ಅಪ್ರತಿಮ ಕಲಾವಿದೆ ಸರೋಜಾದೇವಿ

| Published : Jul 17 2025, 12:30 AM IST

ಸಾರಾಂಶ

8 ವಯಸ್ಸಿನಲ್ಲಿ ನಟಿ ಬಿ. ಸರೋಜಾದೇವಿ ರಂಗ ಕಲಾವಿದೆಯಾಗಿ ಅನೇಕ ನಾಟಕಗಳಲ್ಲಿ ಪಾತ್ರ ಮಾಡುವ ಮೂಲಕ ಉತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.

ಕುಷ್ಟಗಿ:

ನಟಿ ಬಿ. ಸರೋಜಾದೇವಿ ಅವರು ಆರೂವರೆ ದಶಕಗಳ ಕಾಲ ಚಿತ್ರರಂಗದಲ್ಲಿ ಅದ್ಭುತವಾದ ಸೇವೆ ಸಲ್ಲಿಸುವ ಮೂಲಕ ಅಪ್ರತಿಮ ಕಲಾವಿದೆಯಾಗಿ ನಟಿಸಿದ್ದರು. ಅವರ ಅಗಲಿಕೆ ಇಡೀ ಚಿತ್ರರಂಗ ಸೇರಿದಂತೆ ಕನ್ನಡ ನಾಡು ಬಡವಾಗಿದೆ ಎಂದು ಮಾಜಿ ಕಸಾಪ ಅಧ್ಯಕ್ಷ ರವೀಂದ್ರಸಾ ಬಾಕಳೆ ಹೇಳಿದರು.

ಪಟ್ಟಣದ ಹಳೆಯ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಡೆದ ನಟಿ ಬಿ. ಸರೋಜಾದೇವಿ ಅವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಟರು ಮರೆಯಾಗುತ್ತಿದ್ದು ವಿಷಾಧದ ಸಂಗತಿಯಾಗಿದೆ ಎಂದರು.ಅತ್ಯಂತ ಉನ್ನತ ಮಟ್ಟದ ಕಲಾವಿದರನ್ನು ಕಳೆದುಕೊಳ್ಳುತ್ತಿರುವ ಚಿತ್ರರಂಗವೂ ಸಂಪೂರ್ಣವಾಗಿ ಬಡವಾಗಿದೆ ಎಂದ ಅವರು, ಸರೋಜಾದೇವಿ ಅವರು

8 ವಯಸ್ಸಿನಲ್ಲಿ ರಂಗ ಕಲಾವಿದೆಯಾಗಿ ಅನೇಕ ನಾಟಕಗಳಲ್ಲಿ ಪಾತ್ರ ಮಾಡುವ ಮೂಲಕ ಉತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ ಎಂದರು. ಸಾಹಿತಿ ನಿಂಗಪ್ಪ ಸಜ್ಜನ ಮಾತನಾಡಿ, ಬಿ. ಸರೋಜಾದೇವಿ ಅವರು ಸಾಂಸ್ಕೃತಿಕ ರಂಗಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದು ಅವರ ಅಗಲಿದ್ದು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.

ಭರತೇಶ ಜೋಶಿ ಮಾತನಾಡಿದರು. ಈ ವೇಳೆ ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ, ಕಸಾಪ ಅಧ್ಯಕ್ಷ ಲೆಂಕಪ್ಪ ವಾಲಿಕಾರ, ಮಂಜುನಾಥ ಗುಳೇದಗುಡ್ಡ, ಅಡಿವೆಪ್ಪ ನೆರೆಬೆಂಚಿ, ದೊಡ್ಡಪ್ಪ ಕೈಲವಾಡಗಿ, ಪರಶಿವಮೂರ್ತಿ ಮಾಟಲದಿನ್ನಿ, ಶ್ರೀನಿವಾಸ ಕಂಟ್ಲಿ, ಬಸವರಾಜ ಉಪಲದಿನ್ನಿ, ಅನಿಲಕುಮಾರ ಕಮ್ಮಾರ, ಸಂಗಮೇಶ ಲೂತಿಮಠ, ಬಸವರಾಜ ಗಾಣಿಗೇರ, ಕಿರಣಜ್ಯೋತಿ ಸೇರಿದಂತೆ ಅನೇಕರು ಇದ್ದರು. ಇದೇ ವೇಳೆ ಇತ್ತೀಚಿಗೆ ನಿಧನರಾದ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಆಪ್ತಸಹಾಯಕ ಚಂದ್ರಕಾಂತ ವಡಗೇರಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.