ಅಭಿವೃದ್ದಿ ಹೆಸರಿನಲ್ಲಿ ಪರಿಸರ, ಮಣ್ಣು ಹಾಳು

| Published : Jun 07 2024, 12:33 AM IST

ಸಾರಾಂಶ

ಜಾಗತೀಕರಣದ ನಂತರ ಭಾರತದ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಪರಿಸರ ಹಾಳಾಗುತ್ತಿದೆ ಎಂದು ಬೆಂಗಳೂರಿನ ಡಿಸಿಪಿ ಸಿದ್ದರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಜಾಗತೀಕರಣದ ನಂತರ ಭಾರತದ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಪರಿಸರ ಹಾಳಾಗುತ್ತಿದೆ ಎಂದು ಬೆಂಗಳೂರಿನ ಡಿಸಿಪಿ ಸಿದ್ದರಾಜು ಹೇಳಿದರು.

ಅವರು ಬುಧವಾರ ಪಟ್ಟಣದಲ್ಲಿ ಎಲ್ಲ ಇಲಾಖೆಗಳ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.

ಮೊದಲಿನ ಪರಿಸ್ಥಿತಿ ಈಗ ಇಲ್ಲ. ಅರಣ್ಯವು ಕಡಿಮೆಯಾಗುತ್ತಿದ್ದು, ನೀರಿನ ಸೆಲೆ ಕಡಿಮೆಯಾಗುತ್ತಿದೆ. ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಗೋ ಗ್ರೀನ್, ಸೆವ್ ಗ್ರೀನ್, ಪ್ಲಾಸ್ಟಿಕ್‌ ಮುಕ್ತ ಭಾರತ ಮಾಡಿ ನಿಸರ್ಗ ನಿರ್ಮಿತವಾದ ಪರಿಸರ ರಕ್ಷಣೆ ಕೊನೆಯತನಕ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಪರಿಸರದ ಜಾಗೃತಿ ಮೂಡಿಸಿ ಮಳೆ ನೀರನ್ನು ಹಿಡಿದು ಬಳಸಿಕೊಳ್ಳುವ ಕ್ರಮಗಳಿಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭೂಮಿ ಮತ್ತು ಪರಿಸಲು ಉಳಿಸಲು ಜನಾಲೋಂದನ ರೂಪದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಆಧುನಿಕ ಕೃಷಿ ಪದ್ಧತಿಯಿಂದ ನಿರಂತರವಾಗಿ ಅರಣ್ಯಗಳ ಒತ್ತುವರಿ ನಡೆಯುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಪಟ್ಟಣಗಳು ವಿಸ್ತಾರಗೊಳ್ಳುತ್ತಿವೆ. ವಾಹನ ದಟ್ಟನೆ ಹೆಚ್ಚಾಗಿದೆ. ಅರಣ್ಯ ಉತ್ಖನದ ಮಿತಿ ಮೀರಿದ ಬಳಕೆಯಿಂದ ಅರಣ್ಯಗಳು ನಾಶವಾಗುತ್ತಿವೆ ಎಂದು ಹೇಳಿದರು.ಈ ವೇಳೆ ತಹಸೀಲ್ದಾರ್‌ ಮಂಜುಳಾ ನಾಯಕ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಸಿಪಿಐ ರತನಕುಮಾರ ಜಿರಗಿಹಾಳ, ಟಿಎಚ್‌ಒ ಅರ್ಚನಾ ಕುಲಕರ್ಣಿ, ತಾಪಂ ಇಒ ನೀಲಗಂಗಾ ಬಬಲಾದ, ಪ್ರಗತಿಪರ ರೈತ ಎಸ್.ಟಿ.ಪಾಟೀಲ,ಎಲ್.ಜಿ.ನಾದ, ಡಿ.ಎ.ಮುಜಗೊಂಡ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.