ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವಾರ್ಷಿಕ ಕ್ರೀಡಾಕೂಟ: ೨ನೇ ದಿನವೂ ಆಳ್ವಾಸ್ ಪಾರಮ್ಯ

| Published : Nov 30 2023, 01:15 AM IST

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ವಾರ್ಷಿಕ ಕ್ರೀಡಾಕೂಟ: ೨ನೇ ದಿನವೂ ಆಳ್ವಾಸ್ ಪಾರಮ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜೀವ್ವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ವಾರ್ಷಿಕ ಕ್ರೀಡಾಕೂಟ ಅಥ್ಲೆಟಿಕ್ಕ್‌ ಚಾಂಪಿಯನ್ನ್‌ ಶಿಪ್ಪ್‌: ಎರಡನೇ ದಿನವೂ ಆಳ್ವಾಸ್ಸ್‌ ಕಾಲೇಜು ವಿದ್ಯಾರ್ಥಿಗಳದ್ದೇ ಪಾರಮ್ಯ, ಹಲವು ಕೂಟ ದಾಖಲೆಗಳು

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘೨೧ನೇ ಅಂತರ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್‌ಶಿಪ್ ೨೦೨೩-೨೪’ನ ಎರಡನೇ ದಿನವಾದ ಬುಧವಾರವೂ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‌ನ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಪುರುಷರ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‌ ೭೦ ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೂಲ್ಕಿಯ ಸೈಂಟ್ ಅನ್ಸ್ ಕಾಲೇಜು ೧೩ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‌ ೩೮ ಅಂಕಗಳೊಂದಿಗೆ ಪ್ರಥಮ ಸ್ಥಾನ ಮುಂದುವರಿಸಿದರೆ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್‌ ೧೯ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು.

ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್‌ ಕಾಲೇಜು ಪುರುಷರ ವಿಭಾಗದಲ್ಲಿ ೯ ಚಿನ್ನ, ೪ ಬೆಳ್ಳಿ ಹಾಗೂ ೩ ಕಂಚಿನ ಪದಕಗಳನ್ನು ಪಡೆದರೆ, ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್‌ ಹೆಲ್ತ್‌ಸೈನ್ಸ್‌ ಕಾಲೇಜು ೫ ಚಿನ್ನ, ೨ ಬೆಳ್ಳಿ ಹಾಗೂ ೧ ಕಂಚು ಪದಕಗಳನ್ನು ಪಡೆಯಿತು.

ನೂತನ ಕೂಟ ದಾಖಲೆಗಳು

ಆಳ್ವಾಸ್ ಅಲೈಡ್ ಹೆಲ್ತ್‌ಸೈನ್ಸ್‌ ಕಾಲೇಜಿನ ಸರಣ್ ಕೆ. ಪುರುಷರ ವಿಭಾಗದ ೨೦೦ ಮೀಟರ್ಸ್ ಓಟವನ್ನು ೨೨.೧ ಸೆಕೆಂಡುಗಳಲ್ಲಿ ಪೂರೈಸುವ ಮೂಲಕ, ಈ ಹಿಂದೆ ಸುಳ್ಯದ ಕೆವಿಜಿಡಿಸಿ ಕಾಲೇಜಿನ ಸುರೇಶ್‌ಕುಮಾರ್ ಹೆಸರಲ್ಲಿ ಇದ್ದ ಹಿಂದಿನ ಕೂಟ ದಾಖಲೆಯನ್ನು ಸಮ ಮಾಡಿದ್ದಾರೆ.

ಮಹಿಳೆಯರ ದೂರ ಜಿಗಿತದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್‌ಸೈನ್ಸ್‌ ಕಾಲೇಜಿನ ದುರ್ಗಾ ೪.೫೬ ಮೀಟರ್ಸ್ ಜಿಗಿಯುವ ಮೂಲಕ ಕೂಟ ದಾಖಲೆಯನ್ನು ಸಮಗೊಳಿಸಿದರು. ಈ ಹಿಂದೆ ಇದೇ ಅಂತರವನ್ನು (೪.೫೬ ಮೀಟರ್ಸ್) ಜಿಗಿಯುವ ಮೂಲಕ ಆಳ್ವಾಸ್ ಯೋಗ ವಿಜ್ಞಾನ ಕಾಲೇಜಿನ ಸೃಜನಾ ಕೆ. ಕೂಟ ದಾಖಲೆ ಮಾಡಿದ್ದರು.

