ಪಾಂಡವಪುರ : ಹಾಲಿ, ಮಾಜಿ ಶಾಸಕರಿಂದ 80 ಟನ್ ಸಾಮರ್ಥ್ಯದ ವೇ - ಬ್ರಿಡ್ಜ್ ಉದ್ಘಾಟನೆ

| Published : Aug 27 2024, 01:45 AM IST / Updated: Aug 27 2024, 11:26 AM IST

ಪಾಂಡವಪುರ : ಹಾಲಿ, ಮಾಜಿ ಶಾಸಕರಿಂದ 80 ಟನ್ ಸಾಮರ್ಥ್ಯದ ವೇ - ಬ್ರಿಡ್ಜ್ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದ ಬಳಿ ಸಂಸ್ಥೆಯಿಂದ ನೂತನವಾಗಿ ನಿರ್ಮಿಸಲಾಗಿರುವ 80 ಟನ್ ಸಾಮರ್ಥ್ಯದ ವೇ-ಬ್ರಿಡ್ಜ್ ಅನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೋಮವಾರ ಉದ್ಘಾಟಿಸಿದರು.

 ಪಾಂಡವಪುರ :  ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದ ಬಳಿ ಸಂಸ್ಥೆಯಿಂದ ನೂತನವಾಗಿ ನಿರ್ಮಿಸಲಾಗಿರುವ 80 ಟನ್ ಸಾಮರ್ಥ್ಯದ ವೇ-ಬ್ರಿಡ್ಜ್ ಅನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸೋಮವಾರ ಉದ್ಘಾಟಿಸಿದರು.

ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಟಿಎಪಿಸಿಎಂಎಸ್ ಆಡಳಿತ ಮಂಡಳಿ ಪದಾಧಿಕಾರಿಗಳು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಶ್ಲಾಘನೀಯ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.

ಸಂಸ್ಥೆಯಿಂದ ವೇ-ಬ್ರಿಡ್ಜ್ ತೆರೆಯಬೇಕು ಎಂಬುದು ರೈತರ ಬಹಳ ದಿನಗಳ ಬೇಡಿಕೆಯಾಗಿತ್ತು. ಅದರಂತೆ ಶಾಸಕರನ್ನು ಕರೆಯಿಸಿ ವೇ-ಬ್ರಿಡ್ಜ್ ಅನ್ನು ಉದ್ಘಾಟಿಸಲಾಗಿದೆ. ಇದರಿಂದ ವ್ಯಾಪಾರಸ್ಥರು ಮತ್ತು ರೈತರು ಕಬ್ಬು ಇತರೆ ಬೆಳೆಗಳನ್ನು ತೂಕ ಮಾಡಿಸಲು ಅನುಕೂಲವಾಗಿದೆ ಎಂದರು.

ಈ ವೇಳೆ ರಾಜ್ಯ ಮಾರಟ ಮಹಮಂಡಳಿ ನಿದೇರ್ಶಕ ಶಿಳನೇರೆ ಮೋಹನ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕರಾದ ಕೆ.ಎಸ್.ದಯಾನಂದ್, ರಾಮಕೃಷ್ಣೇಗೌಡ, ಶ್ರೀಕಾಂತ್, ಬೆಟ್ಟಸ್ವಾಮಿಗೌಡ, ಮುಖಂಡರಾದ ಜೆ.ಡಿ.ಎಸ್. ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್, ಎಂ.ಗಿರೀಶ್, ಎಪಿಎಂಸಿ ಸ್ವಾಮಿಗೌಡ, ಕಾರ್ಯದರ್ಶಿ ನವೀನ್ ಹಾಗೂ ಸಿಬ್ಬಂದಿ ವರ್ಗದವರು ಇತರರು ಇದ್ದರು.

ಕೆ.ಎಸ್.ಸೋಮಶೇಖರ್ ವರ್ಗಾವಣೆ

ಮದ್ದೂರು:ತಾಲೂಕು ತಹಸೀಲ್ದಾರ್ ಕೆ.ಎಸ್. ಸೋಮಶೇಖರ್ ಅವರನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಸೋಮಶೇಖರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಕಚೇರಿಯಲ್ಲಿ ಖಾಲಿ ಇದ್ದ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 123.73 ಅಡಿ

ಒಳ ಹರಿವು – 4,537 ಕ್ಯುಸೆಕ್

ಹೊರ ಹರಿವು – 4,189 ಕ್ಯುಸೆಕ್

ನೀರಿನ ಸಂಗ್ರಹ – 47.967 ಟಿಎಂಸಿ