ಸಾರಾಂಶ
ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಸಕರ ನಿಧಿಯಿಂದ ನಿರ್ಮಿಸಿದ ಗುಜರಾತ್ ಮಾದರಿ 2 ಬಾಯ್ಲಾರ್ ನ್ನು ಮಕ್ಕಳೆ ಉದ್ಘಾಟಿಸಿದ ಸಂದರ್ಭದಲ್ಲಿ ಶಾಲೆ ಪ್ರಾಶುಪಾಲರಾದ ಪೂರ್ಣಿಮಾ ಮಾತನಾಡಿ ಕಾಮಗಾರಿ ಮುಗಿದು ಇಂದು ಪ್ರಾರಂಭಿಸುತ್ತಿದ್ದೇವೆ. ಮಕ್ಕಳು ಈ ಬಿಸಿ ನೀರಿನ್ನು ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು.
- ಪೂರ್ಣಿಮ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳಿಂದಲೇ ಚಾಲನೆ
ನರಸಿಂಹರಾಜಪುರ: ಶಾಸಕರ ನಿಧಿಯಿಂದ ಗುಜರಾತ್ ಮಾದರಿ 2 ಬಾಯ್ಲಾರ್ ಗಳನ್ನುಶಾಲೆಯಲ್ಲಿ ಪ್ರಾರಂಭಿಸಲಾಗಿದ್ದು ಇದರಿಂದ ಮಕ್ಕಳಿಗೆ ಬಿಸಿ ನೀರಿನ ಸೌಲಭ್ಯ ಸಿಗಲಿದೆ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲೆ ಪೂರ್ಣಿಮ ತಿಳಿಸಿದರು.ಅಳಲಗೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಸಕರ ನಿಧಿಯಿಂದ ಗುಜರಾತ್ ಮಾದರಿ 2 ಬಾಯ್ಲಾರ್ ನ್ನು ಮಕ್ಕಳೆ ಉದ್ಘಾಟಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಿಸಿ ನೀರಿನ ಸೌಲಭ್ಯದ ಕೊರತೆ ಇರುವುದನ್ನು ಮನಗಂಡ ಶಾಸಕ ಟಿ.ಡಿ.ರಾಜೇಗೌಡರು ಬಾಯ್ಲರ್ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದ್ದರು. ಅದರಂತೆ ಹಣ ಮಂಜೂರಾಗಿ ಕಾಮಗಾರಿ ಮುಗಿದು ಇಂದು ಪ್ರಾರಂಭಿಸುತ್ತಿದ್ದೇವೆ. ಮಕ್ಕಳು ಈ ಬಿಸಿ ನೀರಿನ್ನು ಉಪಯೋಗಿಸಿಕೊಳ್ಳಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ನಿಲಯ ಪಾಲಕ ಮಹಾತ್ಮಾ ಗಾಂಧಿ, ಶಿಕ್ಷಕರಾದ ಬಾಲ ಸುಬ್ರಮಣ್ಯಂ, ಅನುಸೂಯ,ಪೂಜಾ ಜೈನ್, ಗಣೇಶಪ್ಪ ಓಲೆಕಾರ, ಸುನೀತ,ಸಹನ,ಅಕ್ಷತ ಹಾಗೂ ಶಾಲಾ ಮಕ್ಕಳು ಇದ್ದರು.