ಹವ್ಯಾಸಿ ಕಲಾವಿದರ ಸಂಖ್ಯೆ ಹೆಚ್ಚಳ

| Published : Jun 06 2024, 12:31 AM IST

ಸಾರಾಂಶ

ಬೂದೀಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಹುತ್ತದಲ್ಲಿ ಕೈಇಟ್ಟ ಮುತ್ತೈದೆ ನಾಟಕ ಪ್ರದರ್ಶನ

ಗದಗ: ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಹವ್ಯಾಸಿ ಕಲಾವಿದರ ಸಂಖ್ಯೆ ಹೆಚ್ಚಾಗಿದ್ದು, ರಂಗಭೂಮಿಗೆ ಸಮನಾದ ಕಲಾವಿದರು ಗ್ರಾಮದಲ್ಲಿ ಇದ್ದಾರೆ ಎಂದು ಬೂದೀಶ್ವರ ಮಠದ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.

ಅವರು ಮಂಗಳವಾರ ರಾತ್ರಿ ಬೂದೀಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಹುತ್ತದಲ್ಲಿ ಕೈಇಟ್ಟ ಮುತ್ತೈದೆ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಕೃಷಿ ಚಟುವಟಿಕೆ ಮಧ್ಯ ಗ್ರಾಮಸ್ಥರು ನಾಟಕ ಪ್ರದರ್ಶನ ಏರ್ಪಡಿಸುತ್ತಿರುವುದು ಪ್ರಶಂಸನೀಯ ಎಂದರು.

ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬೂದಪ್ಪ ಹಳ್ಳಿ, ಬಿಜೆಪಿ ತಾಲೂಕು ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಈರಗಾರ, ಗ್ರಾಪಂ ಸದಸ್ಯರಾದ ಚನ್ನ.ಪ್ಪ ಬ್ಯಾಹಟ್ಟಿ, ಬಸವರಾಜ ರೋಣದ, ಶಿವಲೀಲಾ ಮುಳಗುಂದ, ಬೂದಪ್ಪ ದೊಡ್ಡಮನಿ ಇದ್ದರು. ಬೂದಪ್ಪ ಹಾವಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಕಥಾನಾಯಕ ಜಮದಗ್ನಿ ಪಾತ್ರದಲ್ಲಿ ಕಾಣಿಸಿಕೊಂಡ ಬೂದೇಶ ರಾಮಪ್ಪ ರೋಣದ, ಸತ್ಯವಂತನ ಪಾತ್ರದಲ್ಲಿ ಕಾಣಿಸಿಕೊಂಡ ರವಿ ಈರಗಾರ ಸೇರಿದಂತೆ ಇತರ ಪಾತ್ರಧಾರಿಗಳು ವೀಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾದರು. ಶಿಕ್ಷಕರಾದ ಬೂದೇಶ ಕಪ್ಪಲಿ ಕಾರ್ಯಕ್ರಮ ನಿರೂಪಿಸಿದರು.