ರಾಮನಾಥಪುರ ಜಾತ್ರೆಯಲ್ಲಿ ಶಾಸಕ ರೇವಣ್ಣ ಭಾಗಿ

| Published : Dec 08 2024, 01:15 AM IST

ರಾಮನಾಥಪುರ ಜಾತ್ರೆಯಲ್ಲಿ ಶಾಸಕ ರೇವಣ್ಣ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರ ಶ್ರೀಕ್ಷೇತ್ರವು ಇಂದಿಗೂ ತನ್ನ ಗತವೈಭವವನ್ನು ಹಾಗೂ ಜನಾಕರ್ಷಣೆಯನ್ನು ವೃದ್ಧಿಸಿಕೊಳ್ಳುತ್ತಾ ಈ ಕ್ಷೇತ್ರದ ಮಹಿಮೆಯ ಮಹತ್ವವನ್ನು ಕಾಯ್ದುಕೊಂಡು ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಮಾಸ, ದಿನಗಳಲ್ಲಿ ವಿಶೇಷ ಪೂಜೆ, ಹಾಗೂ ಪ್ರತಿ ವರ್ಷ ರಾಮನಾಥಪುರದಲ್ಲಿ 6 ರಥೋತ್ಸವಗಳು ನಡೆಯತ್ತಿರುವುದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಕಾವೇರಿ ನದಿ ದಂಡೆಯಲ್ಲಿರುವ ರಾಮನಾಥಪುರ ಶ್ರೀಕ್ಷೇತ್ರವು ಇಂದಿಗೂ ತನ್ನ ಗತವೈಭವವನ್ನು ಹಾಗೂ ಜನಾಕರ್ಷಣೆಯನ್ನು ವೃದ್ಧಿಸಿಕೊಳ್ಳುತ್ತಾ ಈ ಕ್ಷೇತ್ರದ ಮಹಿಮೆಯ ಮಹತ್ವವನ್ನು ಕಾಯ್ದುಕೊಂಡು ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವನ್ನು ಹೊಂದಿರುವ ಪುಣ್ಯಕ್ಷೇತ್ರವಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

"ದಕ್ಷಿಣ ಕಾಶಿ " ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀಕ್ಷೇತ್ರ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಮಹಾ ರಥೋತ್ಸವದ ಪ್ರಯುಕ್ತ ಆಗಮಿಸಿ, ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಸುಕ್ಷೇತ್ರ ರಾಮನಾಥಪುರದ ಅಪ್ರತಿಮ ಉತ್ತುಂಗ ಪ್ರಖ್ಯಾತಿ, ಮಹಾತ್ಮೆ, ಸುವರ್ಣಾಕ್ಷರದಲ್ಲಿ ಕೆತ್ತಲ್ಪಡುವಂತದ್ದು. ಇಲ್ಲಿಯ ಚತುರ್ಯಗ ಮೂರ್ತಿ ರಾಮನಾಥಪುರ, ಅಗಸ್ಥೇಶ್ವರಸ್ವಾಮಿ, ಪಟ್ಟಾಭಿರಾಮ, ವರದಾನ ಬಸವೇಶ್ವರ ಅಲ್ಲದೆ ಪವಿತ್ರ ಜೀವನದಿ ಕಾವೇರಿಯ ಒಳಾಂಗಣದಲ್ಲಿರುವ ವಹ್ನಿ ಪುಷ್ಕರಣಿ, ಗಾಯತ್ರಿ ಶಿಲೆ, ಗೋಗರ್ಭ, ಗೌತಮಶಿಲೆ ಕುಮಾರಧಾರ, ಸೇರಿದಂತೆ ಹತ್ತಾರು ದೇವಾಲಯಗಳು ಇದ್ದು, ವಿಶೇಷ ಮಾಸ, ದಿನಗಳಲ್ಲಿ ವಿಶೇಷ ಪೂಜೆ, ಜಾತ್ರೆ ಮಹೋತ್ಸವಗಳು, ನಡೆದುಕೊಂಡು ಹಾಗೂ ಪ್ರತಿ ವರ್ಷ ರಾಮನಾಥಪುರದಲ್ಲಿ 6 ರಥೋತ್ಸವಗಳು ನಡೆಯತ್ತಿರುವುದಕ್ಕೆ ಬಹಳ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಹಾಸನ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇರ್ಶಕರಾದ ಹೊನ್ನವಳ್ಳಿ ಸತೀಶ್ ಮುಂತಾದವರು ಇದ್ದರು.