ಭದ್ರಾವತಿ : ತಾಲೂಕಿನ ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಸ್ಥರ ಬಹುವರ್ಷಗಳ ಬೇಡಿಕೆಯಾದ ಹುಣಸೇಕಟ್ಟೆ ಗ್ರಾಮದಲ್ಲಿ 2x20 M.V.A 66/11 K.V ವಿದ್ಯುತ್ ಉಪ ಘಟಕ (ಸಬ್‌ಸ್ಟೇಷನ್) ಸ್ಥಾಪಿಸಲು ಇಂಧನ ಇಲಾಖೆ ಮುಂದಾಗಿರುವುದಕ್ಕೆ ನಗರದ ಜನ್ನಾಪುರ ಡಿ. ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ಗ್ರಾಮಸ್ಥರ ಪರವಾಗಿ ಇಂದನ ಸಚಿವ ಕೆ.ಜೆ ಜಾರ್ಜ್‌ರವರಿಗೆ ಕೃತಜ್ಞತೆ ಸಲ್ಲಿಸುವ ಜೊತೆಗೆ ತಕ್ಷಣ ಟೆಂಡರ್ ಪ್ರಕ್ತಿಯೆ ಆರಂಭಿಸುವಂತೆ ಮನವಿ ಮಾಡಿದೆ.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರಿಯೂರು, ಅರಳಿಕೊಪ್ಪ, ಕಂಬದಾಳ್ ಹೊಸೂರು, ತ್ಯಾವರಘಟ್ಟ, ಸಿಂಗನಮನೆ, ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವುದರಿಂದ ಗ್ರಾಮಸ್ಥರಿಗೆ, ರೈತರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದ್ದು, ಅಲ್ಲದೆ ಕುಡಿಯುವ ನೀರಿನ ಸರಬರಾಜಿನಲ್ಲಿಯೂ ಸಮಸ್ಯೆ ಎದುರಾಗುತ್ತಿತ್ತು.2x20 M.V.A 66/11 K.V ವಿದ್ಯುತ್ ಉಪ ಘಟಕ (ಸಬ್‌ಸ್ಟೇಷನ್) ಸ್ಥಾಪಿಸಲು ಟೆಂಡರ್ ಪ್ರಕ್ರಿಯೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಅಧೀಕ್ಷಕ ಇಂಜಿನಿಯರ್ ಕೆ.ಪಿ.ಟಿ.ಸಿಎಲ್ ಕಛೇರಿ ಶಿವಮೊಗ್ಗ ಇವರಿಂದ ಪ್ರಸ್ತಾವನೆ ಹಿನ್ನಲೆಯಲ್ಲಿ ಹಾಗು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮೀಣೋತ್ಸವ ಕಾರ್ಯಕ್ರಮ ನಡೆಯಲಿರುವುದರಿಂದ ಈ ಕಾರ್ಯಕ್ರಮಕ್ಕೆ ಇಂಬುಕೊಡಲು ಟೆಂಡರ್ ಪ್ರಕ್ರಿಯೆ ಕಾರ್ಯಗತಗೊಳಿಸಲು ತುರ್ತಾಗಿ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಟ್ರಸ್ಟ್ ಛೇರ್‍ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್.ವೇಣುಗೋಪಾಲ್ ಕೋರಿದ್ದಾರೆ.

----

ಡಿ 22-ಬಿಡಿವಿಟಿ ಲ೧: ಕೆ.ಜೆ ಜಾರ್ಜ್