ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿ ಪಡೆಯಿರಿ: ಆರತಿ ಬಿ.

| Published : Jun 06 2024, 12:31 AM IST

ಸಾರಾಂಶ

ಆರೋಗ್ಯಕರ ಬದುಕನ್ನು ನಡೆಸಲು ಸ್ವಚ್ಛ ಹಾಗೂ ಉತ್ತಮ ಪರಿಸರದ ಅಗತ್ಯವಿದೆ ಎಂದು ತಹಸೀಲ್ದಾರ್ ಆರತಿ ಬಿ. ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಆರೋಗ್ಯಕರ ಬದುಕನ್ನು ನಡೆಸಲು ಸ್ವಚ್ಛ ಹಾಗೂ ಉತ್ತಮ ಪರಿಸರದ ಅಗತ್ಯವಿದೆ ಎಂದು ತಹಸೀಲ್ದಾರ್ ಆರತಿ ಬಿ. ಹೇಳಿದರು.

ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮರ, ಗಿಡಗಳನ್ನು ಹೆಚ್ಚಾಗಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೆಚ್ಚುತ್ತಿರುವ ಭೂಮಿಯ ತಾಪಮಾನ ಕಡಿಮೆ ಮಾಡಲು ಹಸಿರನ್ನು ಹೆಚ್ಚಿಸಿ ಶುದ್ಧ ಗಾಳಿಯನ್ನು ಪಡೆಯಲು ಪ್ರತಿಯೊಬ್ಬರು ಸಸಿ ನೆಡಬೇಕು. ಲಭ್ಯವಿರುವ ಸ್ಥಳದಲ್ಲಿ ಮರ, ಗಿಡ ನೆಟ್ಟು ಪೋಷಿಸುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯ. ವನ ಸಂಪತ್ತನ್ನು ಹೆಚ್ಚಿಸಿದಾಗ ಸ್ವಚ್ಛ ಗಾಳಿ, ನೀರು ಸಿಗುತ್ತದೆ ಎಂದು ತಿಳಿಸಿದರುವಲಯ ಅರಣ್ಯಾಧಿಕಾರಿ ಮೇಘನಾ ಮಾತನಾಡಿ, ಮಾನವ, ಪ್ರಾಣಿ, ಪಕ್ಷಿಗಳಿಗೆ ಆಹಾರ, ಗಾಳಿ, ನೀರು ಇತರೆ ಅಗತ್ಯತೆಗಳಿಗಾಗಿ ಪರಿಸರವನ್ನ ಅವಲಂಭಿಸಿದೆ ಎಂದರೆ ತಪ್ಪಾಗಲಾರದು. ಇದರೆ ಇತ್ತೀಚಿನ ದಿನಗಳಲ್ಲಿ ಮಾನವನು ಆಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಈಗ ಮಾನವನ ಈ ದುರಾಸೆಯಿಂದ ಗಾಳಿ, ನೀರು, ಮಣ್ಣು ಮುಂತಾದ ಪರಿಸರದ ಪ್ರತಿಯೊಂದು ಅಂಶವೂ ಕಲುಷಿತಗೊಂಡಿದೆ. ಮನುಷ್ಯ ತನ್ನ ಅಭಿವೃದ್ಧಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿರುವ ಕಾರಣ ಪರಿಸರ ದಿನಾಚರಣೆಯನ್ನು ಆಚರಿಸುವ ಅಗತ್ಯತೆ ಇದೆ ಎಂದರು.

ಶಿರಸ್ತೇದಾರ್ ಶ್ರೀರಂಗ ಖಾನ್, ಕಸಬಾ ಕಂದಾಯ ನಿರೀಕ್ಷಕ ಎಸ್ ಕುಮಾರ್, ತಿಮ್ಮರಾಜು, ಜಮೀರು, ಕಾವ್ಯ, ರಘುವೀರ್ ತಾಲೂಕು ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.