ಪುರುಷರ ೪x೪ ೧೦೦ ಮೀಟರ್ ರಿಲೇಯನ್ನು ೩.೨೭ ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ ಆಳ್ವಾಸ್ಸೈ ಓಟಗಾರರು ಕೂಟ ದಾಖಲೆ ಮಾಡಿದ್ದಾರೆ. ಅವರು ಈ ಹಿಂದೆ ಇದ್ದ ತಮ್ಮದೇ ಕಾಲೇಜಿನ ದಾಖಲೆ ೩.೩೬ ಸೆಕೆಂಡುಗಳನ್ನು ಮುರಿದು, ನೂತನ ದಾಖಲೆ ಮಾಡಿದ್ದಾರೆ.

ಪುರುಷರ ವಿಭಾಗ: ೨೦ಸಾವಿರ ಮೀಟರ್ ನಡಿಗೆ: ರಾಕೇಶ್ ಗಂಭೀರ್ ಕೆ.ಆರ್. (ಹೆರಿಟೇಜ್ ಸಿಟಿ ಕಾಲೇಜು, ಮೈಸೂರು)-೧, ಶಿತಿಲ್ ಜೋಸೆಫ್ (ಫಾ.ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ಮಂಗಳೂರು)-೨, ಆಲ್ವಿನ್ ಜಾಬಿ (ಕಣಚೂರು ನರ್ಸಿಂಗ್ ವಿಜ್ಞಾನಗಳ ಕಾಲೇಜು, ದೇರಳಕಟ್ಟೆ)-೩,

ಡಿಸ್ಕಸ್ ಎಸೆತ: ರಾಕೇಶ್ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ)-೧, ಮದನ್ ಜಿ.ಕೆ. (ಎಸ್.ಎಸ್. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕಾಲೇಜು, ದಾವಣಗೆರೆ)-೨, ರತನೇಶ್ ಆರ್. (ಶಾಂತಾ ಸಮೂಹ ಸಂಸ್ಥೆಗಳು, ನಂದನಗಾನಹಳ್ಳಿ)-೩

೮೦೦ ಮೀ. ಓಟ: ಓಂಕಾರ್ ನಾಗೇಶ್ ಕೊಲ್ಕಾರ್ (ಶ್ರೀನಿವಾಸ್ ನರ್ಸಿಂಗ್ ಕಾಲೇಜು, ಮಂಗಳೂರು)-೧, ಥಾಮಸ್ ಪೌಲ್ ಒಜೆ((ಸೈಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜು, ಮೂಲ್ಕಿ)-೨, ಪ್ರವೀಶ್ ಎಂ. (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ)-೩

ದೂರ ಜಿಗಿತ: ಸೂರ್ಯ ಪಿ. (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ)-೧, ರಾಜೇಶ್ (ಮಂಡ್ಯ ವೈದ್ಯಕೀಯ ವಿಜ್ಞಾನ ಕಾಲೇಜು)-೨, ಓಂಕಾರ್ ನಾಗೇಸ್ ಕೊಲ್ಕಾರ್ (ಶ್ರೀನಿವಾಸ ಫಾರ್ಮಸಿ ಕಾಲೇಜು, ಮಂಗಳೂರು)-೩

ಹ್ಯಾಮರ್ ಎಸೆತ: ತಮಿಳ್ ವಲವನ್ (ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗವಿಜ್ಞಾನ ಕಾಲೇಜು, ಮೂಡುಬಿದಿರೆ)-೧, ವಿಪಿನ್ ಥಾಮಸ್ (ಜುಲೇಕಾ ನರ್ಸಿಂಗ್ ಕಾಲೇಜು, ಮಂಗಳೂರು)-೨, ಕೇಶವ ಕುಮಾರ್ ಎಲ್.ವಿ. (ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು, ಮೂಡುಬಿದಿರೆ)-೩

೨೦೦ ಮೀಟರ್ ಓಟ: ಸರಣ್(ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ)-೧, ಕಾರ್ತಿಕ್ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ)-೨, ಆಕಾಶ್ ಬೆನಡಿಕ್ಟ್ (ಶ್ರೀ ಗಂಗೋತ್ರಿ ಕಾಲೇಜ್ ಆಫ್ ನರ್ಸಿಂಗ್, ಬೆಂಗಳೂರು)-೩

