ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದರು

ಯಲಬುರ್ಗಾ: ಸಮಾಜದ ಉದ್ಧಾರಕ್ಕಾಗಿ‌ ಶ್ರಮಿಸಿದ ಶಿವಯೋಗಿ ಸಿದ್ದರಾಮೇಶ್ವರರ ಆದರ್ಶ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಎಪಿಎಂಸಿ ಮಾಜಿ ಸದಸ್ಯ ಹನುಮಂತಪ್ಪ ದೇವಲ್ ಹೇಳಿದರು.

ತಾಲೂಕಿನ ಕಲಭಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿವಯೋಗಿ ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದರು. ಸಾಮಾಜಿಕ ಸಮಾನತೆಯ ತತ್ವ ಸಂದೇಶ ಸಾರಿದ ಮಹಾತ್ಮರ ತತ್ವಾದರ್ಶ ಎಲ್ಲರೂ ಅಳವಡಿಸಿಕೊಳ್ಳಬೇಕು. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜತೆಗೆ ಸಂಸ್ಕಾರ ಕಲಿಸಬೇಕು‌. ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಈ ಸಂದರ್ಭ ಮುಖ್ಯಶಿಕ್ಷಕ ರಾಮಣ್ಣ, ಶಿಕ್ಷಕ ಅಮರೇಶ ಬಳ್ಳಾರಿ, ಮುದುಕಪ್ಪ ಗುಡಿಯಿಂದಲ, ಕನಕಪ್ಪ ಭೋವಿ, ಹನುಮಂತಪ್ಪ ಸಿದ್ದಾಪುರ, ನಿಂಗಪ್ಪ ಹರಿಜನ, ದ್ಯಾಮಣ್ಣ ದೇವಲ್, ಶರಣಪ್ಪ ಸಿದ್ದಾಪುರ, ಸುರೇಶ ಈಳಿಗೇರ್, ನಿರುಪಾದಿ ಹುಚನೂರ ಸೇರಿದಂತೆ ಮತ್ತಿತರರು ಇದ್ದರು.