ಸಾರಾಂಶ
ಪರೀಕ್ಷಾ ಪೂರ್ವ ದಿನಗಳ ಸಮಯ ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿಗಳು ಭಯ ಮುಕ್ತರಾಗಿ ಪರೀಕ್ಷೆ ಎದುರಿಸಬೇಕು
ಮುಂಡಗೋಡ: ಪರೀಕ್ಷಾ ಪೂರ್ವ ದಿನಗಳ ಸಮಯ ಸದುಪಯೋಗಪಡಿಸಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಿ ವಿದ್ಯಾರ್ಥಿಗಳು ಭಯ ಮುಕ್ತರಾಗಿ ಪರೀಕ್ಷೆ ಎದುರಿಸಬೇಕು ಎಂದು ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಹೇಳಿದರು.
ಶನಿವಾರ ಕರಗಿನಕೊಪ್ಪ ಲೊಯೋಲ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದೀಪದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರೀಕ್ಷೆ ಪೂರ್ವ ತಯಾರಿಯಾಗಿ ನಡೆಸುತ್ತಿರುವ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಉತ್ತಮ ಸಾಧನೆ ಮಾಡಲು ಸಾದ್ಯ ಎಂದರು.ಫಾ.ವಿಜಯರಾಜು ವಿದ್ಯಾರ್ಥಿಗಳಿಗೆ ದೀಪದಾನ ನೆರವೇರಿಸಿ ಮಾತನಾಡಿ, ಆಂತರಿಕ ಪ್ರತಿಭೆಯನ್ನು ಹೊರ ಚೆಲ್ಲಲು ಪರೀಕ್ಷೆಯಂತಹ ವಾತಾವರಣಗಳು ಸೂಕ್ತ ಎಂದು ಹೇಳಿದರು.
ಉಪನ್ಯಾಸಕ ವಿನಾಯಕ್ ಶೇಟ್ ದೀಪ ದಾನದ ಮಹತ್ವವನ್ನು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು.ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ವಿವಿ ಮಲ್ಲನಗೌಡರ ಹಾಗೂ ಪಾಲಕ ಸಮಿತಿಯ ಮುಖ್ಯಸ್ಥರಾದ ಬಸವರಾಜ ಠಣಕೆದಾರ, ಅರುಣ್, ರೇಶ್ಮಾ ಮುಂತಾದವರು ಉಪಸ್ಥಿತರಿದ್ದರು. ಪವಿತ್ರ ನಿರೂಪಿಸಿದರು. ರಶ್ಮಿ ವಂದಿಸಿದರು.
ಮುಂಡಗೋಡ ಶನಿವಾರ ಕರಗಿನಕೊಪ್ಪ ಲೊಯೋಲ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ದೀಪದಾನ ಕಾರ್ಯಕ್ರಮ ಜರುಗಿತು.