ಸಾರಾಂಶ
ಆಧುನಿಕ ವೈದ್ಯಕೀಯ ವೃತ್ತಿಯಾಗಿ ಅಳವಡಿಸಿಕೊಂಡಿರುವ ವೈದ್ಯರು ಪ್ರತಿನಿಧಿಸುವ ಸ್ವಯಂ ಪ್ರೇರಿತ ಸಂಘಟನೆಯಾಗಿದೆ.
ಗಂಗಾವತಿ: ಭಾರತೀಯ ವೈದ್ಯಕೀಯ ಸಂಘ ವಿಶ್ವದಲ್ಲೇ ಅತಿ ದೊಡ್ಡದ್ದು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ಟಿ.ಎ.ವೀರಭದ್ರಯ್ಯ ಹೇಳಿದರು.
ನಗರದ ರಾಯಚೂರು ರಸ್ತೆಯಲ್ಲಿರುವ ಅಮರ್ ಗಾರ್ಡ್‍ನನಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಹಮ್ಮಿಕೊಂಡ ಭಾರತೀಯ ವೈದ್ಯಕೀಯ ಸಂಘದ 91ನೇ ರಾಜ್ಯ ಮಟ್ಟದ ಸಮ್ಮೇಳನದ 2 ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಧುನಿಕ ವೈದ್ಯಕೀಯ ವೃತ್ತಿಯಾಗಿ ಅಳವಡಿಸಿಕೊಂಡಿರುವ ವೈದ್ಯರು ಪ್ರತಿನಿಧಿಸುವ ಸ್ವಯಂ ಪ್ರೇರಿತ ಸಂಘಟನೆಯಾಗಿದೆ. 30 ರಾಜ್ಯಗಳಲ್ಲಿ 686 ಜಿಲ್ಲೆಗಳಲ್ಲಿ 1765 ಶಾಖೆಗಳ ಮೂಲಕ 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದ ಅವರು, ಕರ್ನಾಟಕದಲ್ಲಿ ಮಾತ್ರ 180 ಶಾಖೆಗಳ ಮೂಲಕ ಸುಮಾರು 31 ಸಾವಿರ ವೈದ್ಯರು ಸಂಘಟನೆಯಲ್ಲಿದ್ದಾರೆ ಎಂದರು.
ವೈದ್ಯಕೀಯ ಕ್ಷೇತ್ರದ ಪ್ರಗತಿಶೀಲ ವಿಷಯಗಳ ಕುರಿತು ಪರಿಣಿತ ವೈದ್ಯರಿಂದ ಉಪನ್ಯಾಸ, ವಿಚಾರಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ ಎಂದರು.ನೂತನ ವೈದ್ಯಕೀಯ ಅವಿಷ್ಕಾರಗಳು ಮತ್ತು ಮಾಹಿತಿ ಸದಸ್ಯರಿಗೆ ತಿಳಿ ಹೇಳುವ ಕಾರ್ಯ ಮಾಡುತ್ತಿದ್ದು, ಐಎಂಎ ನಡೆ, ಶಾಲೆಯ ಕಡೆ, ಐಎಂಎ ನಡೆ ಸೈನಿಕರ ಕಡೆ, ಐಎಂಎ ನಡೆಹಳ್ಳಿಗಳ ಕಡೆ ಎಂಬ ಸಮುದಾಯ ಆರೋಗ್ಯ ಚಟುವಟಿಕೆ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ವೈದ್ಯರ ಮೇಲೆ ಹಿಂಸೆ, ನಕಲಿ ವೈದ್ಯರ ಹಾವಳಿ, ಕಠಿಣ ನಿಯಮ ಮತ್ತು ವೈಜ್ಞಾನಿಕ ಆಧಾರವಿಲ್ಲದ ಮಿಶ್ರ ವೈದ್ಯಕೀಯ ಪದ್ಧತಿ ಏಕತೆಯಿಂದ ಹಾಗೂ ಜವಾಬ್ದಾರಿತನದಿಂದ ಎದುರಿಸುತ್ತೇವೆ ಎಂದರು.ಇದೇ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಭಾರತೀಯ ವೈದ್ಯಕೀಯ ಸಂಘದಲ್ಲಿ ಶ್ರಮಿಸಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಡಾ. ರಾಜಮೋಹನ್, ಡಾ. ಚಂದ್ರಪ್ಪ, ಡಾ. ಸೋಮರಾಜು, ಡಾ.ವಿ.ವಿ.ಚಿನಿವಾಲರ್, ಡಾ. ಸುರಿರಾಜು ವಿ, ಡಾ.ಎಸ್ಎನ್ ರಾಜು, ಡಾ. ಮಲ್ಲನಗೌಡ, ಡಾ, ಅಮರ್ ಪಾಟೀಲ್, ಡಾ. ಕೆ.ಎನ್. ಮಧುಸೂದನ್, ಡಾ. ನಾಗರಾಜ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))