ಸಾರಾಂಶ
ಎಂ. ಪ್ರಹ್ಲಾದ
ಕನ್ನಡಪ್ರಭ ವಾರ್ತೆ ಕನಕಗಿರಿತಾಲೂಕು ವ್ಯಾಪ್ತಿಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ ಕರಡೋಣ ಕೆರೆಯಲ್ಲಿ ಕಳೆದ ಮೂರ‍್ನಾಲ್ಕು ತಿಂಗಳಿಂದ ಹಗಲು ರಾತ್ರಿಯೆನ್ನದೇ ಹೂಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಹಲವು ದಿನಗಳಿಂದ ಕೆರೆಯ ಅಂಗಳದಲ್ಲಿ ಜೆಸಿಬಿ, ಹಿಟಾಚಿಗಳ ಸದ್ದು ಕೇಳಿ ಬರುತ್ತಿದೆ. ಮೂಲಕ ಇಲಾಖೆಗಳ ಅನುಮತಿಯಿಲ್ಲದೇ ಟಿಪ್ಪರ್, ಟ್ರ್ಯಾಕ್ಟರ್‌ಗಳು ಹಗಲು-ರಾತ್ರಿಯೆನ್ನದೇ ಈ ಹೂಳು ಹೊತ್ತು ಇಟ್ಟಿಗೆ ಭಟ್ಟಿಗಳಿಗೆ ಸಾಗಿಸುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಲಕ್ಷಾಂತರ ರುಪಾಯಿ ರಾಜಧನಕ್ಕೆ ಕೊಕ್ಕೆ ಬಿದ್ದಂತಾಗಿದೆ.ಕಡಿವಾಣ ಇಲ್ಲವೇ?:ಕನಕಗಿರಿ ತಾಲೂಕಿನಲ್ಲಿ ಮಟ್ಕಾ, ಅಕ್ರಮ ಮರಳು ಸಾಗಾಟ, ಇಸ್ಪೀಟ್, ಕೋಳಿ ಪಂದ್ಯ ಸೇರಿ ಹತ್ತಾರು ಅಕ್ರಮ ಚಟುವಟಿಕೆ ನಿರಂತರವಾಗಿ ನಡೆಯುತ್ತಲೇ ಇವೆ. ಇತ್ತ ಕೆರೆಯ ಹೂಳನ್ನು ಹಗಲು-ರಾತ್ರಿ ಎನ್ನದೇ ಸ್ಥಳೀಯ ಪೊಲೀಸ್ ಠಾಣೆ ಮುಂಭಾಗದಿಂದಲೇ ಸಾಗಿಸುತ್ತಿದ್ದರೂ ಸಂಬಂಧಿಸಿದವರು ಕ್ರಮ ಕೈಗೊಳ್ಳದಿರುವುದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ.ಅಕ್ರಮ ಚಟುವಟಿಕೆ ನಡೆಸುವ ಆರೋಪಿಗಳ ವಿರುದ್ಧ ಅಧಿಕಾರಿಗಳು ಕ್ರಮ ವಹಿಸದ ಹಿನ್ನೆಲೆಯಲ್ಲಿ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರು ಅಕ್ರಮದ ಕುರಿತು ಮಾಧ್ಯಮದವರಿಗೆ ದೂರು ನೀಡುತ್ತಿದ್ದು, ನಮಗೆ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲ ಎಂತಲೂ ಹೇಳುತ್ತಿದ್ದಾರೆ.ಸಚಿವ ಶಿವರಾಜ ತಂಗಡಗಿ ಗ್ರಾಮೀಣ ಪ್ರದೇಶಗಳಿಗೆ ತೆರಳಿದಾಗ ಸಾರ್ವಜನಿಕರು ಅಕ್ರಮ ಮರಳು, ಮಣ್ಣು ಸಾಗಾಟ ತಡೆಗೆ ಆಗ್ರಹಿಸಿದಾಗ ಕೆರೆಯಲ್ಲಿನ ಹೂಳು ಸಾಗಾಟದಿಂದ ನೀರು ಸಂಗ್ರಹಕ್ಕೆ ಸಹಕಾರಿಯಾಗಲಿದೆ. ಅದಕ್ಕಾಗಿ ಮಣ್ಣು ಸಾಗಾಟ ತಡೆಯಬೇಡಿ ಎಂದು ಹೇಳಿರುವುದು ಇಡೀ ಕೆರೆಯ ಹೂಳು ಇಟ್ಟಿಗೆ ಭಟ್ಟಿಗಳನ್ನು ಅಕ್ರಮವಾಗಿ ಸೇರುತ್ತಿದೆ.
ಕೋಟ್;ಕೆರೆ ಮಣ್ಣಿನ ವಿಚಾರವಾಗಿ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಮಣ್ಣು ಅಕ್ರಮ ಸಾಗಾಟ ತಡೆಗೆ ಮುಂದಾಗಿದ್ದೇವೆ. ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.-ಸೆಲ್ವಕುಮಾರ, ಸಣ್ಣ ನೀರಾವರಿ ಇಲಾಖೆಯ ಎಇಇ
ಕೋಟ್:ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ನಡೆಯಲು ಬಿಡುವುದಿಲ್ಲ. ಕಾನೂನುಬಾಹಿರ ಚಟುವಟಿಕೆಗೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವೆ.-ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ೧೫ಕೆಎನ್‌ಕೆ೧ಕನಕಗಿರಿ ಪೊಲೀಸ್ ಠಾಣೆ ಮುಂಭಾಗ ಕೆರೆ ಮಣ್ಣನ್ನು ಟಿಪ್ಪರ್‌ನಲ್ಲಿ ಸಾಗಿಸುತ್ತಿರುವುದು.