ಸಾರಾಂಶ
ಬಾಗಲಕೋಟೆ ಐಡಿಬಿಐ ಬ್ಯಾಂಕ್ನಲ್ಲಿ ನಡೆದಿರುವ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಹಣ ವರ್ಗಾವಣೆ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಸರ್ಕಾರ ಇದೀಗ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ ಬೆನ್ನಲ್ಲೆ ಸಿಇಎನ್ ಪೊಲೀಸ್ ಠಾಣೆಗೆ ಸಿಐಡಿ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ಐಡಿಬಿಐ ಬ್ಯಾಂಕ್ನಲ್ಲಿ ನಡೆದಿರುವ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಹಣ ವರ್ಗಾವಣೆ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ್ದ ಸರ್ಕಾರ ಇದೀಗ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ ಬೆನ್ನಲ್ಲೆ ಸಿಇಎನ್ ಪೊಲೀಸ್ ಠಾಣೆಗೆ ಸಿಐಡಿ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದೆ.ಮಂಗಳವಾರ ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಗೆ ಸಿಐಡಿ ತಂಡ ಭೇಟಿ ನೀಡಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಹಣ ವರ್ಗಾವಣೆ ಪ್ರಕರಣದ ಸಮಗ್ರ ಮಾಹಿತಿ ಪಡೆಯಿತು.
ಪ್ರಕರಣದ ತನಿಖೆಗೆ ಮುಂದಾದ ಸಿಐಡಿ ಅಧಿಕಾರಿಗಳ ತಂಡವು ಐದು ಇಲಾಖೆಗಳ ಐದು ಪ್ರಕರಣಗಳಲ್ಲಿ ಒಂದೊಂದು ಪ್ರಕರಣಕ್ಕೆ ಒಂದೊಂದು ಸಿಐಡಿ ತಂಡ ರಚನೆ ಮಾಡಿಕೊಂಡು ಬಂದಿವೆ. ಒಟ್ಟು ಐದು ಸಿಐಡಿ ತಂಡಗಳ ರಚನೆ ಮಾಡಿದ್ದು ಐದು ತಂಡಗಳ ಪೈಕಿ ಇಂದು ಎರಡು ತಂಡಗಳು ಬಾಗಲಕೋಟೆಗೆ ಬಂದಿವೆ. ಅಲ್ಪಸಂಖ್ಯಾತ ಇಲಾಖೆ ಪ್ರಕರಣದ ಜವಾಬ್ದಾರಿಯನ್ನು ಸಿಐಡಿ ಡಿವೈಎಸ್ಪಿ ಮಂಜುನಾಥ್ ನೇತೃತ್ವದ ತಂಡ ಹೊತ್ತಿದೆ.ಪಂಚಾಯತ್ ರಾಜ್ ಇಲಾಖೆ ಪ್ರಕರಣದ ಜವಾಬ್ದಾರಿ ಹೊತ್ತಿರುವ ಸಿಐಡಿ ಇನ್‌ಸ್ಟೆಕ್ಟರ್ ನಾಗಪ್ಪ ಸಿ ನೇತೃತ್ವದ ತಂಡ ಹೊತ್ತದ್ದು, ನಾಳೆ ಇನ್ನುಳಿದ ಮೂರು ಸಿಐಡಿ ತಂಡಗಳು ಬರಲಿವೆ ಎಂಬ ಮಾಹಿತಿ ಇದೆ.
ಬಾಗಲಕೋಟೆಯ ಪ್ರವಾಸೋದ್ಯಮ, ಅಲ್ಪಸಂಖ್ಯಾತ, ಕಾರ್ಮಿಕರ, ಕೈಮಗ್ಗ-ಜವಳಿ, ಹಿಂದುಳಿದ ವರ್ಗಗಳ ಇಲಾಖೆಗಳ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಐದು ಇಲಾಖೆಯ ₹6.08 ಕೋಟಿ ಹಣ ಅಕ್ರಮ ವರ್ಗಾವಣೆ ಮಾಡಲಾಗಿತ್ತು. ಬಾಗಲಕೋಟೆಯ ಐಡಿಬಿಐ ಶಾಖೆಯಲ್ಲಿರುವ ಐದು ಇಲಾಖೆಗಳ ಖಾತೆಗಳ ಮೂಲಕ ಐದು ಇಲಾಖೆಗಳ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿರುವ ಬ್ಯಾಂಕ್ ಸಿಬ್ಬಂದಿಗಳ ಮೇಲೆ ಆರೋಪ ಕೇಳಿ ಬಂದಿತ್ತು.ಇಲಾಖೆಗಳ ಹಣ 6 ಕೋಟಿಗೂ ಅಧಿಕ ಹಣ 33 ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿತ್ತು. ಇಲ್ಲಿಯವರೆಗೆ 9 ಜನ ಬ್ಯಾಂಕ್ ಸಿಬ್ಬಂದಿ ಸೇರಿ 21 ಜನರ ಬಂಧನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
--(ಪೋಟೋ 27ಬಿಕೆಟಿ8, ಬಾಗಲಕೋಟೆಗೆ ಆಗಮಿಸಿದ ಸಿಐಡಿ ತಂಡ.