ವಿರುದ್ಧ ಕಿಡಿ ಕಾರಿದರು.

  ಗುಬ್ಬಿ : ತುಮಕೂರು ಜಿಲ್ಲೆಯಲ್ಲಿ ಇರುವುದು ಗಂಡುಗಲಿಗಳು ಎನ್ನುವುದನ್ನು ತಾವು ಮರೆಯಬಾರದು ಎಂದು ತುರುವೇಕೆರೆ ಕ್ಷೇತ್ರದ ಶಾಸಕ ಎಂ ಟಿ ಕೃಷ್ಣಪ್ಪ ಡಿಸಿಎಂ ಡಿಕೆಶಿ ವಿರುದ್ಧ ಕಿಡಿ ಕಾರಿದರು.

ಜಿಲ್ಲೆಯ ಜನರಿಗೆ ಮರಣ ಶಾಸನವಾಗಿರುವ ಹೇಮಾವತಿ ಕೆನಾಲ್‌ ಲಿಂಕ್‌ ಎಕ್ಸ್‌ ಪ್ರೆಸ್‌ ಕಾಮಗಾರಿ ವಿರೋಧಿಸಿ ರೈತರು, ಶ್ರೀಗಳು, ವಿವಿಧ ಸಂಘಟನೆಯ ಪ್ರಮುಖರು, ಎನ್ ಡಿ ಎ ಮುಖಂಡರು ಕಾರ್ಯಕರ್ತರು ಗುಬ್ಬಿ ತಾಲೂಕಿನ ಸಾಗರನಹಳ್ಳಿ ಗೇಟಿನಿಂದ ಮಲ್ಲಸಂದ್ರದ ಓಂ ಪ್ಯಾಲೇಸ್ ವರೆಗೆ ಪಾದಯಾತ್ರೆ ನಡೆಸಿ ಮೂಲಕ ಕಾಮಗಾರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

 ಡಿ.ಕೆ. ಶಿವ ಕುಮಾರ್ ಅವರೇ ನೀವು ಅಲ್ಲೇ ಇದ್ರೆ ಮುಖ್ಯಮಂತ್ರಿ ಆಗಲ್ಲ ನಂ ಜೊತೆಗೆ ಬನ್ನಿ ಮುಖ್ಯಮಂತ್ರಿ ಮಾಡುತ್ತಿವೆ. ನಮ್ಮ ನೀರನ್ನು ನೀವು ತೆಗೆದುಕೊಂಡು ಹೋಗಿ ನಮ್ಮ ಜಿಲ್ಲೆಗೆ ಮರಣ ಶಾಸನ ಬರೆಯಲು ಹೊರಟಿದ್ದೀರಾ. ಇದು ಸರಿಯಲ್ಲ ಕ್ಯಾಬಿನೆಟ್‌ನಲ್ಲಿ ಅಂಗೀಕಾರವಾಗಿದೆ ಎಂದದೇ ಅದೇನು ದೊಡ್ಡ ಮಹತ್ವವಲ್ಲ ರೈತರ ಬಗ್ಗೆ ಕಾಳಜಿ ನಿಮಗೆ ಇದ್ದರೆ ಮೊದಲು ಅದನ್ನು ರಿಜೆಕ್ಟ್ ಮಾಡಿ ನೇರವಾಗಿ ಅಣೆಕಟ್ಟೆಯಿಂದಲೇ ನೀರನ್ನು ತೆಗೆದುಕೊಂಡು ಹೋಗುವುದನ್ನ ಮಾಡಬೇಕು ಎಂದು ಒತ್ತಾಯ ಮಾಡಿದರು.ಬೆಳಗಾವಿಯಲ್ಲಿ ನಡೆಯುವಂತಹ ಅಧಿವೇಶನದ ವೇಳೆಯಲ್ಲಿ ಹೇಮಾವತಿ ಲಿಂಕ್ ಕೆನಾಲ್ ಬಗ್ಗೆ ದೊಡ್ಡ ಹೋರಾಟವನ್ನೇ ಮಾಡುತ್ತೇವೆ ರಣರಂಗವೇ ಆಗಲಿ ನಮ್ಮ ನೀರನ್ನು ಮಾತ್ರ ನಾವು ಯಾವುದೇ ಕಾರಣಕ್ಕೂ ಬೇರೆ ಭಾಗಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಮಾತನಾಡಿ ನನ್ನ ಶಾಸಕ ಸ್ಥಾನ ಹೋದರೂ ಪರವಾಗಿಲ್ಲ ನೀರಾವರಿ ಹೋರಾಟ ಮಾಡಿಯೇ ಮಾಡುತ್ತೇವೆ. ಡಿಕೆ ಶಿವಕುಮಾರ್ ನಿಮಗೆ ತಾಕತ್ತಿದ್ದರೆ ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ಎಂದು ಸವಾಲು ಹಾಕಿದರು. ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಮಾತನಾಡಿ ನಾವು ಏನಾದರೂ ಈಗ ಯಾಮಾರಿದರೆ ಖಂಡಿತವಾಗಿ ನಾವು ನಮ್ಮ ನೀರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಇಂತಹ ಸಂದರ್ಭದಲ್ಲಿ ದೊಡ್ಡ ಹೋರಾಟವೇ ನಮಗೆ ಅಸ್ತ್ರವಾಗಬೇಕು ಎಂದು ತಿಳಿಸಿದರು.

