ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಕ್ರೀಡೆಗಳು ಹಳ್ಳಿ ಹಳ್ಳಿಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತವೆ. ಇಂಥ ಕ್ರೀಡೆಗಳು ಹೆಚ್ಚು ಆಯೋಜನೆಗೊಳ್ಳಬೇಕು ಎಂದು ಎಂಎಸ್‌ಎಲ್‌ನ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಕ್ರೀಡೆಗಳು ಹಳ್ಳಿ ಹಳ್ಳಿಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತವೆ. ಇಂಥ ಕ್ರೀಡೆಗಳು ಹೆಚ್ಚು ಆಯೋಜನೆಗೊಳ್ಳಬೇಕು ಎಂದು ಎಂಎಸ್‌ಎಲ್‌ನ ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.

ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಬಿಸಲವಾಡಿ ಯೂತ್ ಬಾಯ್ಸ್ ಸೀಸನ್ -2 ವಾಲಿಬಾಲ್ ಪಂದ್ಯಾವಾಡ್ಗೆ ಚಾಲನೆ ನೀಡಿ ಮಾತನಾಡಿದರು. ಇಂತಹ ಕ್ರೀಡೆಗಳು ಯುವಕರಲ್ಲಿ ಉತ್ಸಾಹ ಹೆಚ್ಚುತ್ತದೆ. ಜೊತೆಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ, ಜಿಲ್ಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರಲು ಸಹಕಾರಿಯಾಗುತ್ತದೆ. ಬಹಳಷ್ಟು ಗ್ರಾಮೀಣ ಪ್ರತಿಭೆಗಳೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಆ ಸಾಲಿನಲ್ಲಿ ಬಿಸಲವಾಡಿ ಗ್ರಾಮದ ಯುವಕರು ಸಹ ಸೇರಬೇಕು. ನಿರಂತರ ಪರಿಶ್ರಮ ಹಾಗೂ ಇಚ್ಚಾಶಕ್ತಿ ಇದ್ದರೆ ಗೆಲುವು ನಮ್ಮದಾಗುತ್ತದೆ ಎಂದರು.

ಯುವಕರು ಕ್ರೀಡೆಗೆ ಅದ್ಯತೆ ನೀಡಬೇಕು. ಓದಿನೊಂದಿಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಅದರಲ್ಲಿಯೇ ಗೆಲುವು ಸಾಧಿಸಿದರೆ, ಉದ್ಯೊಗ ಮತ್ತು ಬದುಕು ಕಟ್ಟಿಕೊಳ್ಳಲು ಅವಕಾಶವಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕ್ರೀಡೆ ಪಟುಗಳಿಗೆ ವಿಶೇಷ ಕೋಟಾವನ್ನು ನೀಡಲಾಗುತ್ತದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಬ್ಯಾಂಕಾಕ್‌ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ಸ್ ಕಮ್ಯೂನಿಟ್ ಆಫ್ ಇಂಡಿಯಾದ ಅಂತಾರಾಷ್ಟ್ರೀಯ ಮಟ್ಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಉತ್ತಮ ಪ್ರರ್ದಶನ ನೀಡಿ, ದ್ವಿತೀಯ ಸ್ಥಾನ ಪಡೆದ ಬಿಸಲವಾಡಿ ಗ್ರಾಮದ ಮನು ಅವರನ್ನು ಸನ್ಮಾನಿಸಿದರು.

ತಾ.ಪಂ.ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಿಸಲವಾಡಿ ರವಿ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಸಿ. ಮಹದೇವಪ್ಪ, ರಮ್ಯ ನಾಗರಾಜು, ಸದಸ್ಯರಾದ ಕುಮಾರ್, ನಾಗರತ್ನಮ್ಮ, ನಾರಾಯಣನಾಯಕ, ಗೀತಾ ಚನ್ನಬಸಪ್ಪ, ನಾಗಮ್ಮ, ಶಿವಣ್ಣ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಶಿವಸ್ವಾಮಿ, ಸದಸ್ಯರಾದ ಮಂಜುನಾಥ್, ಉಮೇಶ್, ಶಿವಕುಮಾರ್, ಸಿದ್ದಶೆಟ್ಟಿ, ಬಸವಣ್ಣ, ನಾಗರಾಜು, ಮಾಜಿ ಅಧ್ಯಕ್ಷರಾದ ಸಿದ್ದನಾಯಕ, ಶಿವಕುಮಾರ್, ಮಹದೇವಯ್ಯ, ಮುಖಂಡರಾದ ಕೆ.ಜಿ. ಬಸವರಾಜು, ಎಂ.ರಾಜು, ಅನಿಲ್, ರವಿಕುಮಾರ್, ಗಿರೀಶ್, ಉಪಸ್ಥಿತರಿದ್ದರು.