ಅಕ್ರಮವಾಗಿ ಕಡಿದ ಸಾಗುವಾನಿ ಮರ ವಶ: ಇಬ್ಬರ ಬಂಧನ

| Published : Jan 04 2025, 12:31 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಬಾಳೆಹೊನ್ನೂರು ಹೋಬಳಿಯ ದಾವಣ ಗ್ರಾಮದಲ್ಲಿ ಬರುವ ಮೇಗರಮಕ್ಕಿ ಮೀಸಲು ಅರಣ್ಯದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಅದನ್ನು ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದಾಗ ಚಿಕ್ಕ ಅಗ್ರಹಾರವಲಯ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಸಾಗುವಾನಿ ತುಂಡು ಹಾಗೂ ವಾಹನ ವಶಪಡಿಸಿಕೊಂಡು 8 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.

8 ಆರೋಪಿಗಳ ವಿರುದ್ದ ಪ್ರಕರಣ ದಾಖಲು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಬಾಳೆಹೊನ್ನೂರು ಹೋಬಳಿಯ ದಾವಣ ಗ್ರಾಮದಲ್ಲಿ ಬರುವ ಮೇಗರಮಕ್ಕಿ ಮೀಸಲು ಅರಣ್ಯದಲ್ಲಿ ಗುರುವಾರ ರಾತ್ರಿ ಅಕ್ರಮವಾಗಿ ಸಾಗುವಾನಿ ಮರ ಕಡಿದು ಅದನ್ನು ವಾಹನದಲ್ಲಿ ಸಾಗಿಸಲು ಯತ್ನಿಸುತ್ತಿದ್ದಾಗ ಚಿಕ್ಕ ಅಗ್ರಹಾರವಲಯ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಸಾಗುವಾನಿ ತುಂಡು ಹಾಗೂ ವಾಹನ ವಶಪಡಿಸಿಕೊಂಡು 8 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶ ಹಾಗೂ ಸಿಬ್ಬಂದಿ ದಾವಣ ಗ್ರಾಮದ ಸರ್ವೆ ನಂಬರ್ 38 ರ ಮೇಗರಮಕ್ಕಿ ಮೀಸಲು ಅರಣ್ಯಕ್ಕೆ ದಾಳಿ ಮಾಡಿದಾಗ 8 ಆರೋಪಿಗಳು ಸಾಗುವಾನಿ ತುಂಡನ್ನು ಬೊಲೇರೋ ಪಿಕಪ್ ವಾಹನಕ್ಕೆ ತುಂಬಿರುವುದು ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು 6 ಆರೋಪಿಗಳು ಪರಾರಿಯಾದರು. ಸ್ಥಳದಲ್ಲಿದ್ದ ₹2 ಲಕ್ಷ ಬೆಲೆ ಬಾಳುವ 9 ಸಾಗುವಾನಿ ತಂಡು ಹಾಗೂ ವಾಹನವನ್ನು ವಶಪಡಿಸಿ ಕೊಳ್ಳಲಾಯಿತು. 8 ಆರೋಪಿಗಳ ಮೇಲೂ ಪ್ರಕರಣ ದಾಖಲಿಸಿದ್ದು ಪರಾರಿಯಾದ 6 ಆರೋಪಿಗಳಿಗೆ ಅರಣ್ಯ ಇಲಾಖೆಯವರು ಬಲೆ ಬೀಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಕುದುರೆಗುಂಡಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಆರ್‌ ರಂಗನಾಥ ಆರ್‌ ಅತಾಲಟ್ಟಿ, ಚಿಕ್ಕಅಗ್ರಹಾರ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಚ್.ಬಿ.ನಂದೀಶ, ಮೇಲ್ಪಾಲ್ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಅಗೇರ, ಗಸ್ತು ಅರಣ್ಯ ಪಾಲಕರಾದ ಲೋಹಿತ್‌, ಪ್ರತಾಪ್‌, ನಾಗರಾಜ, ಅರಣ್ಯ ವೀಕ್ಷಕರಾದ ರವಿ,ಗಣೇಶ, ಆದಿತ್ಯ ವಾಹನ ಚಾಲಕ ನಾಗರಾಜ ಪಾಲ್ಗೊಂಡಿದ್ದರು.