ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿರುವ ಪ್ರತಿಷ್ಠಿತ ಕ್ಯುಂಗ್ ಹೀ ವಿಶ್ವವಿದ್ಯಾಲಯದ ಸಂಶೋಧನಾ ಘಟಕ ಹಾಗೂ ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗದ ಮುಖ್ಯಸ್ಥ ಪ್ರೊ. ಯೋಂಗ್-ಡೇ ಕ್ವಾನ್ ವಿರಾಜಪೇಟೆಯಲ್ಲಿರುವ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಬೆಳ್ಳಿ ಮಹೋತ್ಸವದ ಚಟುವಟಿಕೆಗಳ ಅಂಗವಾಗಿ ಭೇಟಿ ನೀಡಿದರು.ಈ ಸಂದರ್ಭ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾನಿಲಯಗಳ ಪರಸ್ಪರ ಸಹಯೋಗದ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಇಂಪ್ಲಾಂಟ್ ಡೆಂಟಿಸ್ಟ್ರಿ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿಯಲ್ಲಿ ಪರಿಣಿತರು, ಇಂಪ್ಲಾಂಟ್ ಬೆಂಬಲಿತ ದಂತ ಪುನರ್ವಸತಿ ಸಾಧಿಸಲು ಸಂಬಂಧಿಸಿದ ವಿಷಯಗಳ ಕುರಿತು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಈ ಒಪ್ಪಂದದಿಂದ ಕೊಡಗಿನ ಸಾಮಾನ್ಯ ಜನತೆಗೆ ವಿಶ್ವದರ್ಜೆಯ ಇಂಪ್ಲಾಂಟ್ಕೃತಕ ದಂತ ಚಿಕಿತ್ಸೆಯನ್ನು ಈಗ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೀಡಲಾಗುತ್ತದೆ. ಇಂಪ್ಲಾಂಟ್ ಕೃತಕ ದಂತ ಚಿಕಿತ್ಸೆಯಲ್ಲಿ ವಿಶ್ವ ವಿಖ್ಯಾತಿ ಗಳಿಸಿದೆ ಎಂದರಲ್ಲದೆ ಹಲವು ಜಟಿಲವಾದ ಚಿಕಿತ್ಸಾ ವಿಧಾನಗಳನ್ನು ಕೊಡಗು ದಂತ ವೈದ್ಯಕೀಯ ವಿದ್ಯಾಲಯ ಸ್ನಾತಕೋತರ ಪದವೀಧರರಿಗೆ ತಿಳಿಸಿದರು.
ಶಸ್ತ್ರಚಿಕಿತ್ಸೆಗೆ ಹೆಚ್ಚಿನ ಅಪಾಯವೆಂದು ಹಿಂದೆ ಪರಿಗಣಿಸಲ್ಪಟ್ಟ ರೋಗಿಗಳಲ್ಲಿ ಇಂಪ್ಲಾಂಟ್ ಚಿಕಿತ್ಸೆಯ ದೀರ್ಘಾವಧಿಯ ಯಶಸ್ಸನ್ನು ಅವರು ವಿವರಿಸಿದರು.ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ.ಸುನಿಲ್ ಮುದ್ದಯ್ಯ ಮಾತನಾಡಿ, ದೇಶದಲ್ಲಿ ಇಂಪ್ಲಾಂಟ್ ಡೆಂಟಿಸ್ಟ್ರಿಯಲ್ಲಿ ಛಾಪು ಮೂಡಿಸಲು ದಕ್ಷಿಣ ಕೊರಿಯಾ ಸಹಯೋಗವು ಈಗ ಕ್ರಾನಿಯೊಫೇಶಿಯಲ್ ಇಂಪ್ಲಾಂಟ್‌ಗಳು ಸೇರಿದಂತೆ ಸುಧಾರಿತ ಇಂಪ್ಲಾಂಟಾಲಜಿಯ ಸಂಪೂರ್ಣ ಕ್ಷೇತ್ರವನ್ನು ಒಳಗೊಂಡಿದೆ ಎಂದರು.
ಕೊಡಗು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ರೋಗಿಗಳು ಅತ್ಯುತ್ತಮವಾದ, ಸಂಪೂರ್ಣ ಶ್ರೇಣಿಯ ಚಿಕಿತ್ಸೆ ಪಡೆದುಕೊಳ್ಳಬಹುದು, ದಂತ ಮತ್ತು ಮುಖದ ರಚನೆಗಳ ನಷ್ಟ ಪುನರ್ವಸತಿ ಮಾಡಬಹುದು ಎಂದು ವಿವರಿಸಿದರು.ಕೊಡಗು ದಂತ ವೈದ್ಯಕೀಯ ಮಹಾ ವಿದ್ಯಾಲಯದ ರೋಗಿಗಳ ಆರೈಕೆ ಮತ್ತು ದಂತ ಶಿಕ್ಷಣದಲ್ಲಿ ೨೫ ವರ್ಷಗಳ ಶ್ರೇಷ್ಠತೆ ಆಚರಿಸುತ್ತಿದೆ ಮತ್ತು ಎಲ್ಲಾ ಚಿಕಿತ್ಸಾ ಅಗತ್ಯಗಳನ್ನು ಒದಗಿಸುವ ಅತ್ಯಾಧುನಿಕ ಕೇಂದ್ರವಾಗಿ ಅಭಿವೃದ್ಧಿಪಡಿಸಿದೆ ಎಂದರು.
ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ, ಪ್ರಾಂಶುಪಾಲ ಡಾ. ಕೆ.ಸಿಪೊನ್ನಪ್ಪ, ಉಪ ಪ್ರಾಂಶುಪಾಲ ಡಾ. ಜಿತೇಶ್, ಇಂಪ್ಲಾಂಟ್ ಘಟಕ ಮುಖ್ಯಸ್ಥ ಡಾ.ವಿನಯ್, ಡಾ. ಬಸವರಾಜ್ ಮತ್ತು ಡಾ. ಅಮಿತ್ ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))