ಕನ್ನಡಪ್ರಭ ವಾರ್ತೆ ಮಡಿಕೇರಿ

2026- 27 ನೇ ಸಾಲಿನ ಶ್ರೀಮಂಗಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಮಂಗಳವಾರ ನಡೆಯಿತು.ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ ವಿದ್ಯಾರ್ಥಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಚೊಟ್ಟೆಯಂಡಮಾಡ ವಿಶ್ವನಾಥ್ (ಬೋಸ್) ಮಾತನಾಡಿ ವಿದ್ಯಾರ್ಥಿಗಳು ಪ್ರತಿಭೆ ಅನಾವರಣಕ್ಕೆ ವಿದ್ಯಾರ್ಥಿ ಸಂಘದ ಚಟುವಟಿಕೆ ಅಗತ್ಯವಾಗಿದೆ. ತಾವು ಈ ಮಟ್ಟಕ್ಕೆ ಏರಲು ಶ್ರೀಮಂಗಲ ವಿದ್ಯಾಸಂಸ್ಥೆ ಸಹಕಾರ ಕಾರಣ ಎಂದರು.

ಕಾರ್ಯದರ್ಶಿ ಕಾಳಿಮಾಡ ಪದ್ಮ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಬೋಡoಗಡ ಅಯ್ಯಪ್ಪ ಮಾತನಾಡಿ ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಬೇಕು ಎಂದರು.

ಆಡಳಿತ ಮಂಡಳಿಯ ಖಜಾಂಚಿ ವಿನಯ್, ನಿರ್ದೇಶಕರಾದ ತಡಿಯಾಂಗಡ ಜಯರಾಜ್, ಪಚೆಟ್ಟಂಗಡ ಕಂಬ ಕಾರ್ಯಪ್ಪ, ದೇಕಮಾಡ ನವೀನ್, ಅಜ್ಜಮಾಡ ಸಾವಿತ್ರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರತ್ನಮ್ಮ ಎಚ್. ಬಿ.ಕಾಲೇಜು ವಿಭಾಗದ ಸಂಘದ ಉಪಾಧ್ಯಕ್ಷೆ ಸುಜಾತ ಹಾಗೂ ಸಂಸ್ಥೆಯ ಉಪನ್ಯಾಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನಾಗೇಶ್ ನಿರೂಪಿಸಿದರು. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಅಕ್ಕಮ್ಮ ವಂದಿಸಿದರು.