೩ ಸಾವಿರ ಮೀ ಸ್ಟೀಪಲ್ ಚೇಸ್: ವರುಣ್ ರಾಥೋಡ್ (ಮಂಡ್ಯ ಇನ್ಸಿ÷್ಟಟ್ಯೂಟ್ ಮೆಡಿಕಲ್ ಸೈನ್ಸ್)-೧, ಮರ‍್ಯ ವೈ ಫುಲೆ (ಸೈಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜು, ಮೂಲ್ಕಿ-೨, ಶೈಲೆಂದ್ರ ಎಸ್ (ಪ್ರಸನ್ನ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆ, ಬೆಳ್ತಂಗಡಿ)-೩

೪x೪೦೦ ಮೀಟರ್ ರಿಲೇ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು, ಮೂಡುಬಿದಿರೆ-೧, ಆಳ್ವಾಸ್ ಹೋಮಿಯೋಪತಿ ಮೆಡಿಕಲ್ ಕಾಲೇಜು, ಮೂಡುಬಿದಿರೆ-೨, ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜು, ಮಂಗಳೂರು-೩

ಮಹಿಳೆಯರ ವಿಭಾಗ: ೫ಸಾವಿರ ಮೀಟರ್ ನಡಿಗೆ: ಝೈನಾ ಕಾಮರೈನ್ ಕೆ.ಜೆ. (ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮೂಡುಬಿದಿರೆ)-೧, ಆರ್ಯಾ ಎಸ್ ಕುಮಾರ್ (ಸದರ್ನ್ ಕಾಲೇಜ್ ಆಫ್ ನರ್ಸಿಂಗ್, ಬೆಂಗಳೂರು)-೨, ಮೆರಿಲ್ (ಸೈಂಟ್ ಆ್ಯನ್ಸ್ ನರ್ಸಿಂಗ್ ಕಾಲೇಜು, ಮೂಲ್ಕಿ)- ೩

೮೦೦ ಮೀ. ಓಟ: ತ್ರಿಷಾ ಜೋಸೆಫ್ (ಡಾ.ಅಂಬೇಡ್ಕರ್ ನರ್ಸಿಂಗ್ ಕಾಲೇಜು, ಬೆಂಗಳೂರು)-೧, ಸ್ನೇಹಾ ಎ ಆರ್ (ರಾಜೀವ್ ಆಯುರ್ವೇದ ವಿಜ್ಞಾನ ಮತ್ತು ಸಂಶೋದನಾ ಕಾಲೇಜು, ಹಾಸನ)-೨, ಸಿಂಚನಾ ನಿಂಬಾಯಿ (ಕೆಎಲ್‌ಇ ನರ್ಸಿಂಗ್ ಕಾಲೇಜು, ಹುಬ್ಬಳ್ಳಿ)-೩

ಡಿಸ್ಕಸ್ ಎಸೆತ: ಮೇಘನಾ ಜಿ (ಎಸ್‌ಡಿಎಂ ಆರ್ಯುವೇದ ಕಾಲೇಜು, ಉಡುಪಿ)-೧, ಹನ್ನಾ ಪಿ.ಎ.(ಕೆಎಲ್‌ಇ ನರ್ಸಿಂಗ್ ಕಾಲೇಜು, ಹುಬ್ಬಳ್ಳಿ)-೨, ರಕ್ಷಿತಾ ಕೆ.ಎನ್. (ಶ್ರೀನಿವಾಸ ನರ್ಸಿಂಗ್ ಕಾಲೇಜು, ಮಂಗಳೂರು)-೩,

ದೂರ ಜಿಗಿತ: ದುರ್ಗಾ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್, ಮೂಡುಬಿದಿರೆ)-೧, ಲಕ್ಷ್ಮೀ ವೈಷ್ಣವಿ (ಆಳ್ವಾಸ್ ಪ್ರಕೃತಿಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮೂಡುಬಿದಿರೆ)-೨, ಸೈಲ್ಯಾಜ್ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್, ಮೂಡುಬಿದಿರೆ)-೩.

೨೦೦ ಮೀಟರ್ ಓಟ: ಭೂಮಿಕಾ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್, ಮೂಡುಬಿದಿರೆ)-೧, ದುರ್ಗಾ (ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್, ಮೂಡುಬಿದಿರೆ)-೨, ಲಕ್ಷ್ಮಿ ವೈಷ್ಣವಿ (ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮೂಡುಬಿದಿರೆ)-೩

೪x೪೦೦ ಮೀಟರ್ ರಿಲೇ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್, ಮೂಡುಬಿದಿರೆ-೧, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮೂಡುಬಿದಿರೆ-೨, ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜು, ಮಂಗಳೂರು-೩.