ಕೃಷಿಯಲ್ಲಿ ಮೂಲ ಪದ್ಧತಿ ಜಾರಿಗೆ ತಂದರೆ ರೋಗ ಬಾಧೆ ಕಡಿಮೆ: ಮಂಜುನಾಥ

| Published : Sep 02 2025, 12:00 AM IST

ಸಾರಾಂಶ

ಪುತ್ತೂರು ಎಸ್‌ಕೆಎಎಂಎಸ್‌ ಕಟ್ಟಡದಲ್ಲಿರುವ ರೈತಸಂಘ ದ ಕೇಂದ್ರ ಕಚೇರಿಯಲ್ಲಿ ತೋಟಗಾರಿಕೆ ಬೆಳೆಗಳ ಮತ್ತು ಬೆಳೆ ವಿಮೆ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಮಾಹಿತಿ ಕಾರ್ಯಾಗಾರ ನೆರವೇರಿತು.

ಪುತ್ತೂರು: ಕೃಷಿಯಲ್ಲಿ ಮೂಲ ಪದ್ಧತಿ ಜಾರಿಗೆ ತಂದಾಗ ರೋಗ ರುಜಿನ ಕಡಿಮೆ ಮಾಡಬಹುದು. ಔಷಧಿಯೊಂದೇ ಪರಿಹಾರವಾಗದೆ, ಆಹಾರ ಸಮರ್ಪಕ ನಿರ್ವಹಣೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೃಷಿಗಳಿಗೆ ಮಣ್ಣು ಪರೀಕ್ಷೆ ನಡೆಸಿ ಸುಣ್ಣ ನೀಡುವುದರಿಂದ ಮಣ್ಣಿನ ರಸ ಸಾರ ಹೆಚ್ಚಾಗುತ್ತದೆ ಎಂದು ಮಂಗಳೂರು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಹೇಳಿದ್ದಾರೆ. ಪುತ್ತೂರು ಎಸ್‌ಕೆಎಎಂಎಸ್‌ ಕಟ್ಟಡದಲ್ಲಿರುವ ರೈತಸಂಘ ದ ಕೇಂದ್ರ ಕಚೇರಿಯಲ್ಲಿ ನಡೆದ ತೋಟಗಾರಿಕೆ ಬೆಳೆಗಳ ಮತ್ತು ಬೆಳೆ ವಿಮೆ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.

ಕೃಷಿಯಲ್ಲಿ ಏನೇ ಮಾಡಿದರೂ ವಿಜ್ಞಾನ ಬಿಡಬಾರದು. ಅಡಕೆ ತೋಟದಲ್ಲಿ ಹಿಂಗಾರ ಒಣಗುವ ಸಮಸ್ಯೆಯಿಂದ ಬೆಳೆಗಾರರಗೆ ತೀವ್ರ ಸಮಸ್ಯೆಯಾಗುತ್ತದ್ದು, ಸುಳಿ ಹಾಗೂ ಎಲೆಗೂ ಬ್ರೋಡೋ ದ್ರಾವಣ ಸ್ಪ್ರೇ ಮಾಡುವುದರಿಂದ ಪರಿಹಾರ ಕಂಡುಕೊಳ್ಳಬಹುದು. ರೈತರು ಆದಾಯ ಹೆಚ್ಚಿಸಿಕೊಳ್ಳಲು ಆಧುನಿಕ ಯಂತ್ರೋಪಕರಣದ ಬಳಕೆ ಹೆಚ್ಚು ಮಾಡಬೇಕು. ಕೊಕೋ, ಕಾಳುಮೆಣಸು ಸೇರಿ ಉಪ ಬೆಳೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.ಪುತ್ತೂರು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ರೇಖಾ ಎ., ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ಮುಖಂಡರಾದ ಮುರುವ ಮಹಾಬಲ ಭಟ್, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ಸವಣೂರು, ಶಿವಣ್ಣ ಗೌಡ ಇಡ್ಯಾಡಿ, ಎನ್. ಕೆ. ಇದಿನಬ್ಬ ಉಪಸ್ಥಿತರಿದ್ದರು.