ಪುನರುತ್ಥಾನಗೊಂಡ ಕಾಂಡಂಡ ಐನ್ ಮನೆ ಉದ್ಘಾಟನೆ

| Published : Feb 08 2025, 12:32 AM IST

ಸಾರಾಂಶ

ಸಮೀಪದ ಕೊಳಕೇರಿ ಗ್ರಾಮದ ಕಾಂಡಂಡ ಕುಟುಂಬಸ್ಥರ ಪುನರುತ್ಥಾನಗೊಂಡ ಐನ್‌ಮನೆ ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಕೊಳಕೇರಿ ಗ್ರಾಮದ ಕಾಂಡಂಡ ಕುಟುಂಬಸ್ಥರ ಪುನರುತ್ಥಾನಗೊಂಡ ಐನ್ ಮನೆ ಉದ್ಘಾಟನಾ

ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ನೂರಾರು ವರ್ಷಗಳ ಹಳೆಯ ಜೀರ್ಣಾವಸ್ಥೆಯಲ್ಲಿದ್ದ ಐನ್ ಮನೆಯನ್ನು ದಾನಿಗಳ ನೆರವಿನಿಂದ ಸುಮಾರು ಒಂದು ಕೋಟಿ ರು. ಗಳಿಂದ ನವೀಕರಿಸಲಾಗಿದ್ದು ನೂತನವಾಗಿ ಕಂಗೊಳಿಸುತ್ತಿದೆ.

ಪಟ್ಟೇದಾರ ಕಾಂಡಂಡ ಎ.ಸುಬ್ಬಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ನಶಿಸುತ್ತಿರುವ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾಗಿ ಕುಂಡ್ಯೋಳಂಡ ಎ.ಸುಬ್ಬಯ್ಯ, ಬೊಳಿಯಾಡಿರ ರಾಜ ಸೋಮಯ್ಯ, ಪುಚ್ಚಿಮಂಡ ಸಾಬು ಕುಟ್ಟಪ್ಪ, ಮಡೆಪಂಡ ಸುಂದರಿ ಕುಟ್ಟಪ್ಪ, ಬಿದ್ದಾಟಂಡ ಡಿಕ್ಕಿ ಸೋಮಯ್ಯ, ಬೊಲಿಯಾಡಿರ ಬೊಳ್ಳವ್ವ, ಕನ್ನಂಬಿರ ಚಂಗಪ್ಪ, ಬೊಟ್ಟೋಳಂಡ ಅಪ್ಪಣ್ಣ, ಕೇಟೋಳಿರ ಕುಟ್ಟಪ್ಪ, ಕಲಿಯಂಡ ಮಾದಪ್ಪ, ಅಪ್ಪಚ್ಚಿರ ಬೆಳ್ಯಪ್ಪ, ಕೊಂಬಾರನ ಚೋಮುಣಿ, ಕಾಂಡಂಡ ಜೋಯಪ್ಪ, ಕಾಂಡಂಡ ಚರ್ಮಣ , ಕಾಂಡಂಡ ಎಂ.ಬೋಪಣ್ಣ ಪಾಲ್ಗೊಂಡಿದ್ದರು.

ಈ ಸಂದರ್ಭ ಕುಟುಂಬದ ಕಾರ್ಯದರ್ಶಿ ಜಯ ಕರುಂಬಯ್ಯ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪೊನ್ನಣ್ಣ ಮತ್ತು ದಾಮೋದರ ಆಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾಂಡಂಡ ಪರಿಧಿ ಪೂವಮ್ಮ ಪ್ರಾರ್ಥಿಸಿದರು. ರೇಖಾ ಪೊನ್ನಣ್ಣ ಮತ್ತು ಪೊನ್ನಣ್ಣ ಕಾರ್ಯಕ್ರಮ ನಿರೂಪಿಸಿ ಕಾಂಡಂಡ ಜೋಯಪ್ಪ ವಂದಿಸಿದರು.