ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ವೃದ್ಧಿ

| Published : Dec 15 2024, 02:04 AM IST

ಸಾರಾಂಶ

ಹ್ಯಾಂಡ್‌ ಬಾಲ್ ಪಂದ್ಯಾವಳಿ ಉದ್ಘಾಟಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ.ಪಿ.ವಿ.ಕಡಗದಕೈ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ವೃದ್ಧಿಯಾಗಿ ಮಾನಸಿಕ ಹಿಡಿತ ಸಾಧಿಕೊಳ್ಳುಬಹುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರೀಡಾ ನಿರ್ದೇಶಕ ಡಾ.ಪಿ.ವಿ.ಕಡಗದಕೈ ಹೆಳಿದರು.

ಬಸವೇಶ್ವರ ಎಂಜನಿಯರಿಂಗ್ ಕಾಲೇಜು ಹಾಗೂ ವಿಟಿಯು ಬೆಳಗಾವಿ ಜಂಟಿಯಾಗಿ ಆಯೋಜಿಸಿದ ರಾಜ್ಯ ಮಟ್ಟದ ಮಹಿಳಾ ಹ್ಯಾಂಡ್‌ ಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಆಟದಲ್ಲಿ ಸ್ಫೂರ್ತಿಯಿಂದ ಭಾಗವಹಿಸುವುದು ಮುಖ್ಯ. ವೇಗ ನಿಯಂತ್ರಣ, ದೈಹಿಕ ದಂಡನೆ, ನಿರಂತರತೆ ಇಂತಹ ಸ್ವಭಾವಗಳು ಗೆಲುವಿಗೆ ಮುಖ್ಯವಾಗುತ್ತವೆ. ನಮ್ಮ ಪ್ರಾಚಿನ ಯೋಗ ಮತ್ತು ಪ್ರಾಣಾಯಾಮದಂತಹ ವ್ಯಾಯಾಮಗಳಿಗೆ ಸರ್ಕಾರದಿಂದ ಒಳ್ಳೆಯ ಪ್ರೋತ್ಸಾಹ ಸಿಗುತ್ತಿದೆ ಎಂದರು.

ಬಿವಿವಿ ಸಂಘದ ತಾಂತ್ರಿಕ ಶಿಕ್ಷಣ ಸಂಸ್ಥಗಳ ನಿರ್ದೇಶಕ ಡಾ.ಆರ್.ಎನ್.ಹೆರಕಲ್ ಮಾತನಾಡಿ, ಎಂಜನಿಯರುಗಳು ಪ್ರತಿ ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆಟಗಾರರು ಕ್ರೀಡಾ ಮನೋಭಾವ ಮತ್ತು ತಂಡ ಸ್ಫೂರ್ತಿಯಂತಹ ಸ್ವಭಾವ ರೂಡಿಸಿಕೊಳ್ಳಬೇಕು. ಎಂಜನಿಯರಿಂಗ್ ಕ್ಷೇತ್ರದಲ್ಲಿ ಆರ್ಥಿಕ, ನಿರ್ವಹಣಾ, ಕೌಶಲ್ಯ ಬೆಳೆಸಿಕೊಂಡು ದೈಹಿಕ ಸದೃಢತೆಯೊಂದಿಗೆ ಸಮರ್ಥ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಈ ಮೂಲಕ ಉತ್ತಮ ಸಾಧನೆ ಮಾಡಿದಾಗ ಸಮಾಜದಿಂದ ಗೌರವ ದೊರೆಯುತ್ತದೆ ಎಂದರು.

ಕಾಲೇಜು ಪ್ರಾಚಾರ್ಯ ಡಾ.ಬಿ.ಆರ್.ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂದ್ಯದಲ್ಲಿ ಸೋಲು ಗೆಲುವುಗಳಿಗಿಂತ ಕ್ರೀಡಾ ಸ್ಫೂರ್ತಿಯಿಂದ ಆಡವಾಡುವುದು ಬಹಳ ಮುಖ್ಯ ಎಂದರು. ಸಂಸ್ಕೃತಿಕ ಸಂಯೋಜಕರಾದ ಡಾ.ಮಂಜುಳಾ ಸುತಗುಂಡಾರ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿದರು. ಕಾರ್ಯಾಧ್ಯಕ್ಷ ಡಾ.ಕಿರಣಕುಮಾರ ಬೆಳವಲದ ವಂದಿಸಿದರು. ದೈಹಿಕ ನಿರ್ದೇಶಕ ಪ್ರೊ.ಗಣೇಶ ಕೋರಿ ಪಂದ್ಯಾವಳಿ ಸಂಘಟಿಸಿದ್ದರು. ಪಂದ್ಯದ ಬೆಂಗಳೂರಿನ ಹ್ಯಾಂಡಬಾಲ್ ಅಸೋಸಿಯೇಶನ್ ಖಜಾಂಚಿ ಶ್ರೀ ಪ್ರಕಾಶ ಮುಖ್ಯ ತಿರ್ಪುಗಾರರಾಗಿ ಆಗಮಿಸಿದ್ದರು.