ಚಿಕ್ಕೋಡಿಯಲ್ಲಿ ಜೊಲ್ಲೆ ಸೊಕ್ಕು, ಅಹಂಕಾರಕ್ಕೆ ಸೋಲು

| Published : Jun 24 2024, 01:38 AM IST

ಸಾರಾಂಶ

ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ‌ಮೋದಿ ಹಾಗೂ ಬಿಜೆಪಿಗೆ ಸೋಲಾಗಿಲ್ಲ. ಅಲ್ಲಿ ಅಣ್ಣಾಸಾಹೇಬ ಜೊಲ್ಲೆಯ ಸೊಕ್ಕು, ಅಹಂಕಾರಕ್ಕೆ ಸೋಲಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಗುಡುಗಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ‌ಮೋದಿ ಹಾಗೂ ಬಿಜೆಪಿಗೆ ಸೋಲಾಗಿಲ್ಲ. ಅಲ್ಲಿ ಅಣ್ಣಾಸಾಹೇಬ ಜೊಲ್ಲೆಯ ಸೊಕ್ಕು, ಅಹಂಕಾರಕ್ಕೆ ಸೋಲಾಗಿದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಗುಡುಗಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿಯಲ್ಲಿ ಸೋಲು ಕಂಡಿದ್ದು ಅಣ್ಣಾಸಾಹೇಬ ಜೊಲ್ಲೆ ಮಾತ್ರ. ಹಿಂದೂಗಳು, ಬಿಜೆಪಿ ಕಾರ್ಯಕರ್ತರು ಸೋತಿಲ್ಲ. ಯಾವುದೇ ರೀತಿಯ ಕಾರ್ಯಕರ್ತರ ಜತೆಗೆ ಸಂಪರ್ಕವಿಲ್ಲದ ವ್ಯಕ್ತಿ, ಕ್ಷೇತ್ರದಲ್ಲಿ ಏನೇನೂ ಕೆಲಸ ಮಾಡದ ವ್ಯಕ್ತಿ ಅಣ್ಣಾಸಾಹೇಬ ಜೊಲ್ಲೆ, ಕೇವಲ ಬ್ಯಾಂಕ್, ಜಮೀನು, ಪೆಟ್ರೋಲ್ ಬಂಕ್‌ಗಳನ್ನು ಬೆಳೆಸಿದರೇ ವಿನಃ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬಿಜೆಪಿ ಸೋತಿಲ್ಲ. ಮುಂದಿನ ಬಾರಿ ಶಕ್ತಿ ಮೀರಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.ಲವ್ ಜಿಹಾದ್‌ಗೆ ಸಂಬಂಧ ನಾಲ್ಕೈದು ದಿನದಲ್ಲಿ 500ಕ್ಕೂ ಹೆಚ್ಚು ಕರೆ ಬಂದಿವೆ. ಅದರಲ್ಲಿ ನೂರಕ್ಕೂ ಹೆಚ್ಚು ವಿದೇಶದಿಂದ ಬೆದರಿಕೆ‌ ಕರೆಗಳು ಬಂದಿವೆ ಎಂದು ದೂರಿದರು.

ಸಹಾಯವಾಣಿ ಘೋಷಣೆ ಮಾಡಿದ ಕೂಡಲೇ ಪಾಕಿಸ್ತಾನ ಸೇರಿದಂತೆ ಇನ್ನಿತರ ಕಡೆಗಳಿಂದ ಬಾಂಬ್ ಬೆದರಿಕೆಗಳನ್ನು ಹಾಕಿದ್ದಾರೆ. 70 ಕರೆಗಳು ಮುಸ್ಲಿಮರ ದೌರ್ಜನ್ಯದಿಂದ ಒಳಗಾದ ಸಂತ್ರಸ್ತ ಹಿಂದೂ ಮಹಿಳೆಯರು ಕರೆ ಮಾಡಿ ರಕ್ಷಣೆ ಮಾಡುವಂತೆ ಕೇಳಿದ್ದಾರೆ. ನೇಹಾ ಪ್ರಕರಣವಾದ ಬಳಿಕ ಹುಬ್ಬಳ್ಳಿಯಲ್ಲಿ 5 ಘಟನೆಗಳು ನಡೆದವು. ಆದ್ದರಿಂದ ಇದನ್ನು ನಾವು ಗಂಭೀರವಾಗಿ ಪರಿಗಣಿಸಿ ಹಿಂದೂ ಮಹಿಳೆಯರ ರಕ್ಷಣೆಯಾಗಬೇಕು ಎಂದು ಹುಬ್ಬಳ್ಳಿಯಲ್ಲಿಯೇ ಸಹಾಯವಾಣಿ ಆರಂಭಿಸಿದ್ದೇವೆ ಎಂದು ತಿಳಿಸಿದರು.ಹಿಂದೂ ಮಹಿಳೆಯರು ಧೈರ್ಯವಾಗಿ ತಿರುಗಾಡಲು ಧಾರವಾಡದಲ್ಲಿ 50 ಮಹಿಳೆಯರಿಗೆ ತ್ರಿಶೂಲ್ ದಿಕ್ಷೆ ನೀಡಲಾಗಿದೆ. ಮಾನಸಿಕವಾಗಿ ಧೈರ್ಯಕೊಡುವುದನ್ನು ಶ್ರೀರಾಮ ಸೇನೆ ಮಾಡಿದೆ. ಕರ್ನಾಟಕದಲ್ಲಿ ನೂರು ಕಡೆ ತ್ರಿಶೂಲ ದಿಕ್ಷೆ ಕೊಡುವುದರ ಮೂಲಕ ಹಿಂದೂ ಹುಡುಗಿಯರ ರಕ್ಷಣೆ ಮಾಡುವುದು ನಮ್ಮ ಕೆಲಸವಾಗಿದೆ ಎಂದರು.ರೇಣುಕಾಸ್ವಾಮಿ ಪತ್ನಿಗೆ ಆರ್ಥಿಕ ಸಹಾಯ ಮಾಡಲಿ:

ದರ್ಶನನ ಪತ್ನಿ ವಕೀಲರ ಕಡೆ ಹೋಗುವ ಬದಲು ರೇಣುಕಾಸ್ವಾಮಿ ಪತ್ನಿಯ ಮನೆಗೆ ಹೋಗಿ ಆರ್ಥಿಕ ಸಹಾಯ ಮಾಡಲಿ. ಅವರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಪ್ರಮೋದ್ ಮುತಾಲಿಕ ಹೇಳಿದರು.ದರ್ಶನ ಕೊಲೆ ಪ್ರಕರಣದಲ್ಲಿ ಕೆಲ ಸಚಿವರು ರಕ್ಷಣೆ ಮಾಡುತ್ತಿದ್ದಾರೆ. ಪೊಲೀಸರಿಗೆ ಒಂದು ಹೇಳುತ್ತೇನೆ ನಿಮ್ಮ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಯಾರ ಮಾತು ಕೇಳದೇ ದರ್ಶನ ಕೊಲೆ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪಿ ದರ್ಶನ, ಪವಿತ್ರಾಗೌಡ ಹಾಗೂ ಉಳಿದ ಆರೋಪಿಗಳಿಗೆ ಪೊಲೀಸರು ಪೂರಕ ಸಾಕ್ಷಿ ಸಂಗ್ರಹಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.