ಸಾಹಿತ್ಯ ಕ್ಷೇತ್ರಕ್ಕೆ ಕೆ.ಎ. ಬಳಿಗೇರ ಅವರ ಸೇವೆ ಅಪಾರ: ಎಂ.ಕೆ. ಲಮಾಣಿ

| Published : Oct 17 2024, 12:04 AM IST

ಸಾಹಿತ್ಯ ಕ್ಷೇತ್ರಕ್ಕೆ ಕೆ.ಎ. ಬಳಿಗೇರ ಅವರ ಸೇವೆ ಅಪಾರ: ಎಂ.ಕೆ. ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎ. ಬಳಿಗೇರ ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಶಿರಹಟ್ಟಿಗೆ ಗೌರವದ ಸ್ಥಾನ ದೊರೆತಂತಾಗಿದೆ ಎಂದು ಎಂ.ಕೆ. ಲಮಾಣಿ ಹೇಳಿದರು.

ಶಿರಹಟ್ಟಿ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿರುವ ಹಾಗೂ ಸಾಹಿತಿಗಳಾಗಿ, ಕವಿಗಳಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಲ್ಲದೆ ಉತ್ತಮ ಸಮಾಜ ಸುಧಾರಕರಾಗಿ ಉನ್ನತವಾದ ಗೌರವ ಪಡೆದಿರುವ ಕೆ.ಎ. ಬಳಿಗೇರ ಅವರ ಸಾಹಿತ್ಯ ಕ್ಷೇತ್ರದ ಸೇವೆ ಅಪಾರ ಎಂದು ಜಿಲ್ಲಾ ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.

ಮಂಗಳವಾರ ಸಂಜೆ ಪಟ್ಟಣದ ವಿದ್ಯಾ ನಗರದಲ್ಲಿರುವ ಕೆ.ಎ. ಬಳಿಗೇರ ಅವರ ಮನೆಗೆ ಭೇಟಿ ನೀಡಿ ಪಟ್ಟಣದ ಗೆಳೆಯರ ಬಳಗ ಹಾಗೂ ಸಮಾನ ಮನಸ್ಕರ ವೇದಿಕೆ ವತಿಯಿಂದ ಸನ್ಮಾನಿಸಿ ಮಾತನಾಡಿದರು.

ಕೆ.ಎ. ಬಳಿಗೇರ ಅವರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಶಿರಹಟ್ಟಿಗೆ ಗೌರವದ ಸ್ಥಾನ ದೊರೆತಿದೆ. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷ ಸ್ಥಾನವೂ ಶಿರಹಟ್ಟಿಗೆ ದೊರೆತಿದೆ. ಮುಂದಿನ ದಿನಮಾನಗಳಲ್ಲಿ ನೂರಾರು ಅವಕಾಶಗಳು ಸಿಗುವಂತಾಗಲಿ ಎಂದರು.

ಸಾಹಿತ್ಯ ಕ್ಷೇತ್ರದಲ್ಲಿ ಸರ್ವಾಧ್ಯಕ್ಷರಾಗಿ ಹಾಗೂ ಕವಿಗಳಾಗಿ ಪುಸ್ತಕ ರಚನೆ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಕದಳಿ ಮಹಿಳಾ ವೇದಿಕೆ, ಚುಟುಕು ಸಾಹಿತ್ಯ ಪರಿಷತ್ತು, ಜಾನಪದ ಸಾಹಿತ್ಯ ಅಲ್ಲದೇ ಶರಣ ಸಾಹಿತ್ಯ ಪರಿಷತ್ತು ಸೇರಿದಂತೆ ಮನೆಗೊಂದು ಶರಣ ಸಾಹಿತ್ಯ ಪರಿಷತ್ತು ಎಂಬ ವಿಶೇಷ ವಿನೂತನ ಕಾರ್ಯಕ್ರಮ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ್ದಾರೆ.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಕಾರ್ಯದರ್ಶಿಯಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಹಾಗೂ ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಅಧ್ಯಕ್ಷರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಾಧ್ಯಕ್ಷರಾಗಿ ಸೇವೆಗೈದಿದ್ದಾರೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಮಾತನಾಡಿ, ಕನ್ನಡ ನಾಡು ಮತ್ತು ಸಂಸ್ಕೃತಿಯ ಅಭಿವೃದ್ಧಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅವರು ಅಪಾರ ಆಸಕ್ತಿ ಹೊಂದಿದ್ದಾರೆ. ಕಥೆ, ಕಾದಂಬರಿ, ಚುಟುಕು ಸಾಹಿತ್ಯದ ಮೂಲಕ ತಾಲೂಕಿನ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಗುರುತಿಸಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನ ದೊರೆತಿರುವುದು ಸಾಹಿತ್ಯಾಭಿಮಾನಿಗಳಿಗೆ ಸಂತಸ ತಂದಿದೆ ಎಂದರು.

