ಡಾ.ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಯಶಸ್ಸು ನಿಶ್ಚಿತ: ಅತನೂರ

| Published : Mar 05 2024, 01:31 AM IST

ಡಾ.ಅಂಬೇಡ್ಕರ್ ಮಾರ್ಗದಲ್ಲಿ ನಡೆದರೆ ಯಶಸ್ಸು ನಿಶ್ಚಿತ: ಅತನೂರ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಮಾರ್ಗದಲ್ಲಿ ನಡೆದು ಅವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ. ಅದಕ್ಕೆ ನಾನೇ ಜೀವಂತ ಉದಾಹರಣೆ ಎಂದು ಕರ್ನಾಟಕ ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು, ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಹೇಳಿದರು.

ವಿಜಯಪುರ: ಡಾ.ಬಾಬಾಸಾಹೇಬ ಅಂಬೇಡ್ಕರ್ ಮಾರ್ಗದಲ್ಲಿ ನಡೆದು ಅವರ ತತ್ವ-ಸಿದ್ಧಾಂತಗಳನ್ನು ಅಳವಡಿಸಿಕೊಂಡರೆ ಯಶಸ್ಸು ನಿಶ್ಚಿತ. ಅದಕ್ಕೆ ನಾನೇ ಜೀವಂತ ಉದಾಹರಣೆ ಎಂದು ಕರ್ನಾಟಕ ಸಿವಿಲ್ ನ್ಯಾಯಾಧೀಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು, ನ್ಯಾಯಾಧೀಶರಾಗಿ ಆಯ್ಕೆಯಾದ ಜಹೀರ್ ಅತನೂರ ಹೇಳಿದರು. ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧ ವಿಹಾರದಲ್ಲಿ ನಡೆದ ಬೌದ್ಧ ವಿಹಾರ ನಿರ್ಮಾಣ ಸಮಿತಿಯ ಸನ್ಮಾನ ಸ್ವೀಕರಿಸಿ ಮಾತನಾಡಿದರು. 2016 ರಿಂದ ತಾವು ಬುದ್ಧವಿಹಾರದ ಸಂಪರ್ಕದಲ್ಲಿದ್ದು, ಬಹಳಷ್ಟು ಜೀವನಮಾರ್ಗ ಕಲಿತಿರುವುದನ್ನು ನೆನಪಿಸಿಕೊಂಡ ಜಹೀರ್ ಅತನೂರ, ಭಗವಾನ ಬುದ್ಧರು ಮತ್ತು ಡಾ.ಬಾಬಾಸಾಹೇಬರ ವಿಚಾರಗಳಿಂದ ಪ್ರೇರಿತನಾಗಿ, ಅವರ ಮಾರ್ಗದಲ್ಲಿ ಒಂದು ಸಣ್ಣ ಹೆಜ್ಜೆ ಇರಿಸಿದ್ದರ ಪರಿಣಾಮವೇ ನಾನಿಂದು ನ್ಯಾಯಾಧೀಶನಾಗಲು ಕಾರಣವಾಗಿದೆ. ಆ ಮಾರ್ಗದಲ್ಲಿ ಸಂಪೂರ್ಣವಾಗಿ ನಡೆದರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ಅರಿತಿದ್ದೇನೆ. ನನ್ನ ಸೇವಾವಧಿಯಲ್ಲಿ ಇದೇ ಮಾರ್ಗದಲ್ಲಿ ಜನಸಾಮಾನ್ಯರಿಗೆ ನ್ಯಾಯ ನೀಡುತ್ತೇನೆ ಎಂದರು.

ನ್ಯಾಯವಾದಿ ಕೆ.ಎಫ್.ಅಂಕಲಗಿ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಶಿಕ್ಷಣದ ಮೂಲಕ ಒಬ್ಬ ವ್ಯಕ್ತಿಯು ಸಾಧನೆಯ ಶಿಖರವನ್ನೇರಬಹುದು ಎಂಬುದನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ತೋರಿಸಿಕೊಟ್ಟಿದ್ದಾರೆ. ಅವರು ಬರೆದ ಸಂವಿಧಾನವೇ ದೇಶದ ಶ್ರೇಷ್ಠ ಗ್ರಂಥ, ಅದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.ಬೌದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಹಿರಿಯ ನ್ಯಾಯವಾದಿಗಳಾದ ಜಿ.ಎ. ಅತನೂರ, ಎಂ.ಡಿ.ಇಂಡಿಕರ್, ಚಿದಾನಂದ ನಿಂಬಾಳ, ರಮೇಶ ಹಾದಿಮನಿ, ಕೆ.ಎಂ.ಕೂಡಲಗಿ, ಬಾಬು ಗುಂಡಳ್ಳಿ, ಜಾಫರ ಅಂಗಡಿ, ಸುರೇಶ ಚೂರಿ, ವಿಲಾಸ ವ್ಯಾಸ್, ಮಲ್ಲು ಬನಸೋಡೆ, ರವಿ ಕಿತ್ತೂರ, ರಾಜು ತೊರವಿ, ಅನಿಲ ಹೊಸಮನಿ, ಸಿದ್ದು ಬಿರಾದಾರ, ಈಶ್ವರ ಕಾರಜೋಳ, ಸಂತೋಷ ಸುತಗುಂಡಿ, ಬಿ.ಆರ್. ತಳಕೇರಿ, ಸಂಘರ್ಷ ಹೊಸಮನಿ ಮುಂತಾದವರು ಇದ್ದರು.