ಹನೂರಿನಲ್ಲಿ ರಂಭಾಪುರಿ ಶ್ರೀಗಳಿಂದ ರೇಣುಕಾಚಾರ್ಯ ಸಭಾಭವನ ಉದ್ಘಾಟನೆ

| Published : Jul 24 2024, 12:15 AM IST

ಹನೂರಿನಲ್ಲಿ ರಂಭಾಪುರಿ ಶ್ರೀಗಳಿಂದ ರೇಣುಕಾಚಾರ್ಯ ಸಭಾಭವನ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಮುಖಂಡ ನಿಶಾಂತ್ ಅವರ ಸೇವೆಯನ್ನು ಕ್ಷೇತ್ರದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಬಾಳೆಹೊನ್ನೂರು ಮಠದ ಶ್ರೀ ರಂಭಾಪುರಿ ಜಗದ್ಗುರು ಅಭಿಪ್ರಾಯ ವ್ಯಕ್ತಪಡಿಸಿದರು. ಹನೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾಭವನ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹನೂರು

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡವರಿಗೆ ಸದಾಕಾಲ ಸ್ಪಂದಿಸುತ್ತಿರುವ ಯುವಕರ ಆಶಾಕಿರಣ ಯುವ ಮುಖಂಡ ನಿಶಾಂತ್ ಅವರ ಸೇವೆಯನ್ನು ಕ್ಷೇತ್ರದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂದು ಬಾಳೆಹೊನ್ನೂರು ಮಠದ ಶ್ರೀ ರಂಭಾಪುರಿ ಜಗದ್ಗುರು ಅಭಿಪ್ರಾಯ ವ್ಯಕ್ತಪಡಿಸಿದರು.

ಹನೂರು ಪಟ್ಟಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಸಭಾಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಳೆದ ಐದು ವರ್ಷಗಳಿಂದ ಯುವ ಮುಖಂಡ ನಿಶಾಂತ್, ತಮ್ಮದೇ ಆದ ಪ್ರಾಮಾಣಿಕ ಸೇವೆ ಮಾಡುತ್ತಿದ್ದಾರೆ. ಅವರ ಮಹಾಮನೆಗೆ ಸಾರ್ವಜನಿಕರು ಯಾವುದೇ ಕಷ್ಟ ಹೇಳಿಕೊಂಡು ಹೋದರೆ ಸದಾ ಸ್ಪಂದಿಸುವ ಮನೋಭಾವ ಅವರಲ್ಲಿದೆ, ಕೊಡುಗೈ ದಾನಿಯಾಗಿರುವ ನಿಶಾಂತ್ ಅವರ ಸೇವೆ ಹನೂರು ಕ್ಷೇತ್ರಕ್ಕೆ ಅಗತ್ಯವಿದ್ದು, ನಿಮ್ಮ ಸೇವಾ ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಹನೂರು ಕ್ಷೇತ್ರ ವ್ಯಾಪ್ತಿಯ 20ಕ್ಕೂ ಹೆಚ್ಚು ಕಡೆ ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಲಕರಣೆಗಳು, ಹೈನುಗಾರಿಕೆ ಮಾಡುವವರಿಗೆ ಹಸುಗಳನ್ನು ನೀಡಿ ಸಹಾಯ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಶೂಗಳನ್ನು ವಿತರಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ಹತ್ತಾರು ಮಠಗಳು ದೇವಾಲಯಗಳು ಸಮುದಾಯ ಭವನಗಳನ್ನು ಅಭಿವೃದ್ಧಿಪಡಿಸಲು ಆರ್ಥಿಕ ಸಹಾಯ ಮಾಡಿದ್ದಾರೆ. ಇದಲ್ಲದೆ ಸಮುದಾಯ ಭವನಗಳಿಗೆ ನಿವೇಶನ ಇಲ್ಲದಿರುವ ಸಮುದಾಯದವರಿಗೆ ನಿವೇಶನ ಖರೀದಿ ಮಾಡಿಕೊಟ್ಟಿದ್ದಾರೆ. ಹನೂರಿನ ಸಮಗ್ರ ಅಭಿವೃದ್ಧಿಗೆ ತನ್ನದೇ ಆದ ಕನಸು ಹೊತ್ತಿಕೊಂಡು ಬಂದಿದ್ದಾರೆ. ಅವರು ಕನಸು ನನಸಾಗಲಿ ಎಂಬುದು ಕ್ಷೇತ್ರದ ಯುವಕರ ಒತ್ತಾಸೆಯೂ ಆಗಿದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ನಿಶಾಂತ್ ಅವರನ್ನು ಜೊತೆಯಲ್ಲಿ ಕೂರಿಸಿಕೊಂಡು ಪ್ರವಚನ ನೀಡಿದ್ದು ವಿಶೇಷವಾಗಿತ್ತು. ಈ ವೇಳೆ ಸಮುದಾಯದ ಹಲವಾರು ಹಿರಿಯ ಕಿರಿಯ ಮುಖಂಡರು, ಮಠಾಧಿಪತಿಗಳು ಹಾಜರಿದ್ದರು.