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ ತುಮಕೂರು ಜಿಲ್ಲೆಗೆ ಹರಿಯುತ್ತಿರುವಂತಹ ನೀರನ್ನ ಬೇರೆ ಜಿಲ್ಲೆಗೆ ಹರಿಸುವುದಕ್ಕೆ ಸಾಧ್ಯವೇ ಇಲ್ಲ. ಆಡಳಿತವಿದೆಯೆಂದು ರೈತರ ಹಿತ ಕಾಯದೆ ಹೋದರೆ ಮುಂದಿನ ದಿನದಲ್ಲಿ ದೊಡ್ಡ ಸಮಸ್ಯೆ ನೀವೇ ಅನುಭವಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮುಖಂಡ ಎಚ್ಡಿ ದಿಲೀಪ್ ಕುಮಾರ್, ಜೆಡಿಎಸ್ ಮುಖಂಡ ಬಿಎಸ್ ನಾಗರಾಜು, ಬೆಳ್ಳಾವಿಯ ಕಾರದ ವೀರ ಬಸವ ಸ್ವಾಮೀಜಿ, ಗೊಲ್ಲಹಳ್ಳಿ ಮಠದ ವಿಭವ ವಿದ್ಯಾ ಶಂಕರ ಸ್ವಾಮೀಜಿ, ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗೋಡೆಕೆರೆ ಮಠದ ಮೃತ್ಯುಂಜಯ ಸ್ವಾಮೀಜಿ, ಮಾಜಿ ಸಚಿವ ಸೊಗಡು ಶಿವಣ್ಣ,ಮಾಜಿ ಶಾಸಕ ಲಿಂಗಪ್ಪ, ಎಂ ಎಲ್ ಸಿ ಚಿದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜನಪ್ಪ,ಮುಖಂಡರಾದ ಚಂದ್ರಶೇಖರ ಬಾಬು, ಕಳ್ಳಿ ಪಾಳ್ಯ ಲೋಕೇಶ್, ಹೊನ್ನಗಿರಿ ಗೌಡ ಸಾಗರನ ಹಳ್ಳಿ ವಿಜಯ್ ಕುಮಾರ್, ಪಂಚಾಕ್ಷರಿ ಎನ್ ಸಿ ಪ್ರಕಾಶ್, ಜಿ ಎನ್ ಬೆಟ್ಟ ಸ್ವಾಮಿ, ಸಿದ್ದಗಂಗಮ್ಮ, ಯೋಗಾನಂದ ಕುಮಾರ್, ಚಿಕ್ಕವೀರಯ್ಯ, ಭೈರಪ್ಪ ಯತೀಶ್, ಪಟ್ಟಣ ಪಂಚಾಯ್ತಿಯ ಸದಸ್ಯರುಗಳು, ಸಾವಿರಾರು ರೈತರು, ಸೇರಿದಂತ ಇನ್ನಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.