ಸಮಾಜಕ್ಕೆ ಸರಿದಾರಿ ತೋರುವ ವಚನಗಳ ಪ್ರಸಾರ ಅಗತ್ಯವಾಗಿದ್ದು, ಬಸವತತ್ವಕ್ಕೆ ಮೀಸಲಾಗಿರುವ ಶರಣ ಸಾಹಿತ್ಯ ಪರಿಷತ್ತಿನೊಂದಿಗೆ ಎಲ್ಲರೂ ಕೈಜೋಡಿಸಬೇಕು. ಸಮಾಜದಲ್ಲಿನ ಮೌಢ್ಯ ಹೊಡೆದೊಡಿಸುವ ಭ್ರಮೆ ಬೇಡ. ಆದರೆ, ಶರಣ ಸಾಹಿತ್ಯದ ಮೂಲಕ ಸಮಾಜವನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗುವ ಕೆಲಸ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಕನ್ನಡ ಕಟ್ಟುವ ಕಾಯಕಕ್ಕೆ ಅಧಿಕಾರ ನೀಡಿದ್ದಾರೆ. ನನ್ನೆಲ್ಲ ಸಾಹಿತ್ಯಾಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶರಣ ಸಾಹಿತ್ಯ ಪರಿಷತ್ತಿನ ಕೆಲಸವನ್ನು ಸಮರ್ಪಣಾ ಭಾವದಿಂದ ಮಾಡುತ್ತೇನೆ. ಕನ್ನಡ ಸೇವೆಗೆ ಬದ್ಧರಾಗಿರುವುದಾಗಿ ತಿಳಿಸಿದರು.

ಎಚ್.ಎಂ. ದೇವಗಿರಿ, ಪರಸಪ್ಪ ಬಂತಿ, ಎಚ್.ಎಂ. ಪಲ್ಲೇದ, ಎಂ.ಎ. ಮಕಾನದಾರ, ಬಿ.ಬಿ. ಕಳಸಾಪೂರ, ಮೋಹನ್ ಮಾಂಡ್ರೆ, ಗಿರೀಶ ಚಿಂಚಲಿ, ಭರಮಪ್ಪ ಸ್ವಾಮಿ, ನೀಲಪ್ಪ ಕರಿಗಾರ, ಹನುಮಂತಪ್ಪ ವಡ್ಡರ, ಸಿದ್ದು ಹಲಸೂರ, ಸುರೇಶ ಅಕ್ಕಿ, ಎಂ.ಐ. ಬುಕಿಟಗಾರ, ಷಣ್ಮುಖ ಬಡಭೀಮಪ್ಪನವರ, ಅಕ್ಬರಸಾಬ ಯಾದಗಿರಿ, ಬದರೀನಾಥ ಮುಂಡರಗಿ, ವೀರಣ್ಣ ಅಂಗಡಿ, ಗಂಗಾಧರ ಡೊಂಬರ ಸೇರಿ ಅನೇಕರು ಇದ್ದರು.