ಶಿಕ್ಷಣದ ಸುಧಾರಣೆಯಿಂದಷ್ಟೇ ದೇಶದ ಸುಧಾರಣೆ: ಶಾಲಾ ಶಿಕ್ಷಣ ಇಲಾಖೆಯ ಡಾ.ಬಾಲಗುರುಮೂರ್ತಿ

| Published : Dec 08 2024, 01:15 AM IST

ಶಿಕ್ಷಣದ ಸುಧಾರಣೆಯಿಂದಷ್ಟೇ ದೇಶದ ಸುಧಾರಣೆ: ಶಾಲಾ ಶಿಕ್ಷಣ ಇಲಾಖೆಯ ಡಾ.ಬಾಲಗುರುಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದ ಸುಧಾರಣೆಯಿಂದ ದೇಶವು ಸುಧಾರಣೆಯಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪಿಯು ಡಿಡಿ ಡಾ.ಬಾಲಗುರುಮೂರ್ತಿ ಹೇಳಿದರು. ತುಮಕೂರಿನಲ್ಲಿ ಭೌತಶಾಸ್ತ್ರ ವಿಷಯದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಭೌತಶಾಸ್ತ್ರ ಕೈಪಿಡಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಶಿಕ್ಷಣದ ಸುಧಾರಣೆಯಿಂದ ದೇಶವು ಸುಧಾರಣೆಯಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಪಿಯು ಡಿಡಿ ಡಾ.ಬಾಲಗುರುಮೂರ್ತಿ ಹೇಳಿದರು.

ಅವರು ವಿದ್ಯಾನಿಧಿ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ), ಜಿಲ್ಲಾ ಭೌತಶಾಸ್ತ್ರಉಪನ್ಯಾಸಕರ ವೇದಿಕೆ, ಮತ್ತು ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ನಡೆದ ಭೌತಶಾಸ್ತ್ರ ವಿಷಯದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಭೌತಶಾಸ್ತ್ರ ಕೈಪಿಡಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಸರಕಾರಿ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು.ಕಲಿಕೆಯಲ್ಲಿ ಹಿನ್ನೆಡೆಯಲ್ಲಿರುವ ಮಕ್ಕಳಿಗೆ ಪೂರಕ ತರಗತಿಗಳನ್ನು ತೆಗೆದುಕೊಂಡು, ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ದಾಖಲೆ ಸಾಧಿಸಬೇಕೆಂಬ ಗುರಿಯಿದೆ. ಅದು ಈಡೇರಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಕುರಿತು ನಾವು ಗಮನ ಹರಿಸಬೇಕು ಎಂದು ಅವರು ಹೇಳಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್‌ಕುಮಾರ್ ಮುಂದಿನ ದಿನಗಳಲ್ಲಿ ಭೌತಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ಒದಗಲಿದೆ. ಇಸ್ರೋ ನಮ್ಮದೇಶದ ಹೆಮ್ಮೆಯೆನಿಸಿ ಪ್ರಪಂಚವೇ ಗುರುತಿಸುವ ಸಾಧನೆ ಮಾಡುತ್ತಿದೆ. ಇನ್ನಷ್ಟು ಸಂಶೋಧಕರನ್ನು ವಿಜ್ಞಾನಿಗಳನ್ನು ರೂಪುಗೊಳಿಸುವುದು ಶಿಕ್ಷಕರಿಂದ ಸಾಧ್ಯವಾಗಬೇಕಿದೆ ಎಂದರು.ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರಭಾಕರರೆಡ್ಡಿ, ಜಿಲ್ಲಾ ಭೌತಶಾಸ್ತ್ರ ವೇದಿಕೆ ಅಧ್ಯಕ್ಷ ಲೋಕನಾಥ್, ಖಚಾಂಚಿ ಕೆ. ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ವೆಂಕಟಾಚಲ ಸಿ.ವಿ., ವಿದ್ಯಾನಿಧಿ ಪ್ರಾಂಶುಪಾಲ ಸಿದ್ಧೇಶ್ವರ ಸ್ವಾಮಿಎಸ್. ಆರ್., ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ್ ಎಂ.ಭಟ್, ವೆಂಕಟೇಶ್ ಕೆ.ವಿ. ಡಾ.ಮನೋಹರ್ ಉಪಸ್ಥಿತರಿದ್ದರು.ಜಿಲ್ಲೆಯ ಭೌತಶಾಸ್ತ್ರಉಪನ್ಯಾಸಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. ವಿದ್ಯಾರ್ಥಿನಿ ದೀಕ್ಷಾ ಪ್ರಾರ್ಥಿಸಿದರು. ಉಪನ್ಯಾಸಕಿ ಆರತಿ ಪಟ್ರಮೆ ನಿರ್ವಹಿಸಿದರು.